ಬಂಟ್ವಾಳ:ಎರಡು ತುಳು,ಒಂದು ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದ ಬಂಟ್ವಾಳ ಭಂಡಾರಿಹಿತ್ಲು ನಿವಾಸಿ ಸುರೇಂದ್ರ ಭಂಡಾರಿ (39)ಯನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಭಂಡಾರಿಬೆಟ್ಟುವಿನಲ್ಲಿರುವ ವಸತಿ ಸಂಕೀರ್ಣದಲ್ಲಿ ಬರ್ಬರ ಹತ್ಯೆಗೈಯಲಾಗಿದೆ.
ಬುಧವಾರ ಮಧ್ಯಾಹ್ನದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದ್ದು,ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿ,ವಸತಿ ಸಂಕೀರ್ಣದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದ ಪೂಟೇಜ್ ಪಡೆದು ಹಂತಕರ ಪತ್ತೆಕಾರ್ಯ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ ಈ ಕೃತ್ಯ ನಡೆದಿರಬೇಕಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.ಸಿಸಿ ಕ್ಯಾಮರಾದಲ್ಲಿ ದಾಖಲಾದ ಪ್ರಕಾರ ಇಬ್ಬರು ಅಗಮಿಸಿ ಕೃತ್ಯನಡೆಸಿರುವ ಅನುಮಾನ ವ್ಯಕ್ತವಾಗಿದೆ.ರಾತ್ರಿ 9.30 ರ ವೇಳೆಗೆ ಪ್ರತಿನಿತ್ಯದಂತ ಅತನ ಆಪ್ತಸ್ನೇಹಿತ ಹಾಗೂ ಇನ್ನೋರ್ವ ಊಟ ಕೊಟ್ಟು ತೆರಳಿದ್ದರೆಂದು ತಿಳಿದುಬಂದಿದೆ.
ಬೆಳಿಗ್ಗೆ 9.30 ರ ಅಂದಾಜಿಗೆ ವಸತಿ ಸಂಕೀರ್ಣ ದಿಂದ ತೆರಳುತ್ತಿದ್ದು, ಬುಧವಾರ ಬೆಳಗ್ಗಿನಿಂದ ಸುರೇಂದ್ರನ ಸ್ನೇಹಿತರು ಕರೆ ಮಾಡಿದ್ದರು.ಆದರೆ ಈತ ಕರೆ ಸ್ವೀಕರಿಸುತ್ತಿರಲಿಲ್ಲ ಹಾಗೆಯೇ ಈತನ ಆಪ್ತ ಸ್ನೇಹಿತನಿಗೆ ಕೆಲವರು ಕರೆ ಮಾಡಿದಾಗ ಸ್ವೀಚ್ ಆಫ್ ಬಂದಿದ್ದು,ಇದರಿಂದ ಅನುಮಾನಗೊಂಡ ಕೆಲವರು ಅತನ ಜೊತೆಗಿರುವ ಸ್ನೇಹಿತರಿಗೆ ತಿಳಿಸಲಾಗಿದ್ದು,ಅವರು ಮಧ್ಯಾಹ್ನದ ಹೊತ್ತಿಗೆ ವಸತಿ ಸಂಕೀರ್ಣಕ್ಕೆ ಬಂದು ನೋಡಿದಾಗ ಮನೆಯ ಹೊರಭಾಗದಲ್ಲಿ ಬಾಗಿಲಿಗೆ ಬೀಗ ಹಾಕಲಾಗಿತ್ತು. ಕಿಟಕಿಯ ಮೂಲಕ ನೋಡಿದಾಗ ಸೋಫದ ಮೇಲೆ ರಕ್ತದ ಮಡುವಿನಲ್ಲಿ ಸುರೇಂದ್ರನ ಮೃತದೇಹ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಪೊಲೀಸರಿಗೆ ಮೊಹಿತಿ ನೀಡಲಾಗಿದ್ದು,ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲ ಬೀಗ ಮುರಿದು ನೋಡಿದಾಗ ಸುರೇಂದ್ರನ ಹೊಟ್ಟೆ,ತಲೆ ಹಾಗೂ ಕೈಯ ಭಾಗವನ್ನು ತಲವಾರಿನಿಂದ ಬರ್ಬರವಾಗಿ ಕಡಿಯಲಾಗಿದ್ದು, ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾನೆ. 
ಮೂಲತ:ಬಂಟ್ವಾಳ ಭಂಡಾರಿಹಿತ್ಲು ನಿವಾಸಿಯಾಗಿರುವ ಸುರೇಂದ್ರ ಬಂಟ್ವಾಳ್ ಛಾಯಾಗ್ರಾಹಕನಾಗಿ ಮೂಲವೃತ್ತಿಯನ್ನಾಗಿ ನಡೆಸುತ್ತಿದ್ದ,ಕೆಲ ಸಮಯ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಲ್ಪಟ್ಟಿದ್ದ. ಕೊಲೆ ,ಕೊಲೆಯತ್ನ ಸಹಿತ ಹಲವು ಪ್ರಕರಣ ಈತನ ಮೇಲಿದ್ದು,ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿಯು ಗುರುತಿಸಿದ್ದ.
