ಬಂಟ್ವಾಳ :ಎಲ್ಲಾ ಜಾತಿ,ಎಲ್ಲಾ ಧರ್ಮ, ಎಲ್ಲಾ ಭಾಷೆಯ ಜನರನ್ನು ಒಳಗೊಂಡಂತ ಒಂದು ಬಲಿಷ್ಟ ಜಾತ್ಯತೀತ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಶಕ್ತಿಯೇ ಪಕ್ಷದ ಶಕ್ತಿ. ಕಾರ್ಯಕರ್ತರ ನೋವನ್ನು ಅರಿತುಕೊಂಡು ಯಾವುದೇ ಸಂದರ್ಭದಲ್ಲೂ ಪಕ್ಷವು ಕಾರ್ಯಕರ್ತರ ಬೆಂಬಲಕ್ಕೆ ಸದಾ ನಿಲ್ಲಲು ಸಿದ್ಧವಾಗಿದೆ ಎಂದು ಮಾಜಿ ಸಚಿವ  ರಮಾನಾಥ ರೈ ಭರವಸೆವಿತ್ತರು. WhatsApp Image 2021-08-14 at 12.42.46 PMಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಮ್ಹಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಳಪಟ್ಟ ಅಮ್ಟಾಡಿ, ಕಳ್ಳಿಗೆ, ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ಅರಳ ಗ್ರಾಮ ಪಂಚಾಯತ್‌ಗೆ ಸೇರಿದ ಪಕ್ಷದ ಮುಖಂಡರು, ವಲಯ ಅದ್ಯಕ್ಷರು, ಬೂತ್ ಸಮಿತಿ ಅಧ್ಯಕ್ಷರು, ಸಮಿತಿ ಕಾರ್ಯದರ್ಶಿಗಳು, ಸಮಿತಿ ಬಿ ಎಲ್ ಎ ಗಳು, ಮಾಜಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಚುನಾಯಿತ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಮಾತನಾಡಿದರು.

ಆ.09 ರಂದು ಸೋಮವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ನೇತೃತ್ವವನ್ನು ಮಾಜಿ ಸಚಿವ ಬಿ. ರಮಾನಾಥ ರೈ ವಹಿಸಿದ್ದರು. ಅಧ್ಯಕ್ಷತೆಯನ್ನು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್‌ ವಹಿಸಿ ಪಕ್ಷದ ಒಳಗಿನ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸರಿಪಡಿಸಿಕೊಳ್ಳಲು ಎಲ್ಲರೂ ಬದ್ಧರಾಗುವಂತೆ ಪಕ್ಷದ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ರಸಾದ್ ಕನಪಾಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್‌ ಶೆಟ್ಟಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀಲಾ ವಿಲ್ಲಾ ಮೋರಸ್, ಜಿಲ್ಲಾ ಪ್ರಧಾನ ಕಾವ್ಯದರ್ಶಿ ಶಬೀರ್ ಸಿದ್ದಕಟ್ಟೆ, ಮುಂಚೂಣಿ ಘಟಕದ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ರೋಶನ್ ರೈ, ಸದಾನಂದ ಶೆಟ್ಟಿ ಕಾವಳಕಟ್ಟೆ, ವಲಯ ಕಾಂಗ್ರೆಸ್‌ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಚಂದ್ರಶೇಖರ್ ಶೆಟ್ಟಿ, ಅಶ್ರಫ್ ಕುಟ್ಟಿಕಲ, ಶಿವಪ್ರಸಾದ್, ಕನಪಾಡಿ, ಚಂದ್ರಹಾಸ ಪಲ್ಲಿಪಾಡಿ, ವಲೇರಿಯನ್ ಪಿಂಟೊ, ಮುಖಂಡರಾದ ಮಹಾಬಲ ಬಂಗೇರ, ಮಧುಸೂದನ್ ಶೆಣೈ, ರಮೇಶ್ ನಾಯಕ್ ರಾಯಿ, ರವಿ ಪೂಜಾರಿ ಪಂಜಿಕಲ್ಲು, ರಿಚಾರ್ಡ್ ಮಿನೇಜಸ್, ದಯಾನಂದ ನೇರಂಬೋಳ್‌, ವೆಂಕಪ್ಪ ಪೂಜಾರಿ, ಮಾಣಿಕ್ಯರಾಜ್ ಜೈನ್, ಅಬ್ದುಲ್ ಖಾದರ್’ ಅರಳ, ರಾಮಣ್ಣ ಪೂಜಾರಿ ಅಮ್ಹಾಡಿ, ಗಂಗಾಧರ್‌ ಪೂಜಾರಿ, ಯೋಗೀಶ್ ಪೂಜಾರಿ, ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *