ಬಂಟ್ವಾಳ : ಕಲ್ಲಡ್ಕ ನಿವಾಸಿ ಮಹಿಳೆಯೊಬ್ಬರು ತಮ್ಮ ಪರ್ಸನ್ನು ಮೆಲ್ಕಾರ್-ಬೋಳಂಗಡಿ ಮಧ್ಯೆ ಕಳೆದುಕೊಂಡಿದ್ದು, ಅದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಮಹಿಳೆ ಸಿಬಂದಿಯೊಬ್ಬರಿಗೆ ಸಿಕ್ಕಿದ್ದು, ಗುರುವಾರ ಅದನ್ನು ಠಾಣೆಯಲ್ಲಿ ವಾರಿಸುದಾರ ಮಹಿಳೆಗೆ ಹಸ್ತಾಂತರಿಸಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಸಿಬಂದಿ ವಿದ್ಯಾ ಅವರು ಜು. ೧೫ರ ಸಂಜೆ ಸಂಚಾರಿ ಠಾಣೆಗೆ ತೆರಳುತ್ತಿದ್ದಾಗ ಅವರಿಗೆ ಮೆಲ್ಕಾರ್ ಸಮೀಪ ಪರ್ಸ್ ವೊಂದು ಸಿಕ್ಕಿದ್ದು, ಅದನ್ನು ಠಾಣೆಗೆ ತಂದು ನೋಡಿದಾಗ ಸುಮಾರು ೧೫ ಸಾವಿರದಷ್ಟು ಹಣ ಇರುವುದು ಗಮನಕ್ಕೆ ಬರುತ್ತದೆ. ತಕ್ಷಣ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಮಾಧ್ಯಮಗಳಲ್ಲಿ ಆ ಸುದ್ದಿ ಪ್ರಕಟಗೊಳ್ಳುತ್ತದೆ.
ಕಲ್ಲಡ್ಕ ನಿವಾಸಿ, ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ಗೀತಾ ಕೊಟ್ಟಾರಿ ಅವರಿಗೆ ಸೇರಿದ ಪರ್ಸ್ ಅದಾಗಿದ್ದು, ಅವರ ಸಂಬಂಧಿಕ ಸುಜೀತ್ ಕೊಟ್ಟಾರಿ ಅವರ ಮೂಲಕ ಪರ್ಸ್ ಠಾಣೆಯಲ್ಲಿ ಇರುವುದು ಗೊತ್ತಾಗುತ್ತದೆ. ಗುರುವಾರ ಗೀತಾ ಅವರು ಪೊಲೀಸ್ ಸಿಬಂದಿ ಗೀತಾ ಅವರಿಂದ ಪರ್ಸ್ ಸ್ವೀಕರಿಸಿ ಕೃತಜ್ಞತೆ ತಿಳಿಸಿದರು