ಮುಂಬಯಿ : ಗೋಕುಲ-ನವೀಕೃತ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಸಜ್ಜಾಗುತ್ತಿದೆ.ಯಶಸ್ವೀ ತೊಂಬತ್ತೆöÊದು ವರ್ಷಗಳನ್ನು ಪೂರೈಸಿದ ಬಿ.ಎಸ್.ಕೆ.ಬಿ. ಅಸೋಸಿಯೇಷನ್:
ಮುಂಬಯಿ,ಫೆ.೨೩: ಪುಣ್ಯ ಭೂಮಿ ಭಾರತದ ಪ್ರಸಿದ್ಧ ರಾಜ್ಯ ಮಹಾರಾಷ್ಟçದಲ್ಲಿನ ಮಾಯಾನಗರಿ ಎಂದೇ ಪ್ರಸಿದ್ಧವಾಗಿರುವ ವಾಣಿಜ್ಯ ನಗರಿ ಮುಂಬಯಿಯಲ್ಲಿ ಭಾರತೀಯ ಸಂಸ್ಕöÈತಿಯನ್ನು ಉಳಿಸಿ ಬೆಳೆಸುತ್ತಿರುವ ಸಂಘ ಸಂಸ್ಥೆಗಳು ನೂರಾರು.
ಅವುಗಳಲ್ಲಿ, ಮುಂಬಯಿ ಮಹಾನಗರಿಯ ಹೃದಯ ಭಾಗದಲ್ಲಿರುವ ಬ್ರಾಹ್ಮಣರ -ದ್ದೇ ಆದ ಪ್ರತಿಷ್ಠಿತ ಸಂಸ್ಥೆ-ತುಳುನಾಡಿನಿAದ ಆಗಮಿಸಿ ಇಲ್ಲಿ ನೆಲೆಯಾದ ಹಿರಿಯರಿಂದ ಸ್ಥಾಪಿತವಾದ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ-ಬಾAಬೆ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಷನ್ (ಬಿ.ಎಸ್.ಕೆ.ಬಿ.ಎ) ಮುಂಬಯಿ ಮಹಾನಗರಿಯ ಹೃದಯ ಭಾಗದಲ್ಲಿ `ಗೋಕುಲ’ ಎಂದೇ ಪ್ರಸಿದ್ಧಿ ಪಡೆದ ಸಂಸ್ಥೆ ಬಿಎಸ್ಕೆಬಿಎ ಸಾಯನ್. ಇದರ ಸ್ಥಾಪಕ ಸದಸ್ಯರುಗಳಾದ ಡಾ| ಯು.ಬಿ ನಾರಾಯಣ ರಾವ್, ಕುಡ್ಪಿ ಭುಜಂಗ ರಾವ್, ಮಂಕೀ ಶ್ರೀನಿವಾಸ್ ರಾವ್, ಯು.ರಾಮಚಂದ್ರ ಆಚಾರ್, ಯು.ವಿ ಉಪಾಧ್ಯಾಯ, ಬಪ್ಪನಾಡು ಸುಬ್ಬ ರಾವ್, ಬಿ.ಎಸ್ ತಂತ್ರಿ, ಡಾ| ಯು.ಆರ್. ರಾವ್, ಕೆ.ಎಸ್.ಎನ್ ಹೆಬ್ಬಾರ್ ಮತ್ತು ಕೇಶವಯ್ಯ ಮುಂತಾದವರು, ಉದ್ಯೋಗವನ್ನು ಅರಸಿಕೊಂಡು ಮುಂಬಯಿಗೆ ಆಗಮಿಸಿ ಇಲ್ಲಿ ನೆಲೆಯಾಗಿದ್ದ, ದಕ್ಷಿಣ ಕನ್ನಡ ಬ್ರಾಹ್ಮಣ ಸಮುದಾಯದವರನ್ನೆಲ್ಲಾ ಒಟ್ಟುಗೂಡಿಸಿ ಒಂದು ಸಂಘವನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡರು.
ಅಂತೆಯೇ ಅಂದಿನ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮುದಾಯದ ೮ ಪಂಗಡಗಳಾದ ಶಿವಳ್ಳಿ, ಸ್ಥಾನಿಕ,ಕೋಟ, ಹವ್ಯಕ, ಕಂದಾವರ, ಕೋಟೇಶ್ವರ, ಚಿತ್ಪಾವನ, ಮತ್ತು ಕರಾಡ್ ಬ್ರಾಹ್ಮ -ಣರನ್ನೆಲ್ಲಾ ಸಂಘಟಿಸಿ, ೧೯೨೫ರಲ್ಲಿ ಬಾಂಬೆ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘವನ್ನು (ಃombಚಿಥಿ Souಣh ಏಚಿಟಿಚಿಡಿಚಿ ಃಡಿಚಿhmiಟಿs ಂssoಛಿiಚಿಣioಟಿ) ಸ್ಥಾಪಿಸಿದರು. ಕೇವಲ ೧೦ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ವರ್ಷಾಂತ್ಯದಲ್ಲಿ ೬೦ ಸದಸ್ಯತ್ವವನ್ನು ಹೊಂದಿತು. ಎಲ್ಲಾ ಪಂಗಡಗಳ ಬ್ರಾಹ್ಮಣರನ್ನು, ಯಾವ ವಿಧದ ತಾರತಮ್ಯವಿರದಂತೆ ಒಂದು ವೇದಿಕೆಯಲ್ಲಿ ಒಂದುಗೂಡಿಸುವುದು ಸಂಸ್ಥೆಯ ಸ್ಥಾಪನೆಯ ಮೂಲ ಉದ್ದೇಶ ಆಗಿತ್ತು.
ಬ್ರಾಹ್ಮಣ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವುದು, ಆಥಿüðಕವಾಗಿ ದುರ್ಬಲರಾದ ಸಮಾಜ ಬಾಂಧವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾಥಿüð ವೇತನದ ಮೂಲಕ ಧನ ಸಹಾಯ ನೀಡುವುದು, ಉದ್ಯೋಗವನ್ನರಸಿ ಬಂದವರಿಗೆ ಸಹಾಯ ಮಾಡುವುದು ಮುಂತಾದ ಸಾಮಾಜಿಕ, ಆಥಿüðಕ, ಶೈಕ್ಷಣಿಕ, ಹಾಗೂ ಸಾಂಸ್ಕöÈತಿಕ ಬೆಳವಣಿಗೆಯ ಉನ್ನತ ಧ್ಯೇಯಗಳೊಂದಿಗೆ ಸಂಸ್ಥೆ ಪ್ರಾರಂಭವಾಯಿತು. ಸಂಸ್ಥೆಯ ಪ್ರಥಮ ಪದಾಧಿಕಾರಿಗಳಾಗಿ ಡಾ| ಯು.ಬಿ ನಾರಾಯಣ ರಾವ್-ಅಧ್ಯಕ್ಷರು, ಬಪ್ಪನಾಡು ಸುಬ್ಬ ರಾವ್-ಉಪಾಧ್ಯಕ್ಷರು, ಬಿ.ಎಸ್ ತಂತ್ರಿ-ಗೌ| ಕಾರ್ಯದರ್ಶಿ ಹಾಗೂ ಸಿ.ಕೇಶವಯ್ಯ-ಕೋಶಾಧಿಕಾರಿ ಆಗಿ ಆಯ್ಕೆ ಗೊಂಡರು. ಆಡಳಿತ ಕಾರ್ಯಕಾರೀ ಸಮಿತಿಯೊಂದಿಗೆ ೧೯೨೫ ರಲ್ಲಿ ಸಂಘದ ಕಾರ್ಯಾರಂಭಗೊAಡು ಯಶಸ್ಸಿನ ಮೆಟ್ಟಲನ್ನೇರುತ್ತಾ ತನ್ನ ಸಾರ್ಥಕ ೯೫ ವರ್ಷಗಳನ್ನು ಪೂರೈಸಿದೆ.
ಸಂಸ್ಥೆಯ ಈ ಯಶೋಗಾಥೆಯ ಹಿಂದಿನ ಹಾದಿ ಸುಗಮವಾಗಿರಲಿಲ್ಲ. ಅಂದಿನ ಕಾಲದಲ್ಲಿ ಕೇವಲ ೩ ರೂಪಾಯಿ ಮಾತ್ರ ಸದಸ್ಯತ್ವದ ದೇಣಿಗೆ ಹೊಂದಿದ್ದರೂ ಅದನ್ನು ಸದಸ್ಯರಿಂದ ಸಂಗ್ರಹಿಸಲು ತುಂಬಾ ಕಷ್ಟವಾಗುತ್ತಿತ್ತು. ಆದ್ದರಿಂದ ಸುಮಾರು ೧೧ ವರ್ಷಗಳ ಕಾಲ ಚಟುವಟಿಕೆಗಳಿಲ್ಲದೆ ಸಂಘ ಪ್ರಗತಿಯನ್ನು ಕಾಣಲಿಲ್ಲ.೧೯೩೬ ರಲ್ಲಿ ಚೌಪಾಟಿ ವಲಯದಲ್ಲಿ ಪ್ರಸಿದ್ಧ ವೈದ್ಯರಾಗಿದ್ದ ಡಾ. ಯು. ಆರ್ ರಾವ್ ಹಾಗೂ ಕೆ.ಕೃಷ್ಣ ಹೆಬ್ಬಾರ್, ಅರ್ಕುಳ ವೆಂಕಟ್ ರಾವ್, ಪಿ.ಮುರಾರಿ ಭಟ್ ಮತ್ತು ಸಿಎ| ಆರ್.ಕೆ ಕಾರಂತ್ಮುAತಾದವರು ಸಂಘವನ್ನು ಪುನಶ್ಚೇತನಗೊಳಿಸಲು ಮುತುವರ್ಜಿ ವಹಿಸಿದರು.
ಆದರೆ ಮತ್ತೆ ಎಂಟು ವರ್ಷಗಳ ಕಾಲ ಸದಸ್ಯರ ಬೆಂಬಲದ ಕೊರತೆ ಕಾಡಿತು.ನಂತರ ೧೯೪೪ ರಲ್ಲಿ, ಬಾಂಬೆ ಸರ್ಜಿಕಲ್ಸ್ ನ ಆಡಳಿತ ನಿರ್ದೇಶಕರಾಗಿದ್ದ, ಅತ್ಯಂತ ಕ್ರಿಯಾಶೀಲ ಹಾಗೂ ದಕ್ಷರಾಗಿದ್ದ ಕುಡ್ಪಿ ಭುಜಂಗ ರಾವ್ ರವರು ಸಂಘಕ್ಕೆ ಪುನರ್ಜೀವನವನ್ನಿತ್ತರು. ಡಾ| ಯು.ಬಿ ನಾರಾಯಣ ರಾವ್, ಕುಡ್ಪಿ ಭುಜಂಗ ರಾವ್, ಡಾ| ಯು.ಆರ್ ರಾವ್, ಯು.ವಿ ಉಪಾಧ್ಯಾಯ, ಕೆ.ಎಸ್.ಎನ್ ಹೆಬ್ಬಾರ್ ಮುಂತಾದ ಗಣ್ಯರು ಸಂಘದ ಚುಕ್ಕಾಣಿಯನ್ನು ಹಿಡಿದÀÄ ತಮ್ಮ ನೇತೃತ್ವದಲ್ಲಿ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯೋತ್ಸವವನ್ನು ಸಂಘವು ಅತ್ಯಂತ ಅದ್ದೂರಿಯಿಂದ ಆಚರಿಸಿತು.
ಅಂದಿನಿAದ ಸಂಘವು ಹಿಂತಿರುಗಿ ನೋಡದೆ ಭವಿಷ್ಯದತ್ತ ದಾಪುಗಾಲನ್ನು ಹಾಕುತ್ತಾ ಮುಂದುವರಿಯಿತು. ಮುಂದೆ ಸಂಘದ ಚಟುವಟಿಕೆಗಳನ್ನು ನಡೆಸಲು ಒಂದು ವೇದಿಕೆಯ ಅಗತ್ಯತೆಯನ್ನು ಮನಗಂಡAತಹ ಗಣ್ಯರು, ೧೯೫೪ರಲ್ಲಿ ಅಂದಿನ ಸರಕಾರದಿಂದ ೯೯೯ ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸಾಯನ್ ನಲ್ಲಿ ಈಗ ಕಟ್ಟಡವಿರುವ ಜಾಗವನ್ನು ಪಡೆದರು. ಕೆನರಾ ಬ್ಯಾಂಕ್ನಲ್ಲಿ ಆಡಳಿತ ನಿರ್ದೇಶಕರಲ್ಲಿ ಒಬ್ಬರೂ ಆಗಿದ್ದ ಕುಡ್ಪಿ ಭುಜಂಗ ರಾವ್ ಅವರು ತನ್ನ ದೇಣಿಗೆಯಾಗಿ ರೂ.೨೫,೦೦೦/- ನೀಡಿದುದಲ್ಲದೆ ಕೆನರಾ ಬ್ಯಾಂಕ್ ನಿಂದ ಸಾಕಷ್ಟು ಮೊತ್ತದ ಸಾಲವನ್ನು ಪಡೆಯಲು ಕಾರಣೀಭೂತರಾದರು.
ಹೀಗೆ ಹಲವಾರು ಪ್ರಾತಃಸ್ಮರಣೀಯರ ಕಠಿಣ ಪರಿಶ್ರಮದ ಫಲವಾಗಿ ೧೯೫೮ರಲ್ಲಿ ಗೋಕುಲ ಕಟ್ಟಡ ನಿರ್ಮಾಣವಾಯಿತು. ಆದರೆ ಆಥಿüðಕ ಅಡಚಣೆಯಿಂದಾಗಿ ಶ್ರೀ ಕೃಷ್ಣ ಮಂದಿರ ನಿರ್ಮಾಣವಾಗಲು ಮತ್ತೆ ಮೂರು ವರ್ಷಗಳು ಹಿಡಿದವು. ೧೯೬೨ರಲ್ಲಿ ಯು.ವಿ ಉಪಾಧ್ಯಾಯರವರ ದಕ್ಷ ಮೇಲುಸ್ತುವಾರಿಕೆಯಲ್ಲಿ ಶ್ರೀ ಕೃಷ್ಣ ಮಂದಿರವನ್ನೊಳಗೊAಡ ಸುಂದರ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಅದಮಾರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಬುಧೇಶ ತೀರ್ಥರು ಹಾಗೂ ಪೇಜಾವರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥರು ತಮ್ಮ ತಮ್ಮ ದೇಣಿಗೆಯನ್ನಿತ್ತು ಅನುಗ್ರಹಿಸಿದರು. ಹಾಲು ಬಿಳುಪಿನ, ಹಸನ್ಮುಖಿ ಶ್ರೀ ಗೋಪಾಲಕೃಷ್ಣನ ಅಮೃತ ಶೀಲಾಮೂರ್ತಿಯನ್ನು ರಾಜಸ್ಥಾನೀ ಭಕ್ತರೋರ್ವರು ದೇಣಿಗೆ ಆಗಿತ್ತರು.
ಉಭಯ ಯತಿವರ್ಯರ ಅಮೃತ ಹಸ್ತಗಳಿಂದ ಗೋಕುಲ ಶ್ರೀ ಕೃಷ್ಣಮಂದಿರ ಲೋಕಾರ್ಪಣೆ ಗೊಂಡಿತು. ಅಂದಿನಿAದ ಸಂಸ್ಥೆಯ ಸದಸ್ಯತ್ವವು ಗಣನೀಯವಾಗಿ ಬೆಳೆಯುತ್ತಾ ಬಂದು ಇಂದು ಸುಮಾರು ೫೫೦೦ ಸದಸ್ಯರನ್ನೊಳಗೊಂಡ ಹೆಮ್ಮರವಾಗಿ, ಮುಂಬಯಿಯ ಪ್ರತಿಷ್ಠಿತ ಸಂಸ್ಥೆಯಾಗಿ ಮೆರೆಯುತ್ತಿದೆ. ಗೋಕುಲದ ಶ್ರೀ ಗೋಪಾಲಕೃಷ್ಣ ಸದಸ್ಯರಿಗೆ ಮಾತ್ರವಲ್ಲ ಸುತ್ತುಮುತ್ತಲಿನ ಅಸಂಖ್ಯ ಭಕ್ತಾದಿಗಳಿಗೆ ಆರಾಧ್ಯ ಮೂರ್ತಿಯಾಗಿ ಅನುಗ್ರಹಿಸುತ್ತಿದ್ದಾನೆ. ಇಂದು ಮುಂಬಯಿಯಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲು ಆತನ ಕೃಪಾಕಟಾಕ್ಷವೇ ಕಾರಣವೆಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.
