ಬಂಟ್ವಾಳ : ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಶುಕ್ರವಾರ ನಡೆದ ಮಾತೆ ಮರಿಯಮ್ಮನವರ ಹಬ್ಬದಲ್ಲಿ ಧರ್ಮಗುರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಧರ್ಮಸಭೆಯಲ್ಲಿ ಒಗ್ಗೂಡಿ ಮುನ್ನಡೆಯಲು ಲೊರೆಟ್ಟೊ ಮಾತೆ ಅನುಗ್ರಹ ಸದಾ ನಮ್ಮೊಂದಿಗಿರಬೇಕು ಎಂದು ಮೂಡುಬಿದ್ರೆ ಪಾಲಡ್ಕ ಚರ್ಚಿನ ಧರ್ಮಗುರು ಪ್ರಧಾನ ಧರ್ಮಗುರು ಎಲ್ಯಾಸ್ ಡಿಸೋಜಾ ಹೇಳಿದ್ದಾರೆ.
ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಶುಕ್ರವಾರ ನಡೆದ ಮಾತೆ ಮರಿಯಮ್ಮನವರ ಹಬ್ಬ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿ ಪೂಜೆ ನೆರವೇರಿಸಿ, ನೊವೆನಾ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ ಕೃತಜ್ಞತೆ ಸಮರ್ಪಿಸಿದರು. ಮುಖ್ಯಶಿಕ್ಷಕ ಜೈಸನ್ ಮೋನಿಸ್, ವಲಯ ಪ್ರಧಾನ ಧರ್ಮಗುರು ವಲೇರಿಯನ್ ಡಿಸೋಜ, ಮಾಡುಬಿದ್ರೆ ವಲಯ ಪ್ರಧಾನ ಧರ್ಮಗುರು ಪೌಲ್ ಸಿಕ್ವೇರಾ ಇದ್ದರು.