ಸುದ್ದಿ9ಮೂಡುಬಿದರೆ : ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿಯು ಮಂಗಳೂರು ವಿ.ವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚಿಗೆ ಏರ್ಪಡಿಸಿದ ಕನ್ನಡ ಕಲಾ ಪ್ರತಿಭೋತ್ಸವದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸಲ್ಲಿಸುತ್ತಿವ ಅನುಪಮ ಸೇವೆಯನ್ನು ಗುರುತಿಸಿ ಸಾರಿಗೆ ಉದ್ಯಮಿ ನಾರಾಯಣ.ಪಿ.ಎಂ ಅವರಿಗೆ ಕನರ್ಾಟಕ ಕಲಾಶ್ರೀ ರಾಜ್ಯ ಪುಸ್ಕಾರವನ್ನು ನೀಡಿ ಗೌರವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ್ ರೈ ಪ್ರಶಸ್ತಿ ಪ್ರಧಾನ ಮಾಡಿದರು. ನಾರಾಯಣ ಪಿ.ಎಂ ಅವರು ಕಳೆದ ಮೂರು ದಶಕಗಳಿಗೂ ಅಧಿಕ ಕಾಲದಿಂದ ಮೂಡುಬಿದರೆಯಲ್ಲಿ ನಿಶ್ಮಿತಾ ಮೋಟಾರ್ಸ್ ಹಾಗೂ ಸುಗಮ ಟೂರಿಸ್ಟ್ ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದು ಉತ್ತಮ ಹೆಸರು ಗಳಿಸಿದ್ದಾರೆ. ಮೂಡುಬಿದರೆಯ ರೋಟರಿ ಎಜ್ಯುಕೇಶನ್ ಸೊಸೈಟಿ ಕಾರ್ಯದಶರ್ಿಯಾಗಿ ಮತ್ತು ರೋಟರಿ ಕ್ಲಬ್ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿರುವುದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.