ಕಳೆದ ಎರಡು ವರ್ಷಗಳಿಂದ ಸಂಘಟನೆಯ ಚಟುವಟಿಕೆಯಿಂದ ದೂರ ಇದ್ದು, ಹಣಕಾಸು ವ್ಯವಹಾರವನ್ನೂ ಮಾಡುತ್ತಿದ್ದ. ಅಮ್ಟಾಡಿ ಗ್ರಾಮದ ಕಲಾಯಿ ಎಂಬಲ್ಲಿ ಮನೆ ನಿರ್ಮಿಸಿ ಅಲ್ಲಿ ಅತನ ತಾಯಿ ಮತ್ತ ಸಹೋದರ ವಾಸಿಸುತ್ತಿದ್ದ ,ಸುರೇಂದ್ರ ಮಾತ್ರ ರಾ.ಹೆ.ಪಕ್ಕದ ಭಂಡಾರಿಬೆಟ್ಟುವಿನ ವತ್ಸಿ ವಸತಿ ಸಂಕೀರ್ಣ ದ ಐದನೇ ಮಹಡಿಯಲ್ಲಿ ರೂಂ ಪಡೆದು ಏಕಾಂಗಿಯಾಗಿ ವಾಸ್ತವ್ಯವಿದ್ದ. ಹಂತಕರು ಕೃತ್ಯದ ಬಳಿಕ ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿರುವುದರಿಂದ ಪೂರ್ವಸಂಚು ನಡೆಸಿಯೇ ಈ ಕೊಲೆ ನಡೆಸಿರುವ ಬಗ್ಗೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಅತನ ಮೈಮೇಲಿದ್ದ ಚಿನ್ನದ ಸರ ಹಾಗೆಯೇ ಕತ್ತಿನಲ್ಲಿದ್ದು, ಪಸ್೯,ಕಾರಿನ ಕೀ ಅತ ಧರಿಸಿದ್ದ ಪ್ಯಾಂಟ್ ನ ಕಿಸೆಯಲ್ಲೆ ಇತ್ತು. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಂದರ್ಭದಲ್ಲಿ ಎರಡು ಬಾರಿ ದುಷ್ಕರ್ಮಿಗಳ ದಾಳಿಯಿಂದ ಪಾರಾಗಿದ್ದ
ಚಲನಚಿತ್ರ: ‘ಚಾಲಿಪೋಲಿ’,’ದಬಕ್ ದಬ ಐಸಾ’ ಎಂಬ ಎರಡು ತುಳು ಹಾಗೂ ‘ಸವರ್ಣದೀರ್ಘಸಂಧಿ’ ಕನ್ನಡ ಚಲನಚಿತ್ರದಲ್ಲಿ ನಟೆಸಿದ್ದ.
ಘಟನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಅಪರಾಹ್ನದ ವೇಳೆ ರಾ.ಹೆ. ಇಕ್ಕೆಲಗಳಲ್ಲೂ ಜನ ಜಮಾಯಿಸಿದ್ದರು. ಅಪಾರ್ಟ್ ಮೆಂಟ್ ಸುತ್ತಲೂ ಇರುವ ಜನಸಂದಣಿಯನ್ನು ಬಳಿಕ ಪೊಲೀಸರು ನಿಯಂತ್ರಿಸಿದರು. ಡಿವೈಎಸ್ಪಿ ವೆಲಂಟೈನ್ ಡಿಸೋಜ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್ಸೈ ಪ್ರಸನ್ನ, ರಾಜೇಶ್, ಕಲೈಮಾರ್, ಸಂಜೀವ ಮತ್ತು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಅಗಮಿಸಿ ಜನರನ್ನು ನಿಯಂತ್ರಿಸಿದರು. ಬಂಟ್ವಾಳ: ಹಲವು ತುಳು ಚಿತ್ರಗಳಲ್ಲಿ ಅಭಿನಯಿಸಿದ್ದ ಬಂಟ್ವಾಳ ನಿವಾಸಿ ಸುರೇಂದ್ರ ಭಂಡಾರಿ (39) ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ವಸತಿ ಸಂಕೀರ್ಣದ ಫ್ಲ್ಯಾಟ್ ಒಂದರಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ ನಿವಾಸಿಯಾಗಿರುವ ಸುರೇಂದ್ರ ಬಂಟ್ವಾಳ್, ಹಿಂದೆ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಲ್ಪಟ್ಟಿದ್ದರು. ಛಾಯಾಗ್ರಹಣದಲ್ಲೂ ಗುರುತಿಸಿಕೊಂಡಿದ್ದ ಅವರು, ಹಣಕಾಸು ವ್ಯವಹಾರವನ್ನೂ ಮಾಡುತ್ತಿದ್ದರು. ಬಂಟ್ವಾಳ ಠಾಣೆಯಲ್ಲಿ ಈತ ರೌಡಿಶೀಟರ್ ಆಗಿಯೂ ಗುರುತಿಸಿಕೊಂಡಿದ್ದರು.
ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ಒಳಗೆ ಅವರ ಹತ್ಯೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಫ್ಲಾಟ್ ನ ಐದನೇ ಮಹಡಿಯಲ್ಲಿದ್ದ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಅಪರಾಹ್ನದ ವೇಳೆ ರಾ.ಹೆ. ಇಕ್ಕೆಲಗಳಲ್ಲೂ ಜನ ಜಮಾಯಿಸಿದ್ದರು. ಅಪಾರ್ಟ್ ಮೆಂಟ್ ಸುತ್ತಲೂ ಇರುವ ಜನಸಂದಣಿಯನ್ನು ಬಳಿಕ ಪೊಲೀಸರು ನಿಯಂತ್ರಿಸಿದರು. ಡಿವೈಎಸ್ಪಿ ವೆಲಂಟೈನ್ ಡಿಸೋಜ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್ಸೈ ಪ್ರಸನ್ನ, ರಾಜೇಶ್, ಕಲೈಮಾರ್, ಸಂಜೀವ ಮತ್ತು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಹಣಕಾಸು ವ್ಯವಹಾರ ಸಹಿತ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.