ಬಜಪೆ : ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವದಡಿ ನಡೆಯುತ್ತಿರುವ ಬಿರುವೆರ್ ಕುಡ್ಲ ಬಜಪೆ ಘಟಕ ಬಜಪೆ ಪರಿಸರದ ಪ್ರತಿಭಾನ್ವಿತ ಅರ್ಹ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವ ಅರ್ಪಣೆ ಹಾಗೂ ಪ್ರೋತ್ಸಾಹ ಧನ ಸಹಾಯ
ಕಳೆದ SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಅರ್ಹ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನ.07ರಂದು ಭಾನುವಾರ ಬಿರುವೆರ್ ಕುಡ್ಲ ಬಜಪೆ ಘಟಕದ ಕಾರ್ಯಾಲಯದಲ್ಲಿ ಗೌರವಾರ್ಪಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಿದರು. ಗೌರವಾರ್ಪಣೆ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು: 1.ಸರಕಾರಿ ಪ್ರೌಢಶಾಲೆ ಪೊರ್ಕೋಡಿ, ಕೆಂಜಾರು, 2. ಅನೀಷಾ ಸರಕಾರಿ ಪ್ರೌಢಶಾಲೆ ಪೊರ್ಕೋಡಿ, ಕೆಂಜಾರು, 3. ಯಾಫೀ ಸರಕಾರಿ ಪ್ರೌಢಶಾಲೆ ಪೊರ್ಕೋಡಿ, ಕೆಂಜಾರು, 4. ನಿವೋಲಾ ಕ್ರಿಷ್ಮ ವಾಜ್ ಪಾಪ್ಯುಲರ್ ಬಂಟ್ಸ್ ಪ್ರೌಢಶಾಲೆ ಬಜಪೆ, 5. ಜೀವಿತ ಪಾಪ್ಯುಲರ್ ಬಂಟ್ಸ್ ಪ್ರೌಢಶಾಲೆ ಬಜಪೆ. 6. ರಿಯಾನಾ ಸರಕಾರಿ ಪ್ರೌಢಶಾಲೆ ಪೊರ್ಕೋಡಿ, ಕೆಂಜಾರು,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಬಂಟ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಹನಾ ಎಂ ಫೆಹಲ್ಲವಿ ಇವರು ಭಾಗವಹಿಸಿದ್ದರು. ಇವರು ಮಾತನಾಡಿ ಬಿರುವೆರ್ ಕುಡ್ಲ ಬಜಪೆ ಘಟಕದ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಕಟೀಲ್ ಕನ್ಸ್ಟ್ರಕ್ಷನ್ಸ್ ಕೂಳೂರು ಮಾಲಕರಾದ ಶ್ರೀ ಶಿವರಾಮ ಕೋಟ್ಯಾನ್ ಪೆರ್ಮುದೆ, ಸಿಟಿ ಕೆಟರಿಂಗ್ ಮಾಲಕರಾದ ಶ್ರೀ ವಿಜಯಕುಮಾರ್ ಕಾನ, ಹಿರಿಯರಾದ ಶ್ರೀ ಚಂದಪ್ಪ ಕುಂದರ್, ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾಧ್ಯಕ್ಷರು ಶ್ರೀ ಶರತ್ ಪೂಜಾರಿ ಬಜಪೆ, ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಕಾರ್ಯಾಧ್ಯಕ್ಷರು ಶ್ರೀ ಗಣೇಶ್ ಪೂಜಾರಿ ಬಜಪೆ, ಕೇಂದ್ರ ಸಮಿತಿಯ ಸಂಘಟನಾ ಅಧ್ಯಕ್ಷರು ಶ್ರೀ ಚಂದ್ರಶೇಖರ್ ಅಮೀನ್, ಗೌರವಾರ್ಪಣೆ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹೆತ್ತವರು, ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲ ಬಜಪೆ ಘಟಕದ ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಹಾಗೂ ಚಂದ್ರಶೇಖರ್ ಅಮೀನ್ ಕಾರ್ಯಕ್ರಮವನ್ನು ನಿರೂಪಿಸಿದರು.