ಮುಂಬಯಿ: ರಾಷ್ಟ್ರದ ಸರ್ವೋತ್ಕೃಷ್ಟಪರಿಸರಪ್ರೇಮಿ ಸುಂದರ್‍ಲಾಲ್ ಬಹುಗುಣ ಇತ್ತೀಚೆಗೆ ನಿಧನರಾಗಿದ್ದು, 1970-80ರ ದಶಕದಲ್ಲಿ ಪರಿಸರ ಕಾಳಜಿಯ ಕ್ರಾಂತಿ ಮಾಡಿದ್ದು ಅವರ ಅಗಲಿಕೆಯಿಂದ ದೇಶವು ಉನ್ನತ ಪರಿಸರ ನಾಯಕನನ್ನು ಕಳೆದು ಕೊಂಡಿದೆ ಎಂದು ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸುಂದರಲಾಲ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.Jaina Swamy Sunderlal Bahuguna

ಸುಂದರಲಾಲ್ ಬಹುಗುಣ ಅವರು ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿನ ಮಠಕ್ಕೆ ಭೇಟಿ ನೀಡಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀ ಗಳೊಂದಿಗೆ ಪರಿಸರ ಸಂಬಂಧಪಟ್ಟ ಪಶ್ಚಿಮ ಘಟ್ಟ ಉಳಿಸಿ ವಿಚಾರವಾಗಿ ಚರ್ಚಿಸಿದ್ದರು ತಮ್ಮ ಗತ ಕಾಲದ ಚಳುವಳಿಯನ್ನು ಶ್ರೀ ಗಳೊಂದಿಗೆ ಮೆಲುಕು ಹಾಕಿದ ಬಹುಗುಣ ಮಹಾನ್
ಪರಿಸರ ವಾದಿಯಾಗಿದ್ದರು. ತಮ್ಮೊಂದಿಗೆಉತ್ತಮ ಬಾಂದವ್ಯ ಇರಿಸಿದ್ದರು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಸುಂದರಲಾಲ್ ದಂಪತಿಯನ್ನು 31.01.2011ರಲ್ಲಿ ಮೂಡುಬಿದಿರೆ ಶ್ರೀ ಮಠದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಸನ್ಮಾನ ಮಾಡಿ ಗೌರವಿಸಿ ಹರಸಿ ಆಶೀರ್ವದಿಸಿದ್ದರು. ಪರಿಸರ ವಾದಿ   ಚಳುವಳಿಯ ನಾಯಕ. ಅಪ್ಪಿಕೋ ಚಳುವಳಿ ಎಂದು ಪ್ರಸಿದ್ದವಾದ ಇದು ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು.

ದಟ್ಟಾರಣ್ಯದ ಹಿಮಾಲಯದ ತಪ್ಪಲಿನ ಉತ್ತರಖಂಡದ ತೇಹ್ರಿ ಸಮಿಪದ ಮರೋಡ ಹಳ್ಳಿಯಲ್ಲಿ ಜನಿಸಿದ ಸುಂದರ್‍ಲಾಲ್ ದೇಶದ ಆರಂಭಿಕ ಹಂತದ ಪರಿಸರವಾದಿಗಳಲ್ಲಿ ಒಬ್ಬರು. 13ರ ವಯಸ್ಸಿನಲ್ಲೆ ಶ್ರೀದೇವಿ ಸುಮನ್ ರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದ ಬಹುಗುಣ ತನ್ನ ಜೀವನದಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿ ಕೊಂಡಿದ್ದರು.

ಗಾಂಧೀ ಜೀವನದಿಂದ ಪ್ರೇರಿತರಾಗಿ ಸ್ವಾತಂತ್ರ ಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು. ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದರ್ ಲಾಲ್ ಬಹುಗುಣ ಬೆಟ್ಟಗಳು-ಹಳ್ಳಿಗಳ.ನಡುವೆ ಸುಮಾರು 4,700 ಕಿ.ಮೀಟರ್ ಗಳಷ್ಟು ದೂರ ಪಾದಯಾತ್ರೆ ಮಾಡಿ ಜನರನ್ನುಎಚ್ಚರಿಸಿ ಹೋರಾಟ ನಡೆಸಿದರು. ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಒಳಿತಿಗಾಗಿ ಪ್ರಮುಖ ಕಾರ್ಯ ಮಾಡಿದವರು ಹಾಗೂ ದೇಶದ ಪ್ರಕೃತಿ ಪ್ರಿಯರ ಪಾಲಿಗೆ ಮಹಾ ನಾಯಕರಾಗಿದ್ದ ಶ್ರೀಯುತರಿಗೆ ಪದ್ಮಶ್ರೀ ಪ್ರಶಸ್ತಿ ಇತ್ತು ಸರಕಾರಗೌರವಿಸಿತ್ತು ತಮ್ಮ ನಿಲುವಿಗೆ ಬದ್ದರಾಗಿದ್ದ ಸುಂದರ ಲಾಲ್ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು .

ಸುಂದರ್‍ಲಾಲ್ ಅವರ ಅಗಲುವಿಕೆಯಿಂದ ಓರ್ವ ಹಿರಿಯ ನೈಜ ಪರಿಸರ ಪ್ರೇಮಿಯನ್ನು ಕಳಕೊಂಡು ಪರಿಸರ ಪ್ರಿಯರ ಜಗತ್ತು ಬಡವಾಗಿದೆ ಸರಳ ಸಜ್ಜನಿಕೆಯ ನಾಯಕನಾಗಿ ನಮ್ಮನ್ನಗಲಿದ ಸುಂದರ್‍ಲಾಲ್ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬ ಇಷ್ಟ ಮಿತ್ರ ಬಂಧುು ಬಾಂಧವರಿಗೆ ಸಿಗಲಿ ಎಂದು ಮನಸಾ ಪ್ರಾರ್ಥಿಸುತ್ತೆವೆ ಎಂದು ಚಾರುಕೀರ್ತಿ ಭಟ್ಟಾರಕ ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *