ಬಂಟ್ವಾಳ: ಕಲಾವಿದರ ಮತ್ತು ಸಾಧಕರ ಜೊತೆ ಪೊಲೀಸ್ ಇಲಾಖೆ ದೀಪಾವಳಿ ಆಚರಣೆ ನಡೆಸುತ್ತಿರುವುದುಅಭಿನಂದನೀಯವಾಗಿದ್ದು,ಇತರರಿಗೂ ಪ್ರೇರಣಾದಾಯಿ ಕಾರ್ಯಕ್ರಮವಾಗಿದೆ  ಎಂದು ಬಂಟ್ವಾಳ ಉಪವಿಭಾಗದ  ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಅಭಿಪ್ರಾಯಪಟ್ಟರು.

IMG-20201114-WA0127
ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿ  ಸೂರ್ಯವಂಶ ಫೌಂಡೇಶನ್ ವತಿಯಿಂದ ಅಧ್ಯಕ್ಷ ಪ್ರೋ.ಡಾ! ಕೆ. ಗೋವರ್ಧನ ರಾವ್ ಅವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಡೆದ ದೀಪಾವಳಿ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೀಪಿಕಾ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಸೀತಾರಾಮ ಭಟ್ ಮಾತನಾಡಿ  ಸಮಾಜಿಮುಖಿ ಕಾರ್ಯಗಳ ಜೊತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಶ್ಲಾಘನೀಯ.ಡಾಕ್ಟರೇಟ್ ಪದವಿ ಗಳನ್ನು ಪಡೆದ ಗೋವರ್ಧನ ಅವರು ವಿದೇಶಿ ಸಂಸ್ಕ್ರತಿ ಗೆ ಮಾರುಹೋಗದೆ ಭಾರತೀಯ ಸಂಸ್ಕೃತಿಯ ನ್ನು ಬೆಳೆಸಲು ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆ ಎಂದರು.
ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಮಾತನಾಡಿ  ಕೆಲಸದ ಒತ್ತಡದ ಮಧ್ಯೆ ಇರುವ ಪೋಲಿಸರನ್ನು ಗುರುತಿಸಿ ದೀಪಾವಳಿ ಜೊತೆ ಗೌರವಿಸುತ್ತಿರುವುದು ಮಾದರಿಯಾಗಿದೆ ಎಂದರು.
ಅಮೃತಾ ಪ್ರಕಾಶನ ಮಾಸಿಕ ಪತ್ರಿಕೆ ಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಕಲೈಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಡಾ.ಅಶೋಕ್ ಕುಮಾರ್, ಕನ್ನಡ ನಟಿ ಅಕ್ಷತಾ,ಉಮಾ ಗೋವರ್ಧನರಾವ್, ಪಜ್ವಲ್ ಗೋವರ್ಧನ ರಾವ್, ಪ್ರತೀಕ್ಷಾ ಗೋವರ್ಧನ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ಎಸ್.ಐ.ಅವಿನಾಶ್ , ಪ್ರಸನ್ನ, ಕಲೈಮಾರ್ ಹಾಗೂ ಸಿಬ್ಬಂದಿ ಗಳನ್ನು ಗೌರವಿಸಲಾಯಿತು.
ಸಿಬ್ಬಂದಿ ವಿವೇಕ್ ಸ್ವಾಗತಿಸಿ ವಂದಿಸಿದರು.

 

By suddi9

Leave a Reply

Your email address will not be published. Required fields are marked *