ಪಡುಬಿದ್ರಿ: ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾಪು ವತಿಯಿಂದ ತಮಿಳುನಾಡು ಕುನೂರ್ ಸಮೀಪ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ದುರ್ಮರಣ ಹೊಂದಿದಂತಹ ಜನರಲ್ ಬಿಪಿನ್ ರಾವತ್ ಹಾಗೂ ಇತರ 12 ಮಂದಿಯ ಆತ್ಮ ಶಾಂತಿಗಾಗಿ ಶ್ರದ್ದಾಂಜಲಿ ಸಭೆಯು ಪಡುಬಿದ್ರಿ ಪೇಟೆಯಲ್ಲಿ ನಡೆಯಿತು ಹೂ ಹಾಗೂ ದೀಪ ಹಚ್ಚಿ ಮೌನ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದಲ್ಲದೆ, ಈ ದುರ್ಘಟನೆಯಲ್ಲಿ ನಮ್ಮ ದೇಶದ ವೀರ ಯೋಧರನ್ನು ಕಳೆದುಕೊಂಡಂತ್ತಾಗಿದೆ. ಈ ದುರ್ಘಟನೆಯ ಬಗ್ಗೆ ಸಮಗ್ರ ತನಿಖೆಯಾಗುವ ಮೂಲಕ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ರಾಜ್ಯ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ, ರೆಹಮಾನ್ ಕನ್ನಾಂಗಾರ್, ಗಣೇಶ್ ಕೋಟ್ಯಾನ್, ಸತೀಶ್ ದೇಜಾಡಿ, ಗಣೇಶ್ ಆಚಾರ್ಯ, ಅಶ್ವಥ್ ಆಚಾರ್ಯ, ಸುನಂದ ದೇವಾಡಿಗ, ಯೋಗೀಶ್ , ಜ್ಯೋತಿ ಮೆನನ್, ಸುಚರಿತ ಮುಂತಾದವರು ಇದ್ದರು