ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ಹಾಗೂ ಸಿಂಧೂರ ಜ್ಞಾನವಿಕಾಸ ಕೇಂದ್ರ, ಭಾರತ ಸರ್ಕಾರ ದತ್ತೋಪಂತ್ ಠೇಂಗಡಿ ,ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ಮತ್ತು ಉದ್ಯೋಗ ಸಚಿವಾಲಯ, ಉಪ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಇರಾ ಕಂಚಿನಡ್ಕಪದವು ಅಂಬೇಡ್ಕರ್ ಭವನದಲ್ಲಿ “ಸ್ವ ಉದ್ಯೋಗ ಮಹಿಳಾ ವಿಚಾರಗೋಷ್ಠಿ” ಕಾರ್ಯಕ್ರಮವು ನಡೆಯಿತು. 
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಮಮತಾ ಹರೀಶ್ ರಾವ್ ರವರು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶ ಹಾಗೂ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು ಪ್ರಗತಿಬಂಧು ಸ್ವಸಾಯ ಸಂಘ ಇರಾ ಒಕ್ಕೂಟದ ಮುಡಿಪು ವಲಯದ ಅಧ್ಯಕ್ಷ ಜಯಪ್ರಕಾಶ್ ಕಾಜವ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ ಚಂದ್ರಹಾಸ ಕರ್ಕೇರ ರವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಜೀವನದ ಅವಶ್ಯಕತೆಯ ನಿಟ್ಟಿನಲ್ಲಿ ಇಂತಹ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿರುವುದು ಶ್ಳಾಘನೀಯವಾಗಿದೆ ಎಂದರು. ಮಂಗಳೂರು ಯುವವಾಹಿನಿ ಮಹಿಳಾ ಘಟಕ ಅಧ್ಯಕ್ಷೆ ರೇಖಲತಾ, ಜಿಲ್ಲಾ ಸಣ್ಣ ಕೈಗಾರಿಕಾ ಮಹಿಳಾ ಸಂಘ ಅಧ್ಯಕ್ಷೆ ಹರಿಣ ಜಿ ರಾವ್,ಸದಸ್ಯೆ ಶಾಂತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು, ವಲಯ ಅಧ್ಯಕ್ಷ ನವೀನ್ ಪಾದಲ್ಪಾಡಿ ,ಇರಾ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಹಾಗೂ ಸೇವಾ ಪ್ರತಿನಿಧಿ ಕವಿತಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಪಿ ಚೆನ್ನಪ್ಪ ಗೌಡ ಅವರು ಸ್ವಾಗತಿಸಿ ,ಮೇಲ್ವಿಚಾರಕಿ ಮೋಹಿನಿ ವಂದಿಸಿದರು.ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.