ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಬಾರ್ ಮತ್ತು ವೆಲಂಕನಿ ಮಾತಾ ಚರ್ಚ್ ಸಹಿತ ಎಂಟು ಕಡೆ ಶುಕ್ರವಾರ ತಡರಾತ್ರಿ ಕಳ್ಳರು ನುಗ್ಗಿ ಸರಣಿ ಕಳವು ನಡೆಸಿದ್ದಾರೆ.
ಚರ್ಚಿನ ಕಾಣಿಕೆ ಡಬ್ಬಿಯಲ್ಲಿದ್ದ ರೂ ೨೫೦ಕ್ಕೂ ಮಿಕ್ಕಿ ಹಣ ದೋಚಿದ ಕಳ್ಳರು ವಗ್ಗ ಬಸ್ ನಿಲ್ದಾಣ ಸಮೀಪದ ಬಾರಿನ ಮೇಜಿನಲ್ಲಿ ಕಡತಗಳನ್ನು ಜಾಲಾಡಿಸಿದ್ದಾರೆ.

ಇದೇ ರಸ್ತೆಯ ಗೋಪಾಲ ಪೂಜಾರಿ ಮತ್ತಿತರ ಗೂಡಂಗಡಿ ಸಹಿತ ಒಟ್ಟು ಎಂಟು ಕಡೆ ಅಂಗಡಿಗಳಿಗೆ ನುಗ್ಗಿದ್ದಾರೆ. ಮುಸುಕುಧಾರಿ ಕಳ್ಳರು ಕೃತ್ಯ ನಡೆಸುತ್ತಿದ್ದ ದೃಶ್ಯ ಚರ್ಚಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ರಾಮಾಂತರ ಠಾಣೆ ಎಸೈ ಪ್ರಸನ್ನ, ಎಎಸೈ ಸಂಜೀವ ಮತ್ತಿತರ ಪೊಲೀಸರ ತಂಡವು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *