ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಡಳಿತದ ಕೋವಿಡ್-19 ನಿರ್ವಹಣೆಗೆ ಪೂರಕವಾಗಿ ಅಗತ್ಯವಿರುವ ಆಂಬುಲೆನ್ಸ್ ಖರೀದಿಸಲು 14.60 ಲಕ್ಷದ ಚೆಕ್ ಅನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶೈಲಜಾ ಎ ಕೋಟೆ , ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚಂಟ್ ಅಸೋಶಿಯೇಶನ್ ಜಿಲ್ಲಾಧ್ಯಕ್ಷ ಎಂ. ಗಣೇಶ್ ಶೆಟ್ಟಿ, ಮಂಗಳೂರು ತಾಲೂಕು ಅಧ್ಯಕ್ಷ ಕೆ ಟಿ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಿ ಎಸ್ ಅಪ್ಪಚ್ಚು, ಕೋಶಾಧಿಕಾರಿ ಚಂದ್ರನಾಥ ಅತ್ತಾವರ, ಜೊತೆ ಕಾರ್ಯದರ್ಶಿ ಓಂ ಪ್ರಸಾದ್ ಉಪಸ್ಥಿತರಿದ್ದರು.