ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಮಕ್ಕಳ ದಿನಾಚರಣೆ ಪ್ರಯುಕ್ತ ಅಯೋಜಿಸಲಾದ ಮುದ್ದುಕಂದ ಫೋಟೋಸ್ಪರ್ದೆಯ ಫಲಿತಾಂಶ ಪ್ರಕಟವಾಗಿದ್ದು ಪ್ರಥಮ ಬಹುಮಾನವನ್ನು ಶ್ರೀನಿಕೇತನ್ ಮಂಚಿ, ದ್ವಿತೀಯ ಬಹುಮಾನವನ್ನು ಅತಿಕ್ಷಾ ಕುಲಾಲ್ ನರಿಕೊಂಬು, ತೃತೀಯ ಬಹುಮಾನವನ್ನು ಮೌಲ್ಯ ಬಂಗೇರ ವಾಮದಪದವು ಇವರು ಪಡೆದುಕೊಂಡಿದ್ದಾರೆ.Untitled-1 copy

ಬಹುಮಾನ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳನ್ನೂ  SKPA ಬಂಟ್ವಾಳ ವಲಯದ ವತಿಯಿಂದ ಅಧ್ಯಕ್ಷರಾದ ಶ್ರೀ ಹರೀಶ್ ಕುಂದರ್ ಅಭಿನಂದಿಸಿದ್ದಾರೆ. ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ರೋಶನ್ ಮೊಗರ್ನಾಡ್ ಉಪಸ್ಥಿತರಿದ್ದರು. ಪ್ರೀತಿ ಕಿಶೋರ್ ಬಿ. ಸಿ. ರೋಡ್  ಹಾಗೂ ಬಾಲಕೃಷ್ಣ ಬಿ. ಸಿ. ರೋಡ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *