ಬಂಟ್ವಾಳ: ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕ ಮೃತಪಟ್ಟ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕಂಬ ಸಮೀಪದ ಪರ್ಲಿಯಾ ಕೊಡಂಗೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.ಬಾಗಲಕೋಟ ಜಿಲ್ಲೆಯ ಜಾವೂರು ನಿವಾಸಿ ಬಾಲಪ್ಪ ಎ.ಜಾವೂರು ಮೃತಪಟ್ಟ ವ್ಯಕ್ತಿ.

f62707ba-ce72-4624-a14d-5c051c7d6c9a
ಬಾಲಪ್ಪ ಅವರು ಇಲ್ಲಿನ ರಸ್ತೆ ಕಾಮಗಾರಿ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕಳೆದ ಕೆಲ ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪರ್ಲಿಯಾ ಕೊಡಂಗೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿ ನಡೆಯುತ್ತಿದ್ದು ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ.ಈ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿಯ ಅವಧಿಯಲ್ಲಿ ಕೊಡಂಗೆ ಎಂಬಲ್ಲಿ ಖಾಲಿ ಜಾಗದಲ್ಲಿ ಜಲ್ಲಿ ರಾಶಿ ಹಾಕಲಾಗಿದ್ದು, ಕಾಮಗಾರಿಯ ಬಳಿಕ ಅಲ್ಲಿ ಉಳಿದ ಜಲ್ಲಿ ಕಲ್ಲುಗಳನ್ನು ಬೇರೆ ಕಾಮಗಾರಿಯ ಪ್ರದೇಶಕ್ಕೆ ಕೊಂಡು ಹೋಗುವ ಉದ್ದೇಶದಿಂದ ಬಾಲಪ್ಪ ಅವರು ಲಾರಿ ಯನ್ನು ಜಲ್ಲಿ ಲೋಡ್ ಮಾಡಲು ಕೊಡಂಗೆಯಲ್ಲಿ ನಿಲ್ಲಿಸಿದ್ದರು.

ಲಾರಿ ನಿಲ್ಲಿಸಿ ಅಲ್ಲೇ ಪಕ್ಕ ದಲ್ಲಿ ಮೊಬೈಲ್ ಫೋನ್ ಸಂಭಾಷಣೆ ಯಲ್ಲಿ ತೊಡಗಿದ್ದ ಬಾಲಪ್ಪ ಅವರಿಗೆ ಲಾರಿ ನಿಧಾನವಾಗಿ ಮುಂದೆ ಚಲಿಸುತ್ತಿರುವ ಬಗ್ಗೆ ಜಲ್ಲಿ ಲೋಡ್ ಮಾಡುವ ಜೆಸಿಬಿ ಚಾಲಕ ಜೋರಾಗಿ ಹೇಳಿದಾಗ ತನ್ನಿಂದ ತಾನೇ ಚಲಿಸುವ ಲಾರಿ ಯನ್ನು ತಡೆಯಲು ಚಕ್ರದಡಿ ಕಲ್ಲು ಇಡುವ ಪ್ರಯತ್ನ ಕ್ಕೆ ಮುಂದಾದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *