ಬಂಟ್ವಾಳ : ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಇಲ್ಲಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ಬಡ ಕುಟುಂಬದ ಚಿತ್ರಾಕ್ಷಿ ಇವರಿಗೆ ನೂತನ ಮನೆ ಗುರುವಾರ ಹಸ್ತಾಂತರಿಸಲಾಯಿತು. ಪಣಂಬೂರು ಎಸಿಪಿ ಮಹೇಶ್ ಕುಮಾರ್ ಮಾತನಾಡಿ, ಯುವಕರ ತಂಡವು ಸಮಾಜಕ್ಕೆ ಆಸರೆ ನೀಡುವ ಕಾರ್ಯಕ್ರಮ ಅಭಿನಂದನೀಯ ಎಂದರು. ಸಂಘಟನೆ ಅಧ್ಯಕ್ಷ ಪದ್ಮರಾಜ್ ಆರ್. ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ಬ್ರಹ್ಮಶ್ರೀ ಗುರುಗಳ ಸಂದೇಶ ಮತ್ತು ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಪ್ರೇರಣೆ ಎಂದರು.

ಗೋಕರ್ಣ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ವಿವೇಕ್ ರಾಜ್ ಪೂಜಾರಿ, ಉದ್ಯಮಿ ಕಿಶೋರ್ ದಂಡಕೇರಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ವಿಷ್ಣುದಾಸ್ ಇದ್ದರು. ಸಂಚಾಲಕ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು. ಬಂಟ್ವಾಳ ತಾಲ್ಲೂಕಿನ ಪರಾರಿ ಚಿತ್ರಾಕ್ಷಿ ಇವರಿಗೆ ಗುರುವಾರ ನೂತನ ಮನೆ ಹಸ್ತಾಂತರಿಸಲಾಯಿತು.