ಬಂಟ್ವಾಳ: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ ಡೌನ್ ವಿಧಿಸಿದ್ದರೂ ರವಿವಾರದ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಹೀಗಾಗಿ ಮುಂಜಾನೆಯಿಂದಲೇ ಬಂಟ್ವಾಳ ತಾಲೂಕು ಸಂಪೂರ್ಣ ಸ್ಥಬ್ದವಾಗಿತ್ತು. ಕಳೆದ ಮೂರು ದಿನಗಳಲ್ಲಿ ಲಾಕ್ಡೌನ್ ಇದ್ದರೂ ಬೆಳಗ್ಗೆ ೧೧ರ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದು, ಆದರೆ ರವಿವಾರ ಅಗತ್ಯ ವಸ್ತುಗಳ ಅಂಗಡಿಗಳು ಕೂಡ ಮುಚ್ಚಿದ್ದವು. ಬೆಳಗ್ಗಿನ ಹೊತ್ತು ಹಾಲು, ಪೇಪರ್ ಮಾರಾಟ ಹೊರತು ಉಳಿದಂತೆ ಎಲ್ಲಾ ವ್ಯವಹಾರಗಳು ಬಂದ್ ಆಗಿದ್ದವು.

ಅಗತ್ಯ ಸೇವೆಗಳಾದ ಕೆಲವೊಂದು ಮೆಡಿಕಲ್ ಮಳಿಗೆಗಳು, ಆಸ್ಪತ್ರೆಗಳು ಹಾಗೂ ಪೆಟ್ರೋಲ್ ಬಂಕ್ಗಳು ತೆರೆದಿದ್ದವು. ತಾಲೂಕಿನ ಹೆದ್ದಾರಿಗಳಲ್ಲೂ ವಾಹನ ಸಂಚಾರವೂ ಇರಲಿಲ್ಲ. ದೂರದೂರಿಗೆ ಸಾಗುವ ಲಾರಿಗಳು ಮಾತ್ರ ಹೆದ್ದಾರಿಯಲ್ಲಿ ಚಲಿಸುತ್ತಿದ್ದವು. ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿತ್ತು.ಶನಿವಾರದಂದು11 ಗಂಟೆಯ ಬಳಿಕ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ರವಿವಾರ ತೆರೆಯಲಿಲ್ಲ, ವಾಹನ ಸಂಚಾರವು ಸಂಪೂರ್ಣ ಸ್ಥಗಿತಗೊಂಡಿದ್ದವು. ಬಿ.ಸಿ.ರೋಡ್,ಬಂಟ್ವಾಳ,ಮೆಲ್ಕಾರ್,
ಕಳೆದ ಗುರುವಾರದಿಂದಲಾಕ್ ಡೌನ್ ಇದ್ದರೂ ಬೆಳಿಗ್ಗೆ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಭಾನುವಾರ ಅದಕ್ಕೆ ಅನುಮತಿ ನೀಡಲಾಗಿಲ್ಲ. ಬಂಟ್ವಾಳ ತಾ.ನಲ್ಲು ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲುಏರಿಕೆ ಕಾಣುತ್ತಿದೆ.
18 ಪಾಸಿಟಿವ್ ಪತ್ತೆ:
ಭಾನುವಾರವು ಬಂಟ್ವಾಳ ತಾಲೂಕಿನಲ್ಲಿ ಒಟ್ಟು 18 ಫಾಸಿಟಿವ್ ಪ್ರಕರಣ ದಾಖಲಾಗಿದೆ.ಈ ಪೈಕಿ ಪುರಸಭಾ ವ್ಯಾಪ್ತಿಯ ಕಸ್ಬಾ,ಬಿ.ಮೂಡ,ಪಾಣೆಮಂಗಳೂರು ಸೇರಿದಂತೆ ಐವರಲ್ಲಿ ಪಾಸಿಟಿವ್ ಕೇಸ್ ಕಾಣಿಸಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 5, ವೀರಕಂಭ ಗ್ರಾಮದಲ್ಲಿ 3, ಗೋಳ್ತಮಜಲು ಗ್ರಾಮದಲ್ಲಿ 2, ಸಜೀಪ ಮುನ್ನೂರು ಗ್ರಾಮ 1, ಫಜೀರು 1, ತುಂಬೆ 2, ಪುಣಚ 1, ಪುದು 2 ಸೂರಗುಡ್ಡೆ 1 ಪ್ರಕರಣ ವರದಿಯಾಗಿದೆ.