ಬಂಟ್ವಾಳ : ಮಹಿಳೆಯೊಬ್ಬರು ಪಾಣೆಮಂಗಳೂರು ನೂತನ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯ ಮುಳುಗುತಜ್ಞರು, ಆಗ್ನಿಶಾಮಕದಳದ ಸಿಬ್ಬಂದಿಗಳು ಮಹಿಳೆಗಾಗಿ ನದಿಯಲ್ಲಿ ಹುಡುಕಾಟ ಮುಂದುವರಿದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ನಿವಾಸಿ ಗೋಪಿ ಪೂಜಾರ್ತಿ ಸದ್ಯ ನಾಪತ್ತೆಯಾಗಿರುವ ಮಧ್ಯವಯಸ್ಸಿನ ಮಹಿಳೆಯಾಗಿದ್ದು,ಇವರು ಅನಾರೋಗ್ಯದಿಂದ ಬಳಲುತ್ತಿದ್ದು,ಮಾನಸಿಕವಾಗಿ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಆ ಮಹಿಳೆಯು ಅಕ್ಕನ ಮನೆ ಬಿ.ಸಿ.ರೋಡಿನ ಚಿಕ್ಕಯ್ಯಮಠ ಎಂಬಲ್ಲಿದ್ದು, ಕೆಲದಿನಗಳಿಂದ ಇವರು ಅಕ್ಕನ ಮನೆಯಲ್ಲಿ ತಂಗಿದ್ದರು.ಶುಕ್ರವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಗೋಪಿಪೂಜಾರ್ತಿ ಶನಿವಾರ ಮುಂಜಾನೆ 5 ಗಂಟೆಯ ವೇಳೆ ಮನೆಯಿಂದ ಕಾಣೆಯಾಗಿದ್ದಾರೆ.ಮನೆಯವರು ಹುಡುಕಾಟ ನಡೆಸಿದಾಗ ಪಾಣೆಮಂಗಳೂರು ನೂತನ ಸೇತುವೆಯ ಮೇಲೆ ಗೋಪಿ ಪೂಜಾರ್ತಿ ಬಳಸುತ್ತಿದ್ದ ಶಾಲು ಹಾಗೂ ಕೈಯಲ್ಲಿದ್ದ ಬಳೆ ಬಿದ್ದಿದೆ. ಹಾಗಾಗಿ ಅವರು ನೇತ್ರಾವತಿ ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿರಬಹುದು ಎಂಬ ಶಂಕೆಗೆ ಪುಷ್ಠಿ ನೀಡಿದೆ.ಅವರು ಈ ಹಿಂದೆಯೂ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
ಡೆತ್ ಸ್ಪಾಟ್ :
ಮಂಗಳೂರು ಜಪ್ಪಿನಮೊಗರು ಬಳಿರುವ ನೇತ್ರಾವತಿ ಸೇತುವೆ ಡೆತ ಸ್ಪಾಟ್ ಆಗಿ ರಾಜ್ಯಾದಾದ್ಯಂತ ಸುದ್ದಿಯಾಗಿದ್ದು,ಇದೀಗ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಕೂಡ ಡೆತ್ ಸ್ಪಾಟ್ ಆಗಿ ಗುರುತಿಸಲ್ಪಟ್ಟಿದೆ. ಜಪ್ಪಿನಮೊಗರಿನಲ್ಲು ನೇತ್ರಾವತಿ ನದಿಗೆ ಹಳೇ ಮತ್ತು ಹೊಸ ಸೇತುವೆಯಿದ್ದು,ಪಾಣೆಮಂಗಳೂರಿನಲ್ಲು ನೇತ್ರಾವತಿ ನದಿಗೆ ಬ್ರಿಟಿಷ್ ಕಾಲದ ಹಳೇ ಮತ್ತು ಇನ್ನೊಂದು ಬದಿಯಲ್ಲಿ ಹೊಸ ಸೇತುವೆಯಿದೆ. ಇಲ್ಲು ಕೂಡ ಎರಡು ಸೇತುವೆಯಿಂದಲು ನೇತ್ರಾವತಿಗೆ ದುಮುಕಿ ಆತ್ಮಹತ್ಯೆ ಗೈಯುವ ಕೃತ್ಯಗಳು ಹೆಚ್ಚಾಗತೊಡಗಿದೆ.ಕಳೆದ ಜನವರಿ ತಿಂಗಳಿನಿಂದೀಚೆಗೆ ಪಾಣೆಮಂಗಳೂರಿನ ಹೊಸ ಹೊಸ ಸೇತುವೆಯಿಂದ ಹಾರಿ ಆತ್ಮಹತ್ಯಗೈದ ಎರಡ್ಮೂರು ಪ್ರಕರಣಗಳು ದಾಖಲಾಗಿದೆ.ಕಳೆದ ವರ್ಷ ಮಡಿಕೇರಿಯ ಕುಟುಂಬವೊಂದು ಕಾರಿನಲ್ಲಿ ಅಗಮಿಸಿ ಪಾಣೆಮಂಗಳೂರು ನೇತ್ರಾವತಿ ನದಿಗೆ ದುಮುಕಿ ಆತ್ಮಹತ್ಯೆ ಮಾಡಿತ್ತು.ಈ ಸಂದರ್ಭ ಅವರ ಸಾಕು ನಾಯಿ ಬಚಾವಾಗಿತ್ತು.ಇದೀಗ ಪಾಣೆಮಂಗಳೂರು ಸೇತುವೆ ಕೂಡ ಡೆತ ಸ್ಪಾಟ್ ಪರಿಣಮಿಸಿದ್ದು,ಇಲ್ಲಿ ಕೂಡ ತಡೆಬೇಲಿ ನಿರ್ಮಿಸಬೇಕೆಂಬ ಕೂಗು ಸ್ಥಳೀಯರಿಂದ ಕೇಳಿಬಂದಿದೆ.