ಬಂಟ್ವಾಳ : ಕೊರೋನ ಸೋಂಕಿಗೆ ಬಂಟ್ವಾಳ ತಾ.ನ ಮಂಚಿ ಸಮೀಪದ ಕುಕ್ಕಾಜೆಯ ೪೭ ವರ್ಷದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ, ಅವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿದೆ.

ರಕ್ತದೊತ್ತಡ, ಮಧುಮೇಹ ಸಹಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಚಿ-ಕುಕ್ಕಾಜೆ ಮಸೀದಿಯ ಧಪನ ಭೂಮಿಯಲ್ಲಿ ಮೃತ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ. ಅವರಿಗೆ ಸೋಂಕು ಹೇಗೆ ತಗಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ತಾಲೂಕಿನಲ್ಲಿ 18 ಗುರುವಾರ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 18 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟದೆ ಎಂದು ತಿಳಿದು ಬಂದಿದ್ದು ,ಇದರಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕೈಕುಂಜ,ಶಾಂತಿಯಂಗಡಿ,ತಲಪಾಡಿ ಹಾಗೂ‌ ಪಾಣೆಮಂಗಳೂರು ಸಮೀಪದ ಬೋಗೋಡಿ ಎಂಬಲ್ಲಿ ಕೊರೋನ ಸೋಂಕು ದೃಢ ಪಟ್ಟಿರುವ ಬಗ್ಗೆ ತಿಳಿದು ಬಂದಿದೆ

By suddi9

Leave a Reply

Your email address will not be published. Required fields are marked *