ಸುದ್ದಿ9 ಇಸ್ಲಾಮಾಬಾದ್: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಲವಂತವಾಗಿ ಪಾಕಿಸ್ತಾನಕ್ಕೆ ವಲಸೆ ಬಂದಿರುವ ಹಿಂದೂಗಳು ತಾಯ್ನಾಡಿಗೆ ಮರಳಬಹುದು ಎಂದು ಪಾಕಿಸ್ತಾನ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಉಚ್ಛಾಟನೆಗೆ ಆಗ್ರಹಿಸಿ ಪಾಕಿಸ್ತಾನ ಸಂಸತ್ ಎದುರು ನಡೆಯುತ್ತಿರುವ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದಾಗ ಇಮ್ರಾನ್ ಖಾನ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಹಿಂದೂಗಳು ಮತ್ತು ಕಲಾಶ್ ಜನಾಂಗದವರು ಒತ್ತಡಕ್ಕೆ ಮಣಿದು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದ್ದು, ನನಗೆ ಬೇಸರ ತರಿಸಿದೆ. ಮುಸಲ್ಮಾನರು ತಮ್ಮ ಉತ್ತಮ ವರ್ತನೆಯಿಂದ ಇಸ್ಲಾಂ ಪ್ರಚಾರ ಮಾಡಬೇಕೇ ಹೊರತು ಒತ್ತಡದಿಂದಲ್ಲ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ತೆಹ್ರಿಕ್ ಇ ಇಸ್ಲಾಂ ಪಕ್ಷ ಅಧಿಕಾರಕ್ಕೆ ಬಂದರೆ ಮುಹಮ್ಮದ್ ಅಲಿ ಜಿನ್ನಾರ ಆಶಯಗಳಂತೆ ಅಲ್ಪಸಂಖ್ಯಾತರಿಗೆ ಭದ್ರತೆ, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ನೀಡಲಾಗುವುದು ಎಂದರು.

ಇನ್ನು ಇದೇ ವೇಳೆ ಪಾಕಿಸ್ತಾನ ತೆಹ್ರಿಕ್ ಇ ಇಸ್ಲಾಂ ಪಕ್ಷದ ವತಿಯಿಂದ ಅಲ್ಪಸಂಖ್ಯಾತರ ದಿನವನ್ನು ಸಹ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಸಿಖ್ಖ್ ಜನಾಂಗದವರು ಭಾಗವಹಿಸಿದ್ದರು. ಅಲ್ಲದೆ ಹಿಂದೂಗಳ ಜೊತೆ ದೀಪಾವಳಿಯನ್ನೂ ಸಹ ಆಚರಿಸಲಾಯ್ತು.

 

Imran_Khan

By suddi9

Leave a Reply

Your email address will not be published. Required fields are marked *