ಬಂಟ್ವಾಳ: ಜಯ ಸಿ ಸುವರ್ಣ ರವರದ್ದು ಅಪರೂಪದ ವ್ಯಕ್ತಿತ್ವ. ಪಕ್ಷ ಭೇದ ಮರೆತು ಎಲ್ಲರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದ ಅವರ ನಡೆ ಎಲ್ಲರಿಗೂ ಮಾದರಿಯಾದುದು. ಒಂದು ಸಮುದಾಯ ಶ್ರೇಯೋಭಿವೃದ್ಧಿಯೆಡೆಗೆ ಮುನ್ನಡೆಯಬೇಕಾದರೆ ಒಳ್ಳೆಯ ನಾಯಕತ್ವ ಇರಬೇಕು. ಅಂತಹ ಒಳ್ಳೆಯ ನಾಯಕರಾಗಿ ಸಮುದಾಯವನ್ನು ಕಟ್ಟಿದವರು ಜಯ ಸಿ ಸುವರ್ಣರು. ಯಾವುದೇ ಪಕ್ಷ, ಜಾತಿ, ಮತ, ಧರ್ಮಗಳ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಎಲ್ಲರಿಗೂ ಆಪ್ತರಾಗಿ ತನ್ನಿಂದಾದ ಸಹಾಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದವರು.
ಹಾಗಾಗಿಯೇ ಅವರು ನಮ್ಮನ್ನು ಅಗಲಿದ ಸಂದರ್ಭದಲ್ಲಿ ಪಕ್ಷಭೇದ ಮರೆತು ಎಲ್ಲರೂ ಶೋಕತಪ್ತರಾಗಿದ್ದಾರೆ. ಇಂತಹ ಮಾನವ ಧರ್ಮವನ್ನೇ ಸಾರಿದ ಓರ್ವ ಸಂಘಟಕ, ಸಾಮಾಜಿಕ ಧುರೀಣನನ್ನು ಕಳೆದುಕೊಂದು ಸಮಾಜ ದುಃಖ ತಪ್ತವಾಗಿದೆ. ಸುವರ್ಣರ ಸ್ಥಾನವನ್ನು ತುಂಬುವ ಇನ್ನೊಬ್ಬ ನಾಯಕ ಇಲ್ಲ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ಬಾಳ್ ನುಡಿನಮನ ಸಲ್ಲಿಸಿದರು.ಯುವವಾಹಿನಿಯ ಆಶ್ರಯದಲ್ಲಿ ನಡೆದಂತಹ ಜಯ ಸಿ ಸುವರ್ಣ ರವರ ಬದುಕು ಮತ್ತು ಸಾಧನೆ ಬಗ್ಗೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸೇಸಪ್ಪ ಕೋಟ್ಯಾನ್ ರವರು ಜಯ ಸಿ ಸುವರ್ಣ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಿದರು.
ರಾಜ್ಯ ಕಿಯೋನಿಕ್ಸ್ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ ತುಕಾರಾಮ್ ಪೂಜಾರಿ ಯುವವಾಹಿನಿ ಕೇಂದ್ರ ಸಮಿತಿ ಯ ನಿಯೋಜಿತ ಅಧ್ಯಕ್ಷರಾದ ಡಾ1 ರಾಜರಾಮ್ ಕೆವಿ , ಬೇಬಿ ಕುಂದರ್ ,ಬಿರುವ ಸೆಂಟರ್ನ ಮಾಲಕರಾದ ಸಂಜೀವ ಪೂಜಾರಿ, ಬಂಟ್ವಾಳ ಬಿಲ್ಲವ ಸಂಘ ಕಾರ್ಯದರ್ಶಿಗಳಾದ ರಮೇಶ್ ಎಂ ತುಂಬೆ, ಯುವವಾಹಿನಿ ಘಟಕದ ಅಧ್ಯಕ್ಷರಾದ ಇಂದ್ರೇಶ್ ಬಿ ಇವರೆಲ್ಲರೂ ಅಗಲಿದ ಸಮಾಜ ರತ್ನ ಜಯ ಸಿ ಸುವರ್ಣ ರವರಿಗೆ ನುಡಿನಮನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು ಕಾರ್ಯಕ್ರಮದಲ್ಲಿ ಪ್ರಮುಖರಾದ ಯಶವಂತ ಪೂಜಾರಿ ,ಮಾಯಿಲಪ್ಪ ಸಾಲಿಯಾನ್ ವಿಶ್ವನಾಥ ಬಿ ಭುವನೇಶ್ ಪಚ್ಚಿನಡ್ಕ ವೀರೇಂದ್ರ ಅಮೀನ್ ವಗ್ಗ ವಾಸು ಮಾಸ್ಟರ್ ಗಾಣದ ಪಡ್ಪು, ಸೋಮಪ್ಪ ಕೋಟ್ಯಾನ್ ಶ್ರೀನಿವಾಸ್ ಮೆಲ್ಕಾರ್, ಪ್ರೇಮನಾಥ್ ಕೆ. ಹಾಗೂ ಯುವವಾಹಿನಿ ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.