ಬಂಟ್ವಾಳ : ತಾಲ್ಲೂಕಿನ ಜಕ್ರಿಬೆಟ್ಟು ಹನುಮಾನ್ ದೇವಸ್ಥಾನ ಬಳಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ೧೮ನೇ ವರ್ಷ ಪೂಜಿಸಲಾದ ಗಣೇಶನ ವಿಗ್ರಹ ಶುಕ್ರವಾರ ಸಂಜೆ ನೇತ್ರಾವತಿ ನದಿಯಲ್ಲಿ ವಿಸರ್ಜನೆಗೊಳಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಪ್ರವೀಣ ಕಿಣಿ, ಮಹಾಬಲ ಪೂಜಾರಿ, ಜಗನ್ನಾಥ ಬಿ., ಬಾಲಕೃಷ್ಣ ಅಂಚನ್, ವಾಸು ಪೂಜಾರಿ, ಮೋಹನ ಗೌಡ ಕಲ್ಮಂಜ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.