೧೯೨೫ ರಿಂದ ಇದುವರೆಗೆ ಡಾ| ಯು.ಬಿ ನಾರಾಯಣ ರಾವ್, ದಿ| ಕುಡ್ಪಿ ಭುಜಂಗ ರಾವ್, ದಿ| ಡಾ| ಲಲಿತಾ ರಾವ್, ದಿ| ಬಿ.ಪಿ ಆಚಾರ್ಯ, ದಿ| ಯು.ಜಿ ಆಚಾರ್ಯ, ದಿ| ಎ.ಆರ್ ಆಚಾರ್ಯ, ದಿ| ಸಿ.ಆರ್ ಬೆಳ್ಳೆ, ದಿ| ಜಸ್ಟೀಸ್ (ನಿವೃತ್ತ) ಹೆಚ್.ಸುರೇಶ್, ದಿ| ಬಿ.ಆರ್ ಉಡುಪ, ಯು.ರಾಮ ರಾವ್, ಡಾ| ಸುರೇಶ್ ಎಸ್.ರಾವ್, ಕೆ.ಸುಬ್ಬಣ್ಣ ರಾವ್, ಇದೀಗ ಮತ್ತೆ ಡಾ| ಸುರೇಶ್ ಎಸ್.ರಾವ್ ಅಧ್ಯಕ್ಷರಾಗಿದ್ದು, ಪ್ರತಿಯೊಬ್ಬರೂ ಸಂಘದ ಏಳಿಗೆಗಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ಅತ್ಯಂತ ಶ್ರಮ ವಹಿಸಿದ್ದಾರೆ.
ಸಂಸ್ಥೆಯು ೧೯೫೩ರಲ್ಲಿ ರಜತ ಮಹೋತ್ಸವ, ೧೯೭೫ರಲ್ಲಿ ಸ್ವರ್ಣ ಮಹೋತ್ಸವ, ೧೯೮೫ರಲ್ಲಿ ವಜ್ರ ಮಹೋತ್ಸವ ಹಾಗೂ ೨೦೦೦ನೇ ಇಸವಿಯಲ್ಲಿ ಅಮೃತಮಹೋತ್ಸವವನ್ನು ಸಂಭ್ರಮದಿAದ ಆಚರಿಸಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಸಮಾಜಕ್ಕೆ ಒಂದು ಉತ್ತಮ ಕೊಡುಗೆಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡ ಕಾರ್ಯಕಾರೀ ಸಮಿತಿ, ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣವನ್ನು ನಿರ್ಮಾಣ ಮಾಡಲು ನಿರ್ಧರಿಸಿತು.
ಇದಕ್ಕಾಗಿ ನವಿಮುಂಬಯಿಯಲ್ಲಿ ಅIಆಅಔ ಸಂಸ್ಥೆಯಿAದ ಜಾಗ ಪಡೆಯಲು ದಿ| ಬಿ. ಬಾಲಚಂದ್ರ ರಾವ್, ದಿ| ಎ.ಕೆ ಹೆಬ್ಬಾರ್ ಮುತುವರ್ಜಿ ವಹಿಸಿದ್ದರು. ಅವರೊಂದಿಗೆ ಹಲವಾರು ಸದಸ್ಯರು ಕೈಗೂಡಿಸಿದರು. ಇವರೆಲ್ಲರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ನೇರೂಲ್ನಲ್ಲಿ ೧೮೨೫ ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಒಂದು ಹವಾ ನಿಯಂತ್ರಿತ ಸಭಾಗೃಹ, ಒಂದು ಕಿರು ಸಭಾಗೃಹ, ಬ್ಯಾಂಕ್ ಹಾಗೂ ಸುಮಾರು ೫೦ ಹಿರಿಯ ನಾಗರಿಕರು ನೆಮ್ಮದಿಯಿಂದ ನೆಲೆಸಲು ಅನುಕೂಲವಾಗುವಂತಹ `ಆಶ್ರಯ’ ಕಟ್ಟಡ ನಿರ್ಮಾಣ ಗೊಂಡಿತು. ಸುಮಾರು ೧೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ, ದಿ| ಎ.ಕೆ ಹೆಬ್ಬಾರ್, ಡಾ| ಸುರೇಶ್ ಎಸ್.ರಾವ್, ಲಕ್ಷ್ಮೀಶ್ ಆಚಾರ್ಯ, ವಿಖ್ಯಾತ್ ಹೆಬ್ಬಾರ್, ಗುರುರಾಜ್ ಹೆಬ್ಬಾರ್, ಪಿ.ಹೆಚ್ ಶ್ರೀನಿವಾಸ್ ಆಚಾರ್, ಅಶೋಕ್ ಸೋಮೇಶ್ವರ್ ಮುಂತಾದ ಗಣ್ಯಾತಿಗಣ್ಯ ಸಮಾಜ ಬಾಂಧವರು ಅಲ್ಲದೆ ಇತರ ಸಮುದಾಯದ ಉದಾರಿ ದಾನಿಗಳು ಕೂಡಾ ತಮ್ಮ ತನು-ಮನ-ಧನದ ಅಮೂಲ್ಯ ದೇಣಿಗೆಯನ್ನಿತ್ತು ಸಹಕರಿಸಿದ್ದಾರೆ.
ಸದಸ್ಯರೆಲ್ಲರ ಪ್ರಯತ್ನದ ಫಲವಾಗಿ ೨೦೦೯ರಲ್ಲಿ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ’ದ ಶುಭಾರಂಭವು ಪೇಜಾವರ ಮಠಾಧೀಶ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಶುಭ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ಯೋಜನೆಯ ಪ್ರಾರಂಭವು ಅಂದಿನ ಅಧ್ಯಕ್ಷ ದಿ| ಬಿ.ಆರ್ ಉಡುಪ ಅವರಿಂದ ಆರಂಭವಾಗಿ ನಂತರ ಅಧ್ಯಕ್ಷರಾದ ಯು.ರಾಮ ರಾವ್ ಅವರಿಂದ ಮುಂದುವರಿಸಲ್ಪಟ್ಟು ಪ್ರಸ್ತುತ ಅಧ್ಯಕ್ಷ ಆಗಿರುವ ಡಾ| ಸುರೇಶ್ ರಾವ್ ಮುಂದಾಳತ್ವದಲ್ಲಿ ನೇರುಲ್ನಲ್ಲಿ ೩-ಮಹಡಿಗಳ ಭವ್ಯ ಕಟ್ಟಡವನ್ನು ನಿರ್ಮಿಸಿ ಹಿರಿಯ ನಾಗರಿಕರಿಗೆ `ಆಶ್ರಯ’ವನ್ನು ಕೊಟ್ಟು, ಜಾತಿ ಮತ ಭೇದವಿಲ್ಲದೆ ಹಿರಿಯ ನಾಗರಿಕರು ತಮ್ಮ ಬಾಳಿನ ಸಂಜೆಯನ್ನು ನೆಮ್ಮದಿಯಿಂದ ಕಳೆಯುವಂತೆ ಸಾಮಾಜಿಕ ಪ್ರಜ್ಞೆ ಮೆರೆದಿದೆ. ಈ ಸೌಲಭ್ಯ ಒದಗಿಸಿಕೊಟ್ಟ ಎಲ್ಲರÀ ನಿಷ್ಠಾವಂತ ಸೇವೆ ಅವಿಸ್ಮರಣಿಯ.
ಸಂಸ್ಥೆಯು ಯುವ ವಿಭಾಗ, ಮಹಿಳಾ ವಿಭಾಗ, ಕಲಾವೃಂದ, ಭಜನಾ ಮಂಡಳಿ, ಯಕ್ಷಗಾನ ಮಂಡಳಿ ಮುಂತಾದವುಗಳನ್ನು ಹೊಂದಿದ್ದು, ವರ್ಷವಿಡೀ ಧಾರ್ಮಿಕ, ಸಾಂಸ್ಕöÈತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ವಿಧಿವತ್ತಾಗಿ ಆಚರಿಸುತ್ತಾ ಸಮಾಜ ಬಾಂಧವರ ಸರ್ವತೋಮುಖ ಖ ಬೆಳವಣಿಗೆಗೆ ಪ್ರೋತ್ಸಾಹವನ್ನು ಕೊಡುತ್ತಾ ಹಲವಾರು ಸಾಹಿತಿಗಳು/ ವಿಜ್ಞಾನಿಗಳು ಹಾಗೂ ಕಲಾವಿದರನ್ನು ಮುಂಬಯಿ ನಗರಿಗೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ನಮ್ಮ ಜನ್ಮಭೂಮಿಯ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.
ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ಕೊಡುತ್ತಾ ಆಥಿüðಕವಾಗಿ ದುರ್ಬಲರಾದ ವಿದ್ಯಾಥಿüðಗಳಿಗೆ ವಿದ್ಯಾಥಿüðವೇತನ ಹಾಗೂ ಶಾಲೆಗಳಿಗೆ ಧನ ಸಹಾಯವನ್ನು ಕೊಡುತ್ತಾ ಬಂದಿದೆ. ಸಾಮಾಜಿಕ ಕ್ಷೇತ್ರದಲ್ಲಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಇತ್ಯಾದಿಗಳನ್ನು ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿAದ ಆಚರಿಸುತ್ತಿದೆ.
ಸಂಘದ ಮುಖಪತ್ರಿಕೆ ಗೋಕುಲವಾಣಿ:
ಎಂಟು ವರ್ಷಗಳ ಹಿಂದೆ ರಜತ ಮಹೋತ್ಸವವನ್ನು ಸಂಭ್ರಮದಿAದ ಆಚರಿಸಿರುವ `ಗೋಕುಲವಾಣಿ’, ತಜ್ಞ ಸಂಪಾದಕ ಮಂಡಳಿ, ಖ್ಯಾತ ಸಾಹಿತಿ ಡಾ| ವ್ಯಾಸರಾವ್ ನಿಂಜೂರ್ ಅವರ ಸಂಪಾದಕತ್ವದಲ್ಲಿ ಮುಂಬಯಿಯ ಪ್ರತಿಷ್ಠಿತ ಪತ್ರಿಕೆಯಾಗಿ ಪ್ರಸಿದ್ಧಿಯನ್ನು ಪಡೆದಿದೆ. ಸಂಘದ ಆಗುಹೋಗುಗಳಲ್ಲದೆ, ಮುಂಬಯಿಯ ಹಾಗೂ ಕರ್ನಾಟಕದ ಖ್ಯಾತ ಸಾಹಿತಿಗಳ,ಆಥಿüðಕ ತಜ್ಞರ, ವೈದ್ಯರ, ಮಠಾಧೀಶರ ವೈಚಾರಿಕ ಲೇಖನಗಳನ್ನೊಳಗೊಂಡು ಕುಟುಂಬದ ಸರ್ವ ಸದಸ್ಯರು ಓದುವಂತಹ ಮಾಸಿಕ ಪತ್ರಿಕೆಯಾಗಿದೆ. ವರ್ಷಕ್ಕೊಮ್ಮೆ ಕಥಾ ಸ್ಪರ್ಧೆಯನ್ನು ಏರ್ಪಡಿಸಿ, ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ.
ಪ್ರಸ್ತುತ ಅಧ್ಯಕ್ಷರಾಗಿರುವ ಡಾ| ಸುರೇಶ್ ಎಸ್.ರಾವ್ ಅವರ ನೇತೃತ್ವ, ವಿದ್ಯಾವಿಹಾರ್ ಶ್ರೀ ಅಂಬಿಕಾ ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಅವರ ಅಧ್ಯಕ್ಷತೆ ಹಾಗೂ ಪೇಜಾವರ, ಅದಮಾರು, ಪುತ್ತಿಗೆ, ಪಲಿಮಾರು ಮಠಾಧೀಶರುಗಳ ದಿವ್ಯ ಉಪಸ್ಥಿತಿಯಲ್ಲಿ ೨೦೧೫ ಮಾರ್ಚ್ ೧೫ ರಂದು ಮುಂಬಯಿಯಲ್ಲಿರುವ ಮಠಗಳು ಹಾಗೂ ಸರ್ವ ಬ್ರಾಹ್ಮಣ ಸಮುದಾಯಗಳನ್ನು ಸಂಘಟಿಸಿ, ಗೋಕುಲದ ಶ್ರೀ ಶ್ರೀ ಕೃಷ್ಣನ ಸನ್ನಿಧಿಯಲ್ಲಿ, ಮುಂಬಯಿಯಲ್ಲಿ ಪ್ರ-ಪ್ರಥಮ ಬಾರಿಗೆ, ಹಲವಾರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ವಿಚಾರ ಚಿಂತನ-ಮAಥನಗಳು ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ `ಬೃಹತ್ ಬ್ರಾಹ್ಮಣ ಸಮಾವೇಶ’ವನ್ನು, ವೈಭವೋಪೇತವಾಗಿ ಜರಗಿಸಿದ ಕೀರ್ತಿಗೆ ಪಾತ್ರವಾಗಿದೆ. ಆ ದಿನ ಗೋಕುಲದ ಯೋಜನೆಗಳು-ಗುರಿ ೨೦೨೦ರ ಉದ್ಘಾಟನೆ ನೆರವೇರಿತು.
ಈ ಯೋಜನೆಯಡಿ ಜೀರ್ಣಾವಸ್ಥೆಯಲ್ಲಿರುವ ಗೋಕುಲದ ಪುನರ್ ನಿರ್ಮಾಣ, ವಿದ್ಯಾನಿಧಿ ಸ್ಥಾಪನೆ ಹಾಗೂ ಆಶ್ರಯದ ವಿಸ್ತರಣೆ ಮುಂತಾದ ಬೃಹತ್ ಯೋಜನೆಗಳನ್ನು ಸಂಘವು ಅಳವಡಿಸಿಕೊಂಡಿದೆ. ಈ ಎಲ್ಲಾ ಯೋಜನೆಗಳು ಸುಲಲಿತವಾಗಿ ನೆರವೇರಲು, ಮಾನವನ ಪ್ರಯತ್ನದೊಂದಿಗೆ ದೈವಾನುಗ್ರಹ ಅತ್ಯಂತ ಅಗತ್ಯವೆಂದು ಕಲಿಯುಗದ ಕಾಮಧೇನು, ಶ್ರೀ ಶ್ರೀನಿವಾಸ ದೇವರ ಅನುಗ್ರಹ ಪ್ರಾಪ್ತಿಗಾಗಿ ನವಂಬರ್ ೨೯, ೨೦೧೫ ರಂದು ಷಣ್ಮುಖಾನಂದ ಸಭಾಗೃಹದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ತಿರುಮಲ ತಿರುಪತಿ ದೇವಸ್ಥಾನದ ಸಹಯೋಗದೊಂದಿಗೆ ವಿಜೃಂಭಣೆಯಿAದ ಆಚರಿಸಿದೆ.
`ಗೋಕುಲದ ಯೋಜನೆಗಳು: ಗುರಿ ೨೦೨೦’:
ವಿದ್ಯಾನಿಧಿ: ಶಿಕ್ಷಣವೆಂಬುದು ಈಗ ಅತ್ಯಂತ ದುಬಾರಿಯಾಗಿದೆ.ಹಿಂದುಳಿದ ವರ್ಗದವರಿಗೆ ಸರಕಾರ ಮೀಸಲಾತಿಯ ಸೌಲಭ್ಯವನ್ನು ಒದಗಿಸಿ ಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡುತ್ತಿದೆ. ಆದರೆ ಬ್ರಾಹ್ಮಣ ವರ್ಗದವರಿಗೆ ಪ್ರತಿಭೆಯಿದ್ದರೂ ಹಣದ ಕೊರತೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿಕೊಳ್ಳಲು ಹರ ಸಾಹಸ ಪಡಬೇಕಾಗುತ್ತದೆ. ಅದರಲ್ಲಿಯೂ ವೃತ್ತಿಪರ ಶಿಕ್ಷಣವೆಂಬುದು ಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ. ಹೆಚ್ಚಿನ ವೃತ್ತಿಪರ ಶಿಕ್ಷಣಗಳಿಗೆ ಲಕ್ಷೋಪಲಕ್ಷ ಶಿಕ್ಷಣಶುಲ್ಕ, ದುಬಾರಿ ಪುಸ್ತಕಗಳು, ವಿದ್ಯಾಥಿüð ನಿಲಯ ವೆಚ್ಚಗಳು ಮುಂತಾದುವುಗಳನ್ನು ಹೊಂದಿಸಲು ಅವರಿಗೆ ಅತ್ಯಂತ ಕಷ್ಟದಾಯಕ.
ಸರಕಾರ, ರಾಜಕೀಯ ಧುರೀಣರು ಅಥವಾ ಶ್ರೀಮಂತ ವರ್ಗದವರು ಇಂತಹಾ ಮಕ್ಕಳಿಗೆ ಸಹಾಯ ಒದಗಿಸಲು ಮುಂದೆ ಬರುವುದಿಲ್ಲ. ಈ ಕಷ್ಟವನ್ನು ಅರಿತ ಸಂಘವು, ಆರ್ಥಿಕವಾಗಿ ದುರ್ಬಲ ಆಗಿರುವ ಪ್ರತಿಭಾವಂತ ವಿದ್ಯಾಥಿüð / ವಿದ್ಯಾಥಿüðನಿಯರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವ ಧ್ಯೇಯವನ್ನು ಇಟ್ಟುಕೊಂಡು, ಅಂತಹವರಿಗೆ ಸಾಲ ರೂಪದ ವಿದ್ಯಾರ್ಥಿ ವೇತನವನ್ನು ನೀಡುವುದಕ್ಕಾಗಿ `ವಿದ್ಯಾನಿಧಿ’ಯನ್ನು ಸ್ಥಾಪಿಸಿದೆ.
ಈ ಯೋಜನೆಯ ಅಡಿಯಲ್ಲಿ ವಿದ್ಯಾಥಿüðಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸುವವರೆಗಿನ ಸಂಪೂರ್ಣ ಶುಲ್ಕ, ಪುಸ್ತಕಗಳ ಹಾಗೂ ಇನ್ನಿತರ ವೆಚ್ಚವನ್ನು ಸಂಘವು ಭರಿಸುತ್ತದೆ. ಸಾಲ ರೂಪದ ವಿದ್ಯಾಥಿüð ವೇತನವನ್ನು ಪಡೆದ ವಿದ್ಯಾಥಿüðಗಳು ತಮಗೆ ಉದ್ಯೋಗ ದೊರಕಿದ ನಂತರ ಸುಲಭ ಕಂತಿನ ಮೂಲಕ ಈ ಸಾಲವನ್ನು ಬಡ್ಡಿ ರಹಿತ ಹಿಂತಿರುಗಿಸಬಹುದಾಗಿದೆ.
ಹಿರಿಯ ನಾಗರಿಕರ ಆಶ್ರಯಧಾಮ : ಹನ್ನೊಂದು ವರ್ಷಗಳ ಹಿಂದೆ ನೇರುಲ್ ನಲ್ಲಿ ಸ್ಥಾಪಿಸಿದ `ಹಿರಿಯ ನಾಗರಿಕರ ಆಶ್ರಯಧಾಮ-ಆಶ್ರಯ’ ಇಂದು ಅತ್ಯಂತ ಹೆಸರುವಾಸಿಗಿದ್ದು, ಮುಂಬಯಿ ಹಾಗೂ ನವಿ ಮುಂಬಯಿಯಲ್ಲಿ ಪ್ರತಿಷ್ಠಿತ ಸಂಸ್ಥೆಯೆAಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೯ ಸುಸಜ್ಜಿತ ಕೋಣೆಗಳನ್ನು ಹೊಂದಿರುವ ಆಶ್ರಯದಲ್ಲಿ ಸುಮಾರು ೪೫ ಮಂದಿ ಹಿರಿಯರು ತಮ್ಮ ಬಾಳಿನ ಮುಸ್ಸಂಜೆಯನ್ನು ಅತ್ಯಂತ ನೆಮ್ಮದಿಯಿಂದ ಕಳೆಯುತ್ತಿದ್ದಾರೆ.
ಸುಸಜ್ಜಿತವಾದ ಆರೋಗ್ಯ ಕೇಂದ್ರ, ವಾಚನಾಲಯ ಮುಂತಾದ ಮೂಲಭೂತ ಸೌಕರ್ಯಗ -ಳನ್ನು ಹೊಂದಿರುವ ಆಶ್ರಯದಲ್ಲಿ ಹಿರಿಯರಿಗಾಗಿ ಭಜನೆ, ರಸಮಂಜರಿ, ಪ್ರವಚನ ಮುಂತಾದ ವೈವಿಧ್ಯಮಯ ಸಾಂಸ್ಕöÈತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಪ್ರತಿನಿತ್ಯವೂ ವೈದ್ಯರು ಆಶ್ರಯಕ್ಕೆ ಭೇಟಿಯನ್ನಿತ್ತು ಎಲ್ಲರನ್ನು ಪರೀಕ್ಷಿಸುವರಲ್ಲದೆ, ತುರ್ತು ಸಮಯದಲ್ಲಿ ಕೂಡಾ ಉಪಲಬ್ಧವಿರುತ್ತಾರೆ. ಇಂದಿನ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹಿರಿಯರ ಆಶ್ರಯಧಾಮದ ಬೇಡಿಕೆ ಹೆಚ್ಚಾಗುತ್ತಿದೆ. ಈ ವಾಸ್ತವ ಸ್ಥಿತಿಯನ್ನು ಅರಿತುಕೊಂಡAತಹ ಬಿಎಸ್ಕೆಬಿಎ, ಮುಂದಿನ ವರ್ಷಗಳಲ್ಲಿ ಆಶ್ರಯದ ಕಟ್ಟಡದಲ್ಲಿ ಒಂದು ಮಹಡಿಯನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ಗೋಕುಲದ ಪುನರ್ ನಿರ್ಮಾಣ: ಸುಮಾರು ೬೫ ವರ್ಷಗಳಷ್ಟು ಪುರಾತನವಾದ ಗೋಕುಲದ ಕಟ್ಟಡ ಜೀರ್ಣಾವಸ್ಥೆಯಲ್ಲಿತ್ತು. ಅಲ್ಲದೆ ಗೋಕುಲದ ಶ್ರೀ ಗೋಪಾಲಕೃಷ್ಣನ ಭಕ್ತರ ಸಂಖ್ಯೆ ಮುಂಬಯಿ ಹಾಗೂ ಉಪನಗರಗಳಲ್ಲಿ ದಿನೇದಿನೇ ಹೆಚ್ಚುತ್ತಿದ್ದು, ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ, ಸ್ಥಳದ ಅಭಾವದಿಂದ ಭಕ್ತಾದಿಗ ಳಿಗೆ ಅನನುಕೂಲತೆ, ಆಧುನಿಕತೆಯ ಸೌಲಭ್ಯಗಳ ಕೊರತೆ ಮುಂತಾದುವುಗಳನ್ನು ಮನಗಂಡು ಸಂಘದ ಕಾರ್ಯಕಾರೀ ಸಮಿತಿಯು, ಪ್ರತ್ಯೇಕ ಶ್ರೀ ಕೃಷ್ಣ ಮಂದಿರ, ಹವಾ ನಿಯಂತ್ರಿತ ಸಭಾಗೃಹ, ಲಿಫ್ಟ್ ಸೌಕರ್ಯ, ಸುಸಜ್ಜಿತ ಪಾಕಶಾಲೆ, ವಾಚನಾಲಯ, ವಸತಿ ಗೃಹ, ಆಡಳಿತ ಕಚೇರಿ, ಸಮಾಲೋಚನಾ ಗೃಹ ಸಾಂಸ್ಕöÈತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಭಾಗೃಹ, ವಾಹನಗಳ ನಿಲುಗಡೆಯ ಸೌಕರ್ಯ ಮುಂತಾದ ಅಧುನಿಕ ಸೌಕರ್ಯಗಳನ್ನೊಳಗೊಂಡ ಗೋಕುಲದ ಪುನ:ನಿರ್ಮಾಣದ ಯೋಜನೆ ೨೦೧೫ರಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳುವ ಸಂಕಲ್ಪವನ್ನು ಮಾಡಿತು.
ಜೀರ್ಣಾವಸ್ಥೆಯಲ್ಲಿದ್ದ ಗೋಕುಲದ ಪುನರ್ ನಿರ್ಮಾಣ ಕಾರ್ಯವು ಪ್ರಸ್ತುತ ಅಧ್ಯಕ್ಷರಾ
ಗಿರುವ ಡಾ. ಸುರೇಶ್ ರಾವ್ ರವರ ನೇತೃತ್ವದಲ್ಲಿ ಆರಂಭವಾಗಿ, ಡಿಸೆಂಬರ್ ೨೦೧೬ನಲ್ಲಿ ಇಲ್ಲಿನ ಆರಾಧ್ಯ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ಮೂಲಾಲಯದಿಂದ ಚಲನೆಗೊಳಿಸಿ ವೈಭವದ ಮೆರವಣಿಗೆಯೊಂದಿಗೆ ನೆರೂಲ್ ನಲ್ಲಿರುವ ಆಶ್ರಯಕ್ಕೆ ತಂದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಮುಂದಿನ ಜನಾಂಗದ ಅನುಕೂಲತೆಗಳಿಗನುಗುಣವಾಗಿ ಆಧುನಿಕ ಸೌಲಭ್ಯಗಳುಳ್ಳ ನವ ನವೀನ ಕಟ್ಟಡ ಹಾಗೂ ಶ್ರೀ ಗೋಪಾಲಕೃಷ್ಣನ ಶಿಲಾಮಯ ಮಂದಿರದ ನಿರ್ಮಾಣ ಕಾರ್ಯ ಜನವರಿ ೨೦೧೭ ರಿಂದ ಆರಂಭ ಗೊಂಡು ಇದೀಗ ಅಂತಿಮ ಹಂತದಲ್ಲಿದೆ. ಅಂದಾಜು ರೂಪಾಯಿ ೪೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ೭ ಅಂತಸ್ತುಗಳುಳ್ಳ ಬೃಹತ್ ಸೌಧದಲ್ಲಿ ಎರಡು ತಳಮಜಲುಗಳಲ್ಲಿ ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ (ಒಟ್ಟು ೭೦ ಕಾರುಗಳು). ಅಲ್ಲದೆ ಈ ಕೆಳಗಿನ ಸೌಲಭ್ಯಗಳನ್ನು ಹೊಂದಿರುವ ಅತ್ಯಂತ ಸುಂದರವಾದ ಕಟ್ಟಡ ಇದಾಗಿದೆ.
ಈ ಭವ್ಯ ಕಟ್ಟಡದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳಿಗಾಗಿ ಸುಮಾರು ೨೨೫ ಆಸನಗಳುಳ್ಳ ೧ ಸುಸಜ್ಜಿತ ಹವಾ ನಿಯಂತ್ರಿತ ಸಭಾಗೃಹ, ೨ ದೊಡ್ಡ ಸಭಾಂಗಣಗಳು, ಭೋಜನ ಗೃಹ, ಆಧುನಿಕ ಸೌಕರ್ಯಗಳುಳ್ಳ ಮೂರು ಪಾಕಶಾಲೆ, ಸುಸಜ್ಜಿತ ವಾಚನಾಲಯ, ೫೦ ಸದ್ಯಸರು ಆಸೀನರಾಗುವ ಸಮಾಲೋಚನಾ ಕೊಠಡಿ, ಆಡಳಿತ ಕಚೇರಿ,೧೨ ಅತಿಥಿü ಕೊಠಡಿಗಳು, ಮನರಂಜನೆಗಾಗಿ ಒಳಾಂಗಣ ಕ್ರೀಡೆ ಇತ್ಯಾದಿ ಚಟುವಟಿಕೆಗಳಿಗೆ ಕೊಠಡಿ, ವಿಶಾಲವಾದ ಟೆರೇಸ್, ಮೂರು ಮೆಟ್ಟಿಲು ದ್ವಾರಗಳು, ನಾಲ್ಕು ಲಿಫ್ಟ್ಗಳು ಜನಸೇವೆಗೆ ಅನುಕೂಲಕಕರವಾಗಲಿದೆ.
ಗೋಕುಲ ಶ್ರೀ ಕೃಷ್ಣ ಮಂದಿರ:
ಮುಂಬಯಿಯ ಕೇಂದ್ರ ಬಿಂದುವಾದ ಸಾಯನ್ ನಲ್ಲಿ ೧೯೬೨.ಮಾರ್ಚ್.೧೨ ರಂದು ರಂದು. ಸ್ಥಾಪನೆಯಾದ ಶ್ರೀಕೃಷ್ಣ ಮಂದಿರದಲ್ಲಿ, ತ್ರಿಭಂಗಿಯಲ್ಲಿ ನಿಂತು ಕೊಳಲನ್ನೂದುವ, ಹಾಲು ಬಿಳುಪಿನ ಅಮೃತ ಶೀಲಾ ಮೂರ್ತಿ ಶ್ರೀ ಗೋಪಾಲಕೃಷ್ಣನ ಪ್ರತಿಷ್ಠೆಯಾದಂದಿನಿAದ ಬಿಎಸ್ಕೆಬಿ ಎಸೋಸಿಯೇಶನ್ `ಗೋಕುಲ’ ಎಂದೇ ಅತ್ಯಂತ ಪ್ರಸಿದಿ ಪಡೆದ ಹಿರಿಯ ಸಂಸ್ಥೆಯಾಗಿದೆ. ೬೦-ವರ್ಷಗಳಷ್ಟರ ಭವ್ಯ ಇತಿಹಾಸವಿರುವ ಗೋಕುಲ ಸಂಕುಲದಲ್ಲಿ ವಿರಾಜಮಾನನಾಗಿರುವ ಇಲ್ಲಿಯ ಆರಾಧ್ಯಮೂರ್ತಿ ಶ್ರೀ ಗೋಪಾಲಕೃಷ್ಣ ಮುರಲೀ ಗಾನ ಲೋಲ, ಭಕ್ತರ ಮನದಿಚ್ಛೆಯನ್ನು ಸಾಕಾರಗೊಳಿಸುವ ಮೋಹಕ ಗೋಪಾಲ ಕೃಷ್ಣ ಶ್ರೀ ಗೋಪಾಲಕೃಷ್ಣನ ಅಪಾರ.
ಭಜಕರ ದೃಷ್ಟಿಯಲ್ಲಿ ಆತ ಆಪದ್ಬಾಂಧವ, ಅನಾಥ ರಕ್ಷಕ, ಕಾಮಿತಾರ್ಥ ಪ್ರದಾಯಕ, ಭವ ರೋಗ ಹರ, ಮುಕ್ತಿದಾಯಕ. ಸಹಸ್ರನಾಮಾಂಕಿತ. ಆತನ ಮಹಿಮೆಯಿಂದಲೇ ಕೇವಲ ೧೦ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಪುಟ್ಟ ಸಂಸ್ಥೆ ಸರ್ವತೋಮುಖ ಪ್ರಗತಿ ಕಾಣುತ್ತಾ ಇಂದು ೫೫೦೦ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು ಹೆಮ್ಮರವಾಗಿ ಬೆಳೆಯಿತು ಎಂದು ಸದಸ್ಯರೆಲ್ಲರ ಅಪಾರ ನಂಬಿಕೆ. ಸಂಸ್ಥೆಯ ಆರಾಧ್ಯ ಮೂರ್ತಿಯ ಸನ್ನಿಧಾನದಲ್ಲಿ ವರ್ಷವಿಡೀ ಜರಗುವ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಂದ ಜನರನ್ನು ತನ್ನತ್ತ ಆಕರ್ಷಿಸುವ ಪ್ರಸಿದ್ಧ ದೇವಸ್ಥಾನವಾಗಿ ಮೆರೆಯುತ್ತಿದೆ.
ಉಡುಪಿ ಕಡೆಗೋಲು ಕೃಷ್ಣನಿಗೂ ಗೋಕುಲ ಗೋಪಾಲಕೃಷ್ಣನಿಗೂ ಅವಿನಾಭಾವ ಸಂಬAಧ. ದ್ವಾರಕೆಯಲ್ಲಿ ರುಕ್ಮಿಣಿ ಕರಾರ್ಚಿತ ಕೃಷ್ಣಶಿಲಾ ಕಡೆಗೋಲು ಕೃಷ್ಣ, ತನ್ನ ಭಕ್ತರನ್ನು ಅರಸಿಕೊಂಡು ಸಮುದ್ರ ಮುಖೇನ ಬಂದು, ಶ್ರೀ ಮನ್ಮಧ್ವಾಚಾಚಾರ್ಯ ಅವರಿಗೊಲಿದು, ಕರಾವಳಿ ತೀರ ಉಡುಪಿಯಲ್ಲಿ ನೆಲೆಸಿ ಪೂಜಿಸಲ್ಪಡುತ್ತಾ ಹೇಗೆ ಭಕ್ತಾದಿಗಳಿಗೆ ಆರಾಧ್ಯನಾಗಿದ್ದಾನೋ, ಅಂತೆಯೇ ಕರಾವಳಿ ತೀರದಿಂದ ಬಂದು ಮುಂಬಯಿ ಮಹಾನಗರಿಯಲ್ಲಿ ನೆಲೆಸಿದ ತನ್ನ ಅಪಾರ ಭಕ್ತರಿಗೆ ಅಮೃತ ಶಿಲಾಮೂರ್ತಿಯಾಗಿ, ಗೋಪಾಲಕೃಷ್ಣನಾಗಿ, ಆರಾಧ್ಯ ಮೂರ್ತಿಯಾಗಿ ಗೋಕುಲದಲ್ಲಿ ನೆಲೆ ನಿಂತು ಹರಸುತ್ತಿದ್ದಾನೆ.
ಗೋಕುಲ ಶ್ರೀ ಕೃಷ್ಣನ ಪ್ರತಿಷ್ಠೆಯಾದಂದಿನಿAದಲೂ, ಉಡುಪಿ ಅಷ್ಟಮಠದ ಯತಿಗಳು ತಂತಮ್ಮ ಪರ್ಯಾಯ ಪೂರ್ವಭಾವಿ ಧರ್ಮ ಪ್ರಸರಣ ನಿಮಿತ್ತ ಸಂಚಾರಕ್ಕೆ ಮುಂಬಯಿ ಮಹಾನಗರಿಗೆ ಪುರಪ್ರವೇಶ ಮಾಡುವಾಗ, ಮೊದಲು ಗೋಕುಲ ಶ್ರೀ ಕೃಷ್ಣನ ದರ್ಶನ ಪಡೆದು ಆತನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ಭಕ್ತರನ್ನು ಅನುಗ್ರಹಿಸಿ, ತಮ್ಮ ಮುಂದಿನ ಕಾರ್ಯಕ್ಕೆ ತೆರಳುವುದು, ಚಾತುರ್ಮಾಸ್ಯಕ್ಕಾಗಿ ಆಗಮಿಸಿದಾಗ ಕೂಡಾ ಇದೇ ಸಂಪ್ರದಾಯವನ್ನು ಇರಿಸಿಕೊಂಡಿರುವುದು ಈ ಮಾತಿಗೆ ಪುರಾವೆ ಒದಗಿಸುತ್ತದೆ.
ಈ ಗೋಕುಲ ಸುಕ್ಷೇತ್ರದಲ್ಲಿ, ತಾಯ್ನಾಡಿನ ಸಂಸ್ಕಾರ, ಸಂಸ್ಕöÈತಿಗಳನ್ನು ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬಂದು, ವರ್ಷವಿಡೀ ಧಾರ್ಮಿಕ ಕಾರ್ಯಗಳಾದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಶಂಕರ ಜಯಂತಿ, ಶ್ರೀ ನರಸಿಂಹ ಜಯಂತಿ, ಶ್ರೀ ಮಧ್ವ ನವಮಿ, ಶ್ರೀ ಪುರಂದರ ದಾಸರ ಆರಾಧನೆ, ಗುರು ರಾಘವೇಂದ್ರ ಸ್ವಾಮಿ ಆರಾಧನೆ, ಶಿವರಾತ್ರಿ, ದೀಪಾರಾಧನೆ, ತುಳಸಿ ಪೂಜೆ ಹಾಗೂ ಬ್ರಾಹ್ಮಣ ಸಂಪ್ರದಾಯದAತೆ ಉಪಾಕರ್ಮ, ಸಾಮೂಹಿಕ ಉಪನಯನ, ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು, ಭಜನೆ, ನೃತ್ಯ, ನಾಟಕ, ಯಕ್ಷಗಾನ ಮುಂತಾದ ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾ ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುತ್ತಿದೆ.
ನೂತನ ಶ್ರೀ ಕೃಷ್ಣ ಮಂದಿರವನ್ನೊಳಗೊAಡ ಗೋಕುಲದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವು ರವಿವಾರ ೨, ಜುಲೈ.೨೦೧೭ರಂದು ಹರಿಪಾದೈಕ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಪರಮಪೂಜ್ಯರುಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು, ಅದಮಾರು ಮಠ, ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪಲಿಮಾರು ಮಠ, ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠ ಹಾಗೂ ವೇದಮೂರ್ತಿ ಶ್ರೀ ಕಮಲಾಪ್ರಸಾದ ಅಸ್ರಣ್ಣ, ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ಇವರುಗಳ ದಿವ್ಯ ಉಪಸ್ಥಿತಿ ಹಾಗೂ ಅಮೃತ ಹಸ್ತಗಳಿಂದ ನೆರವೇರಿತ್ತು.
ಗೋಕುಲ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸದ ಧಾರ್ಮಿಕ ವಿಧಿಗಳು ಹಾಗೂ ಸಾಂಕೇತಿಕ ಶಿಲಾನ್ಯಾಸವು ಬುಧವಾರ ದಿನಾಂಕ ೧೨.ಜೂನ್.೨೦೧೯ ರಂದು ನೆರವೇರಿತು. ಗೋಕುಲದ ಮಹಾ ಪೋಷಕರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಜೂನ್ ೨೪ ರಿಂದ ೩೦ ರವರೆಗೆ ಏಳು ದಿನಗಳ ಕಾಲ ಮುಂಬಯಿಯಲ್ಲಿ ವಾಸ್ತವ್ಯವಿದ್ದು ಶ್ರೀ ಕೃಷ್ಣ ಮಂದಿರದ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡುವುದರೊಂದಿಗೆ ಕಟ್ಟಡ ನಿಧಿ ಸಂಗ್ರಹಕ್ಕೆ ಸಹಕರಿಸಿ ಅಣುಹ್ರಹಿಸಿದ್ದಾರೆ. ಆ ಏಳು ದಿನಗಳಲ್ಲಿ ಏಳು ಕಡೆಗಳಲ್ಲಿ ೮ ಬಾರಿ ಶ್ರೀಪಾದಂಗಳವರು ಹಾಗೂ ಅವರ ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ ಭಕ್ತಾದಿಗಳಿಂದ ಮುಂಬಯಿಯಲ್ಲಿ ಪ್ರ-ಪ್ರಥಮ ಬಾರಿಗೆ ರಜತ ತುಲಾಭಾರ ಸೇವಾ ಸಪ್ತಾಹ ನ ಭೂತೋ ನ ಭವಿಷ್ಯತಿ ಎಂಬAತೆ ಜರಗಿ ದಾಖಲೆ ನಿರ್ಮಿಸಿತು.
ದಿನಾಂಕ ೩೦.ಜೂನ್,೨೦೧೯ ರಂದು ಪ.ಪೂ. ಗುರುಗಳಾದ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀಕ್ಷೇತ್ರ ಕಟೀಲುವಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷಿ ್ಮÃನಾರಾಯಣ ಅಸ್ರಣ್ಣ ಅವರ ಅಮೃತ ಹಸ್ತದಿಂದ ಹಾಗೂ ಇನ್ನಿತರ ಗಣ್ಯಾತಿಗಣ್ಯರ ಹಸ್ತದಿಂದ ಸಾರ್ವಜನಿಕ ಶಿಲಾನ್ಯಾಸ ನೆರವೇರಿತು. ಆ ದಿನ ನೂರಾರು ಗಣ್ಯ ವ್ಯಕ್ತಿಗಳು ಹಾಗೂ ಶ್ರೀ ಕೃಷ್ಣನ ಭಕ್ತಾದಿಗಳು ಉಪಸ್ಥಿತರಿದ್ದು ಅತ್ಯಂತ ವೈಭವದಿಂದ ಜರಗಿದ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ಭಗವದನುಗ್ರಹಕ್ಕೆ ಪಾತ್ರರಾದರು. ಈ ಎಲ್ಲಾ ಪೂಜನೀಯರೂ, ಗೌರವಾನ್ವಿತ ಗಣ್ಯ ವ್ಯಕ್ತಿಗಳ ಹಾಗೂ ಶ್ರೀ ಗೋಪಾಲಕೃಷ್ಣನ ಅನುಗ್ರಹದಿಂದ ನಿರ್ಮಾಣ ಕಾರ್ಯ ಅಡೆತಡೆಯಿಲ್ಲದೆ ಮುಂದುವರೆಯುವAತಾಯಿತು.
ಶ್ರೀಪಾದಂಗಳವರ ತುಲಾಭಾರ ಸೇವೆಯಿಂದ ಸಂಗ್ರಹವಾದ ಬೆಳ್ಳಿ ಹಾಗೂ ದೇಣಿಗೆಗಳು ಮತ್ತು ಶ್ರೀಯವರಿಗೆ ಅರ್ಪಿಸಿದ ಪಾದ ಕಾಣಿಕೆ ಇತ್ಯಾದಿಗಳನ್ನು ಗೋಕುಲ ಮಂದಿರದ ನಿರ್ಮಾಣ ಕಾರ್ಯಕ್ಕೆ ವಿನಿಯೋಗಿಸಲು ಶ್ರೀಯವರು ಶ್ರೀ ಕೃಷ್ಣಾನುಗ್ರಹ ಹಾಗೂ ತಮ್ಮ ಶುಭಾಶೀರ್ವಾದದೊಂದಿಗೆ ಅನುಗ್ರಹಿಸಿದ್ದಾರೆ. ಜೀವಮಾನದಲ್ಲಿ ಒಂದು ಬಾರಿ ಒದಗಿ ಬರುವ ಈ ಅಪೂರ್ವ ಕಾರ್ಯಕ್ಕೆ ಭಕ್ತಾದಿಗಳೆಲ್ಲಾ ತಮ್ಮ ತನು-ಮನ-ಧನದ ಸಹಕಾರವನ್ನಿತ್ತು ಬೆಂಬಲಿಸಿ ಇಲ್ಲಿನ ಆರಾಧ್ಯ ಮೂರ್ತಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ನೂತನವಾಗಿ ನಿರ್ಮಾಣವಾಗುತ್ತಿರುವ ಗೋಕುಲ ಕಟ್ಟಡದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ನ ಹಲವು ವೈಶಿಷ್ಟ ್ಯಗಳು ಈ ಕೆಳಗಿನಂತಿವೆ: ೩೮ ಅಡಿ ಎತ್ತರದ ಬೃಹತ್ ಗೋಪುರವನ್ನೊಳಗೊಂಡ ಸುಂದರ ಗೋಪಾಲಕೃಷ್ಣ ದೇವಾಲಯ, ೧೪ ಅಡಿ ಎತ್ತರದ ಮರದ ಕೆತ್ತನೆಯುಳ್ಳ ಮಹಾದ್ವಾರ, ತೇಗದ ಮರ ಹಾಗೂ ಕಂದು ಕಲ್ಲಿನಿಂದ ರಚಿತ ಅಲಂಕಾರಿಕ ತೀರ್ಥ ಮಂಟಪ, ಕುಸುರಿ ಕೆತ್ತನೆಗಳಿಂದ ರಚಿಸಲ್ಪಟ್ಟ ಕಂದು ಶಿಲಾಮಯ ಗರ್ಭಗುಡಿ, ಅದರಲ್ಲಿ ಕಪುö್ಪ ಕಲ್ಲಿನ ೪೪ ಕೇಶವಾದಿ ಮೂರ್ತಿಗಳು, ಮಂದಿರದ ಮುಂಭಾಗದಲ್ಲಿರುವ ಹವಾ ನಿಯಂತ್ರಿತ ಸಭಾಗೃಹದಲ್ಲಿ ಶ್ರೀ ಕೃಷ್ಣಾವತಾರದ ವಿವಿಧ ರೂಪಗಳ ಮರದ ಕೆತ್ತನೆಗಳು.
ಅಲ್ಲದೆ ಗೋಡೆಗಳಲ್ಲಿ ಸ್ವರ್ಣ ಲೇಪಿತ ದಶಾವತಾರ ಮೂರ್ತಿಗಳು. ಕೊರೋನಾ ಮಹಾಮಾರಿಯಿಂದಾಗಿ ೨-೩ ತಿಂಗಳುಗಳ ಕಾಲ ಕೆಲಸ ಸ್ಥಗಿತಗೊಂಡರೂ, ದೈವಾನುಗ್ರಹದಿಂದ ಮತ್ತೆ ಭರದಿಂದ ಕಾರ್ಯ ಸಾಗುತ್ತಾ ಸುಮಾರು ನಾಲ್ಕೂವರೆ ವರ್ಷಗಳ ನಿರಂತರ ಕಾಮಗಾರಿಯ ನಂತರ, ಮುಂದಿನ ಕೆಲವೇ ಕೆಲವು ತಿಂಗಳುಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಗೊಳ್ಳಲಿದೆ. ಸದ್ಯ ಬಾಲಾಲಯ -ದಲ್ಲಿ ಇರುವ ಶ್ರೀ ಗೋಪಾಲಕೃಷ್ಣ, ಪ್ರಸಿದ್ಧ ವಾಸ್ತು ತಜ್ಞರ ನಿರ್ದೇಶನದಂತೆ ರೂಪುಗೊಂಡು, ಕೆತ್ತನೆ ಕುಸುರಿಗಳು, ದಾರು ಶಿಲ್ಪಗಳು, ಆಕರ್ಷಕ ಗೋಪುರದಿಂದ ಕೂಡಿದ ನೂತನ ಶಿಲಾಮಯ ದೇಗುಲದಲ್ಲಿ, ಶೀಘ್ರದಲ್ಲಿಯೇ ಪ್ರತಿಷ್ಠೆಗೊಳ್ಳಲಿದ್ದಾನೆ. ೪೪ ನಾಮಾಂಕಿತ ದೇವತಾ ಮೂರ್ತಿಗಳೊಂದಿಗೆ ಮಂದಿರ ಕಂಗೊಳಿಸಿ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಲಿದೆ.
ಮಂದಿರದ ಗರ್ಭಗೃಹದ, ದ್ವಾರಕಂಬದ, ಅಡಿಪಾಯದ, ಗೋಪುರದ, ಮುಖದ್ವಾರದ ಪ್ರತಿಯೊಂದು ಶಿಲೆಗಳು, ದೇವತಾ ಮೂರ್ತಿಗಳು, ದ್ವಾರ ಶಿಲಾಕಂಬಗಳು, ಸದಾಕಾಲ ಕೃಷ್ಣಾ ಕೃಷ್ಣಾ ಎಂದು ಹೇಳುವಂತೆ ನಮ್ಮ ಕಣ್ಣಿಗೆ ಗೋಚರಿಸಲಿವೆ. ಆಧುನಿಕ ಸವಲತ್ತು ಸೌಲಭ್ಯಗಳಿಂದ ಸಜ್ಜಾದ ನೂತನ ಗೋಕುಲ ಭವನ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ, ಸುಂದರ ಶ್ರೀ ಕೃಷ್ಣ ಮಂದಿರ ಲೋಕಾರ್ಪಣೆಗೊಂಡು ಸದಸ್ಯ ಬಾಂಧವರನ್ನು ಮತ್ತು ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಲು ಸಜ್ಜಾಗುತ್ತಿದೆ. ಶ್ರೀ ಕೃಷ್ಣ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದೆ.
ಭಕ್ತಾಭಿಮಾನಿಗಳೇ, ಗೋಕುಲದ ನೂತನ ಮಂದಿರದಲ್ಲಿ ಶ್ರೀಕೃಷ್ಣನನ್ನು ಕಣ್ತುಂಬಾ ನೋಡಿ ಆನಂದಿಸಿ ಜನ್ಮ ಸಾರ್ಥಕ ಪಡೆಯುವ ಸಮಯ ಸನ್ನಿಹಿತವಾಗಿದೆ.