ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ ಕಾರಣಿಕ ಪ್ರಸಿದ್ಧ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಇವರನ್ನು ಶುಕ್ರವಾರ ಸಂಜೆ ಸನ್ಮಾನಿಸಲಾಯಿತು. ಧರ್ಮದರ್ಶಿ ಲೋಕೇಶ್ ಮತ್ತು ಚಂದ್ರಾವತಿ ದಂಪತಿ, ಗ್ರಾ.ಪಂ.ಮಾಜಿ ಅದ್ಯಕ್ಷ ಹರೀಶ ಆಚಾರ್ಯ, ಒಕ್ಕೂಟ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಕಮಲೇಶ್, ಸದಾನಂದ ಗೌಡ ಮತ್ತಿತರರು ಇದ್ದರು.