ಬಂಟ್ವಾಳ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಣಿಹಳ್ಳ-ನಾವೂರು-ಸರಪಾಡಿ ಮುಖ್ಯರಸ್ತೆಗೆ ನಡೆಯುತ್ತಿರುವ ಮರುಡಾಮರಿಕರಣ ಕಾಮಗಾರಿಯ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಸದಾನಂದ ನಾವೂರು,ಜನಾರ್ದನ ಕೊಂಬೆಟ್ಟು,ಚಿದಾನಂದ ರೈ ಕಕ್ಯಪದವು,ಸುದರ್ಶನ್ ಬಜ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಮನೆಗೆ ಹಾನಿ ಪರಿಶೀಲನೆ:
ಇತ್ತೀಚೆಗೆ ಗಾಳಿ, ಮಳೆಗೆ ಮಣಿನಾಲ್ಕೂರು ಗ್ರಾಮದ ಶಾಲೆಗುಡ್ಡೆ ಚಂದ್ರಹಾಸ ಶೆಟ್ಟಿಯವರ ಮನೆಯ ಮೇಲ್ಛಾವಣಿಯು ಹಾರಿಹೋಗಿ ಹಾನಿಯಾದ ಸಂತ್ರಸ್ತರಿಗೆ ವಾಸ್ತವ್ಯಕ್ಕೆ ಬಿಜೆಪಿ ಕಾರ್ಯಕರ್ತರು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು ,ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಮಯ್ಯ,ಶಾಂತಪ್ಪ ಪೂಜಾರಿ,ಧರಣೇಂದ್ರ ಜೈನ್,ಶರ್ಮಿತ್ ಜೈನ್,ದಿನೇಶ್,ಚಿದಾನಂದ ರೈ ಕಕ್ಯಪದವು, ಸುದರ್ಶನ್ ಬಜ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
