ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ , ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲ ಇವರನ್ನು ಅವರ ಮನೆಗೆ ಭೇಟಿನೀಡಿ ಸನ್ಮಾನಿಸಲಾಯಿತು.
ಇವರು ಸೈನ್ಯದ ರೆಗ್ಯುಲೇಟಿಂಗ್ ಡೆಪಾರ್ಟ್ಮೆಂಟಿನಲ್ಲಿ 10 ವರುಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. 1971 ರಲ್ಲಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಇವರು ಇದ್ದ ವಾರ್ ಷಿಪ್ ಮೊಟ್ಟ ಮೊದಲು ಬಾಂಗ್ಲಾದೇಶದಲ್ಲಿ ನೆಲೆ ಊರಿ ಎದುರಾಳಿ ಸೈನಿಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಯಾದೆವು, ಹಾಗೂ ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ತನ್ನ ಸೈನಿಕ ವೃತ್ತಿ ಜೀವನದ ನೆನೆಪನ್ನು ನಮ್ಮೊಂದಿಗೆ ಹಂಚಿಕೊಂಡರು.
ಇವರಿಗೆ 1. ಪುರಿಸ್ಟಾರ್, 2.ಸಂಗ್ರಾಮ್ 3. ಅಂಡಮಾನ್ ನಿಕೋಬಾರ್4. 25ನೇ ಸ್ವಾತಂತ್ರ್ಯಉತ್ಸವ ಹೀಗೆ ಒಟ್ಟು 4 ಪದಕಗಳು ಲಭಿಸಿರುತ್ತದೆ ಮುಂದಕ್ಕೆ ಸಿಂಡಿಕೇಟ್ ಬ್ಯಾಂಕಲ್ಲಿ ಉದ್ಯೋಗ ಮುಂದುವರಿಸಿ, ಇದೀಗ ನಿವೃತ್ತಿ ಜೀವನವನ್ನು ಪತ್ನಿ ಶೋಭಾ ಎಂ. ಮಾರ್ಲ ಹಾಗೂ ಇಬ್ಬರು ಪುತ್ರಿಯರೊಂದಿಗೆ ನಡೆಸುತ್ತಿದ್ದಾರೆ.
ಅಧ್ಯಕ್ಷರಾದ ಪದ್ಮನಾಭ ರೈ ಸನ್ಮಾನವನ್ನು ನೆರವೇರಿಸಿ ಮಾತನಾಡಿ ದೇಶ ರಕ್ಷಣೆಯ ಕೆಲಸ ಜೀವನದಲ್ಲಿ ಕೆಲವರಿಗೆ ಮಾತ್ರ ಸಿಗುವ ಅವಕಾಶ ಮತ್ತು ಸೌಭಾಗ್ಯ ಎಂದು ಅವರ ಮುಂದಿನ ಜೀವನಕ್ಕೆ ಶುಭವನ್ನು ಹಾರೈಸಿದರು. ರೋಟರಿಯನ್ಸ್ ಸುದೀರ್ ಶೆಟ್ಟಿ, ಸುಂದರ್ ಬಂಗೇರ, ಜ್ಯೋತಿಂದ್ರ ಶೆಟ್ಟಿ, ಸತೀಶ್, ಕೇಶವನಾಯ್ಕ್, ಅನ್ನೆಟ್ ವಂಶಿತ್, ಕಾರ್ಯದರ್ಶಿ ಕಿಶೋರ್ ಉಪಸ್ಥಿತಿ ಇದ್ದರು.