ಬಂಟ್ವಾಳ:  ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸೈನಿಕ ಪ್ರಕಾಶ್ ಪೂಜಾರಿ ಇವರನ್ನು ಇದೇ ನ.09 ರಂದು ಮಂಗಳವಾರ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.WhatsApp Image 2021-11-09 at 4.54.31 PM

ಸೈನಿಕರು ತಮ್ಮ ಜೀವದ ಹಂಗನ್ನು ಒತ್ತೆಯಾಗಿಟ್ಟು ತಮ್ಮ ಕುಟುಂಬದ ಸದಸ್ಯರಿಂದ ದೂರವಿದ್ದು ದೇಶ ರಕ್ಷಣೆ ಮಾಡುವ ಮನಸ್ಥಿತಿ ಅದ್ಭುತವಾಗಿದೆ ಎಂದು ಗುಣಗಾನ ಮಾಡಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಬೇಬಿ ಕುಂದರ್‌ ಮಾತನಾಡಿ ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶ ರಕ್ಷಣಾ ಕಾರ್ಯದಲ್ಲಿ  ತೊಡಗಿಸಿಕೊಳ್ಳಲು ಪ್ರಕಾಶ್ ಸಿ ಪೂಜಾರಿಯವರು ಯುವಕರಿಗೆ ಸ್ಪೂರ್ತಿದಾಯಕರು ಎಂದು ಬಣ್ಣಿಸಿದರು. ಮಾಜಿ ಸೈನಿಕ ಪಕಾಶ್ ಪೂಜಾರಿಯವರು 17ವರ್ಷಗಳ ಸೇವೆಯನ್ನು ವಿವರಿಸುತ್ತಾ ಭಾರತ ದೇಶದ ಸೈನ್ಯಕ್ಕೆ ಸೇರಿರುವುದು ನಮ್ಮ ಗುರುಹಿರಿಯರ ಆಶೀರ್ವಾದದಂತೆ ಸಾರ್ಥಕವಾಯಿತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್‌ ಜೈನ್‌, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ರಾಜ್ಯ NSUI ಪ್ರಧಾನ ಕರ‍್ಯದರ್ಶಿ ಫಾರೂಕ್ ಬಾಯಾಬೆ,  ಕೂರಿಯಾಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಪಿಂಟೋ, ಜಗದೀಶ್ ಕೊಯಿಲ, ವೆಂಕಪ್ಪ ಪೂಜಾರಿ, ಗಂಗಾಧರ್ ಕುಂದರ್, ಗಣೇಶ್ ಶೆಟ್ಟಿ ಕೂರಿಯಾಳ, ಹರೀಶ್ ಕುಂದರ್, ಬಿ ಆರ್ ಅಂಚನ್,  ಅಶೋಕ್ ಪೂಜಾರಿ ಬಾಂಬಿಲ, ಹೆತ್ತವರಾದ ಚಂದಪ್ಪ ಪೂಜಾರಿ, ಲಲಿತಾ ಸಿ ಪೂಜಾರಿ, ಪತ್ನಿ ಪ್ರತೀಭಾ ಪಿ ಪೂಜಾರಿ, ಸಹೋದರಿ ಅನುಷಾ ಸಿ ಪುಜಾರಿ, ಹೊನ್ನಯ್ಯ ಪೂಜಾರಿ ಮಾರ್ನಬೈಲ್, ಪುರಂದರ ಪೂಜಾರಿ ಇರಾ, ವಾಣಿ ಪೂಜಾರಿ ನಗ್ರಿ, ಲೀಲಾವತಿ ಬಾಂಬಿಲ ಉಪಸ್ಥಿತರಿದ್ದರು.

 

 

By suddi9

Leave a Reply

Your email address will not be published. Required fields are marked *