ಬಂಟ್ವಾಳ ತಾಲ್ಲೂಕಿನ ಟೈಲರ್ಸ್ ಎಸೋಸಿಯೇಷನ್ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಟೈಲರ್ ಗಳಿಗೆ ಬಿ.ಸಿ.ರೋಡು ಕನ್ನಡ ಭವನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಶುಕ್ರವಾರ ನಡೆಯಿತು. ಸಮಿತಿ ಅಧ್ಯಕ್ಷ ನಾಗೇಶ್ ಎಂ., ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಗ್ರೇಸಿ ಡಿಸೋಜಾ, ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಯಾದೇಶ್ ತುಂಬೆ, ತುಳಿಸಿ ಆರ್., ಈಶ್ವರ್ ಕುಲಾಲ್ ಮತ್ತಿತರರು ಇದ್ದರು.