ಬಂಟ್ವಾಳ: ಕಳೆದ ರಾತ್ರಿಯಿಂದ ಬಂಟ್ವಾಳ ತಾಲೂಕಿನಿಂದ ಎಡೆಬಿಡದೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರಪ್ರಮಾಣದ ಹಾನಿಯು ಸಂಭವಿಸಿದೆ. ಗುರುವಾರ ರಾತ್ರಿಯಿಂದ ಶುರುವಾದ ಮಳೆ ಶುಕ್ರವಾರ ಮಧ್ತಾಹ್ನದವರೆಗೂ ಎಡೆಬಿಡದೆ ಸುರಿದ್ದಿದ್ದು,ಸಂಜೆಯವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಯಿತು.ಮಳೆಯಿಂದಾಗಿ ತಾಲೂಕಿನ ವಿವಿದೆಡೆಯಲ್ಲಿ ಗುಡ್ಡ ಜರಿದಿರುವುದು,ತೋಟ,ಗದ್ದೆಗೂ ನೀರು ನುಗ್ಗಿ ಹಾನಿಯಾಗಿರುವುದಲ್ಲದೆ ಕೆಲವೆಡೆ ಮನೆಗಳಿಗೂ ಹಾನಿಯಾದ ಬಗ್ಗೆ ವರದಿಯಾಗಿದೆ.

IMG-20200911-WA0074ವಿಟ್ಲ ಕಸ್ಬಾ ಗ್ರಾಮದ ಸೇರಾಜೆ ಎಂಬಲ್ಲಿ ಫೆಲಿಕ್ಸ್ ಎಂಬವರ ಪಕ್ಕಾ ಮನೆಗೆ ಹಾನಿಯಾಗಿದ್ದು ಸುಮಾರು 50 ಸಾ.ರೂ,ಸಜೀಪಮುನ್ನೂರುಗ್ರಾಮದ ನಂದಾವರದಲ್ಲಿ ಮಹಮ್ಮದ್ ಆರಿಫ್ ಎಂಬವರ ಕಚ್ಚಾಮನೆಗೆ ಹಾನಿಯಾಗಿ 50 ಸಾ.ರೂ.,ಸಜೀಪನಡುಗ್ರಾಮದ ಬೊಳಮೆ ಎಂಬಲ್ಲಿ ಉಮಾವತಿ ಎಂಬವರ ಮನೆಗೆ ಪೂರ್ಣವಾಗಿ ಹಾನಿಯಾಗಿದ್ದು,ಸುಮಾರು 2 ಲಕ್ಷ ರೂ.ನಷ್ಟವಾಗಿದೆ ಎಂದು ತಾಲೂಕು ಕಚೇರಿ ಯ ಪ್ರಕಟಣೆ ತಿಳಿಸಿದೆ.ಹಾಗೆಯೇ ಬಾಳೆಪುಣಿ ಗ್ರಾಮದಕಣಂತೂರು ಎಂಬಲ್ಲಿ ಗುಡ್ಡ ಜರಿದು ನೆರೆ ನೀರು ಬಾಬುಗಟ್ಟಿ ಅವರ ಮನೆ ಹಾಗೂ ಅಡಕೆ ತೋಟಕ್ಕೆ ನುಗ್ಗಿ 0.25 ಹೆಕ್ಟರ್  ಮತ್ತು ಸಜೀಪಪಡು  ಗ್ರಾಮದ ಸೋಮನಾಥ ಮೂಲ್ಯ ಅವರ ಭತ್ತದ ಗದ್ದೆಗೆ ತೋಡಿನ ನೀರು ಹರಿದು 0.25 ಹೆಕ್ಟರ್ ನಷ್ಟು ಹಾನಿಯಾಗಿದೆ. ನರಿಕೊಂಬುಗ್ರಾಮದ ಹಮೀದ್ ಎಂಬವರ ಮನೆಮೇಲೆ ಪಕ್ಕದ ಬರೆ ಕುಸಿದು ಹಾನಿಯಾಗಿದೆ ಎಂದು ತಾಲೂಕುಕಚೇರಿ ಪ್ರಕಟಣೆ ತಿಳಿಸಿದೆ. ನೆಲಕ್ಕುರುಳಿದ ವಿದ್ಯತ್ ಕಂಬ :  ಆದೇರೀತಿ ಗುರುವಾರ ಮಧ್ಯರಾತ್ರಿ ಮೆಲ್ಕಾರ್ ಬಳಿ 4 ವಿದ್ಯುತ್ ಕಂಬಗಳು ಧರಾಶಾಹೊಯಾಗಿದ್ದುಲ್ಲದೆ ತಂತಿಗಳು ಕಡಿದು ಬಿದ್ದಿವೆ ಪರಿಣಾಮ ಮೆಸ್ಕಾಂ ಇಲಾಖೆಗೆ ಅಪಾರ ಪ್ರಮಾಣದ ನಷ್ಟ ವುಂಟಾಗಿದೆ.ಮೆಲ್ಕಾರ್ -ಮುಡಿಪು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕು ಆಡಚಣೆಯಾಯಿತು.ಬಳಿಕ ರಸ್ತೆಯ ಇನ್ನೊಂದು ಬದಿಯಿಂದ ವಾಹನಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.ನೇತ್ರಾವತಿ ನದಿಯಲ್ಲು ನೀರಿನ ಹರಿವು ಹೆಚ್ಚಾಗಿದ್ದು,ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾಜ್ಯ ಸರಕಾರ  23 ಜಿಲ್ಲೆ,130 ತಾಲೂಕನ್ನು ಗುರುತಿಸಿ ಅತಿವೃಷ್ಠಿ, ಪ್ರವಾಹಪೀಡಿತ ಪ್ರದೇಶದಲ್ಲಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಸಹಿತ ಬೆಳ್ತಂಗಡಿ,ಕಡಬ,ಮಂಗಳೂರು,ಪುತ್ತೂರು ಸೇರಿದೆ.

By suddi9

Leave a Reply

Your email address will not be published. Required fields are marked *