ಮಂಗಳೂರು: SKPA ಮಂಗಳೂರು ವಲಯದ ವತಿಯಿಂದ ನವೆಂಬರ್ 14ರಂದು ಸಂಜೆ ನಡೆದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ ನಡೆಯಿತು.
ಕಾರ್ಯಕ್ರಮವನ್ನುSKPA ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉದ್ಘಾಟಿಸಿದರು. ಪ್ರಸ್ತುತ ವರ್ಷದ SSLC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಲಯದ ಸದಸ್ಯರಾದ ರಾಜ್ ಕುಂದರ್ ರವರ ಪುತ್ರ ನೀಲ್ ಕುಂದರ್ ಹಾಗೂ PUC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ರಮೇಶ್ ಪೂಜಾರಿಯವರ ಪುತ್ರಿ ವಿಶ್ಮಿತಾ ಇವರಿಗೆ ವಲಯದ ವತಿಯಿಂದ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.
ಮಕ್ಕಳ ದಿನಾಚರಣೆಯ ಆಯೋಜಿಸಿದ ವಲಯಮಟ್ಟದ “ಮುದ್ದುಕಂದ” ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕಂದಮ್ಮಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ – ಪ್ರಣವಿ. ಎಸ್ (ಛಾಯಾಗ್ರಾಹಕ-ಸುಕೇಶ್ ಗುರುಪುರ, ದ್ವಿತೀಯ -ದಿಶಾನಿ ಎಸ್ (ಛಾಯಾಗ್ರಾಹಕ-ಶ್ರೀಕಾಂತ್ ತಿಲಕ್)

ಬಳಿಕ ಸದಸ್ಯರೆಲ್ಲರೂ ಸೇರಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ರಂಗೋಲಿಯ ದೀಪಬೆಳಗಿಸಿ, ಪಟಾಕಿ ಹೊತ್ತಿಸಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಅಡ್ಯಾರ್, ಅಜಯ್ ಕುಮಾರ್, ವಲಯಧ್ಯಕ್ಷರಾದ ಮಧುಮಂಗಳೂರು , ಉಪಾಧ್ಯಕ್ಷರಾದ ವಸಂತ್ ರಾವ್, ಕಾರ್ಯದರ್ಶಿ ಶ್ರೀಕಾಂತ್ ತಿಲಕ್, ನವೀನ್ ಕೋಡಿಕಲ್ , ಖಜಾಂಚಿ ಮುಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಲೋಕೇಶ್, ಪದ್ಮನಾಭ ಸುವರ್ಣ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.
