ನೆತ್ತರಕೆರೆ:ಸೇವಾಭಾರತಿ ಬಂಟ್ವಾಳ ತಾಲೂಕು ನವೋದಯ ಮಿತ್ರ ಕಲಾವೃಂದ ರಿ. ನೇತ್ರಾವತಿ ಮಾತೃಮಂಡಳಿ ನೆತ್ತರಕೆರೆ ಕಳ್ಳಿಗೆ ಇವರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಜೂ. 14ರಂದು ಭಾನುವಾರ ನೆತ್ತರಕೆರೆಯಲ್ಲಿ ನಡೆಯಿತು.
ಸಾಮಾಜಿಕ ಕಾರ್ಯಕರ್ತರಾದ ವಿನೋದ್ ತುಂಬೆ , ತುಂಬೆ ಗ್ರಾಮ ಪಂಚಾಯತ್ ಸಧಸ್ಯರಾದ ಸಂಗೀತ ದಂಪತಿಗಳು ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವ ರಕ್ತದಾನಿಗಳ ದಿನದಂದು ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 77 ಜನ ಈ ಸೇವಾಕಾರ್ಯದಲ್ಲಿ ರಕ್ತದಾನ ವನ್ನು ಮಾಡಿದರು. ಸಂಘದ ಅಧ್ಯಕ್ಷರಾದ ಸುರೇಶ್ ಭಂಡಾರಿ ಅರ್ಬಿ, ಗೌರವ ಅಧ್ಯಕ್ಷರಾದ ಪಿ ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷರಾದ ಮೋಹನ್ ಕುಲಾಲ್, ಸಂಚಾಲಕರಾದ ದಾಮೋದರ ಏನ್, ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷರಾದ ಜಗಧೀಶ್ ಏನ್, ನೆತ್ತರಕೆರೆ ಗ್ರಾಮವಿಕಾಸದ ಸಂಚಾಲಕರಾದ ಸಂತೋಷ್ ಕುಮಾರ್, ಹಾಗೂ ಸಂಘದ ಹಾಗೂ ಮಾತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು