ಶ್ರೀನಗರ: ಪ್ರತ್ಯೇಕವಾದಿ ಸಂಘಟನೆಗಳಿಂದ ಪ್ರಧಾನಮಂತ್ರಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟ ಹಿನ್ನಲೆಯಲ್ಲಿ ಕರೆದಿದ್ದ ಮುಷ್ಕರಕ್ಕೆ ಮಿಶ್ರ ಪ್ರತಿಕೆಯಿ ಬಂದಿದೆ.
ವಾಣಿಜ್ಯ ಕೇಂದ್ರವಾದ ಲಾಲ್ ಚೌಕ್ ನಗರದ ಭಾಗದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ, ಕಾಶ್ಮೀರದ ಇತರ ಜಿಲ್ಲೆಗಳಲ್ಲಿ ಅಂಗಡಿಗಳು ಸಾಮಾನ್ಯವಾಗಿ ತೆರೆದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ ಚೌಕ್ ನ ಮಾರುಕಟ್ಟೆ ಸಂಕೀರ್ಣ, ಪ್ರವಾಹದ ನಂತರ ಇನ್ನೂ ಸಂಪೂರ್ಣವಾಗಿ ಮತ್ತೆ ಪ್ರಾರಂಭವಾಗಿಲ್ಲ, ಆದರೆ ಕೆಲವು ಅಂಗಡಿ ಮಾಲೀಕರು ಮಾತ್ರ ತಮ್ಮ ವ್ಯವಹಾರ ಪುನರಾರಂಭಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಸಕರ್ಾರಿ ಕಛೇರಿಗಳು ಮತ್ತು ಬ್ಯಾಂಕ್ ಗಳು ದೀಪಾವಳಿಯ ರಜೆಯ ಕಾರಣ ಮುಚ್ಚಲಾಗಿವೆ.
ಪ್ರವಾಹದಿಂದ ತೊಂದರೆಗೀಡಾದ ಜನರ ಜೊತೆ ದೀಪಾವಳಿಯನ್ನು ಜಮ್ಮು ಕಾಶ್ಮೀರದಲ್ಲಿ ಆಚರಿಸುತ್ತಿದ್ದೇನೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಪ್ರಧಾನಮಂತ್ರಿ ಮೋದಿ ಅವರು ಕಾಶ್ಮೀರಕ್ಕೆ ತೆರಳಿದ್ದರು.
ತಾವು ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಜಮ್ಮು ಕಾಶ್ಮೀರಕ್ಕೆ ಇದು ನಾಲ್ಕನೆಯ ಭೇಟಿ.
ಹುರಿಯತ್ ಕಾನ್ಫರೆನ್ಸ್ ನ ಎರಡೂ ಬಣಗಳು, ಪ್ರಧಾನಮಂತ್ರಿಯವರ ಕಣಿವೆಯ ಭೇಟಿಯನ್ನು ವಿರೋಧಿಸಿ ಶಾಂತಿಯುತ ಮುಷ್ಕರಕ್ಕೆ ಕರೆ ಕೊಟ್ಟಿದ್ದವು.
“ಕಾಶ್ಮೀರ ಪ್ರವಾಹದಿಂದ ಮುಳುಗಿದ್ದಾಗ, ಭಾರತ ಸಕರ್ಾರ ಮೌನ ಪ್ರೇಕ್ಷಕನಂತಿತ್ತು. ಪ್ರವಾಹದಿಂದ ತೊಂದರೆಗೀಡಾದ ಜನರ ನೋವನ್ನು ನಿವಾರಿಸಲು ಅವರೇನೂ ಮಾಡಲಿಲ್ಲ. ಈಗ ಗಾಯಕ್ಕೆ ಉಪ್ಪು ಸವರಲು ನಾವು ಯಾರನ್ನು ಬಿಡುವುದಿಲ್ಲ” ಎಂದು ಹುರಿಯತ್ ನ ತೀವ್ರ ಬಣದ ಅಧ್ಯಕ್ಷ ಸಯದ್ ಅಲಿ ಷಾ ಗಿಲಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೋದಿಯವರು ಈದ್ ಗೆ ಮುಸ್ಲಿಂ ಬಾಂಧವರಿಗೆ ಅಭಿನಂದಿಸಲಿಲ್ಲ. ಈಗ ದೀಪಾವಳಿಯನ್ನು ಮುಸ್ಲಿಂ ಬಹುಸಂಖ್ಯಾತರು ಇರುವಲ್ಲಿ ಆಚರಿಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶಾಬಿರ್ ಅಹ್ಮದ್ ಷಾ ಅವರ ಹುರಿಯತ್ ಬಣ ಕೂಡ ಶಾಂತಿಯುತ ಬಂದ್ ಗೆ ಕರೆ ಕೊಟ್ಟಿತ್ತು.

004p

By suddi9

Leave a Reply

Your email address will not be published. Required fields are marked *