ಮುಂಬಯಿ : ಮುಂಬಯಿ ಉಪನಗರದ ಮಿನಿ ಮಂಗಳೂರು ಪ್ರಸಿದ್ಧಿಯ ಉಪನಗರ ಮೀರಾರೋಡ್ ಪೂರ್ವದ ಸೀತಲ್ ನಗರದಲ್ಲಿನ ಸಂತ ಜೋಸೆಫ್’ಸ್ ಇಗರ್ಜಿಯಲ್ಲಿನ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್‌ನ (ಎಸ್‌ಜೆಕೆಡಬ್ಲ್ಯೂಎ) ಸಂಸ್ಥಾಪರಲ್ಲೋರ್ವರಾಗಿದ್ದ ಹಾಲಿ ಅಧ್ಯಕ್ಷ ಜೋನ್ ಕ್ರಾಸ್ತ (೫೮) ಎ.೧೯ ರಂದು  ಸೋಮವಾರ ಸಂಜೆ ಮೆದುಳುಘಾತದಿಂದ ಭಯಂದರ್ ಪೂರ್ವದಲ್ಲಿನ ಮೆಡಿಟೆಕ್ ಆಸ್ಪತ್ರೆಯಲ್ಲಿ ನಿಧನರಾದರು. Live gaming features a variety of https://casinodulacleamy.com/ new live dealer games and a variety of casino games. 1 John Crata Mira Roadಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಆಗ್ರಾರ್ ಮೂಲತಃ ಇವರು ಸಮಾಜ ಸೇವಾಕರ್ತರಾಗಿದ್ದು ಸ್ಥಾನೀಯವಾಗಿ ಕ್ರಿಯಾಶೀಲರಾಗಿ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು. ಮೃತರು, ಪತ್ನಿ ಓರ್ವ ಸುಪುತ್ರ, ಸುಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಕಳೆದ ಅನೇಕ ದಶಕಗಳಿಂದ  ಮೀರಾರೋಡ್‌ನಲ್ಲಿ ಸುಮಾರು ಎರಡುವರೆ ದಶಕಗಳಿಂದ ಶಾನ್ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರು.John Crata Mira Road (B)೨೦೧೪ರಲ್ಲಿ  ಮೀರಾರೋಡ್ ಪೂರ್ವದಲ್ಲಿ ಕರಾವಳಿ ಕರ್ನಾಟಕದ ಕ್ರೈಸ್ತ ಸಮುದಾಯದ ಸಂಸ್ಕೃತಿ ಸಾರುವ, ಪ್ರಾಚೀನ ಕಾಲದಲ್ಲಿನ ಕ್ರೈಸ್ತ ಸಮಾಜದ ಪೂರ್ವಜರ ಬದುಕು ಬಿಂಬಿಸುವ ಎರಡು ದಿನಗಳ ಕೊಂಕಣಿ ಉತ್ಸವ ಮತ್ತು ಆಹಾರೋತ್ಸವ ಆಯೋಜಿಸಿ ಬಾರೀ ಜನಮನ್ನಣೆ ಪಡೆದಿದ್ದರು. ಇದೇ ಸಮಯ ತನ್ನ ಉತ್ಸುಕತೆಯಲ್ಲಿ ಕೆಡಬ್ಲ್ಯೂಎ ಸಹಯೋಗದೊಂದಿಗೆ ಇಗರ್ಜಿಯ ಆವರಣದಲ್ಲೇ ಪ್ರಾಚೀನ ಕಾಲದ ಕ್ರೈಸ್ತರ ಸಂಸ್ಕೃತಿ ಸಾರುವ ವೈಶಿಷ್ಟ್ಯಮಯ ವಸ್ತುಗಳ ಸಂಗ್ರಹಣೆಯ ಮಾಟೋವ್ ಸೋಭಾಣಾಚ್ಯೊ ವಸ್ತು (ಮದುವೆ ಚಪ್ಪರ ಸೋಭಿಸುವ ವಸ್ತುಗಳು) ನಾಮದಲ್ಲಿ ಶಾಸ್ವತವಾದ ವಸ್ತುಪ್ರದರ್ಶನ ಕೊಠಡಿ ರೂಪಿಸಿದ್ದರು. ಮುಂಬಯಿನಾದ್ಯಂತ ಜರುಗುತ್ತಿದ್ದ ಕರಾವಳಿ ಕರ್ನಾಟಕದ ಕ್ರೈಸ್ತ ಸಮುದಾಯದ ಮದುವೆ (ರೋಸ್) ಕಾರ್ಯಕ್ರಮದಲ್ಲಿ ಸ್ವತಃ ಗುರಿಕಾರನಂತೆ ಪಾಲ್ಗೊಂಡು ನವಪೀಳಿಗೆಗೆ ಕ್ರೈಸ್ತ ಪರಂಪರೆಯನ್ನು ಪರಿಚಯಿಸುತ್ತಿದ್ದಂತೆಯೇ ಮದುವೆ ಸಮಾರಂಭಕ್ಕೂ ಹಳೆ ಸಂಸ್ಕೃತಿಯ ಕಳೆಯನ್ನು ನೀಡುತ್ತಿದ್ದರು.John Crata Mira Road (A)ಕೊಂಕಣಿ, ತುಳು, ಕನ್ನಡ ನಾಟಕ ತಂಡಗಳನ್ನು ಆಹ್ವಾನಿಸಿ ಸದಾ ಮೀರಾರೋಡ್‌ನಲ್ಲಿ ಅದೆಷ್ಟೋ ನಾಟಕಗಳನ್ನು ಪ್ರದರ್ಶಿಸಿ ಕರುನಾಡ ಜನತೆಯನ್ನು ಒಗ್ಗೂಡಿಸಿ ಪ್ರೋತ್ಸಹಿಸುತ್ತಿದ್ದರು. ಓರ್ವ ಸರಳ ಸಜ್ಜನ ಮಿತಭಾಷಿ ವ್ಯಕ್ತಿತ್ವವನ್ನು ಮೈಗೂಡಿಸಿದ್ದ ಜೋನ್ ಅಪರೂಪದ ಸಂಘಟಕ, ಉದ್ಯಮಿ ಆಗಿದ್ದು ಸದಾ ತೆರೆಯ ಮರೆಯಲ್ಲಿದ್ದೇ ಸೇವೆಯಲ್ಲಿ ತೊಡಗಿಸುತ್ತಿದ್ದರು. ಮಾಧ್ಯಮ ಮಿತ್ರರ ಒಳನಾಟದಲ್ಲಿದ್ದ -ರೂ ಎಂದೂ ಸ್ವಪ್ರಚಾರ ಬಯಸದೆ ಮಾಧ್ಯಮ ವಕ್ತಾರರಂತೆ ಸಹಕರಿಸುತ್ತಿದ್ದರು. ಸಂತ ಜೋಸೆಫ್’ಸ್ ಇಗರ್ಜಿಯ ಪ್ರಧಾನ ಧರ್ಮಗುರು, ಎಸ್‌ಜೆಕೆಡಬ್ಲ್ಯೂಎ ಆಧ್ಯಾತ್ಮಿಕ ನಿರ್ದೇಶಕ ರೆ| ಫಾ| ಮೆಲ್ವಿನ್ ಡಿ’ಕುನ್ಹಾ (ಒಸಿಡಿ) ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *