ಬಂಟ್ವಾಳ: ತಾಲೂಕು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಡಿ.೧೧ರಂದು ಶನಿವಾರ ಬೆಳಗ್ಗೆ ೧೦.೩೦ಕ್ಕೆ ನೆರವೇರಿತು.WhatsApp Image 2021-12-14 at 9.55.22 AM

ಸಮಾರಂಭದವನ್ನು ಉದ್ಘಾಟಿಸಿದ ಅಮ್ಮುಂಜೆ ಗುತ್ತು ಶ್ರೀಮತಿ ಶೋಭಾ ಶೆಟ್ಟಿಯವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿ ಶುಭ ಹಾರೈಸಿದರು. ದಾನಿಗಳಾದ ಅಮ್ಮುಂಜೆ ಗುತ್ತು ಜಯಶೀಲ ಶೆಟ್ಟಿ ಹಾಗೂ ಶ್ರೀಮತಿ ಅಮ್ಮುಂಜೆ ಗುತ್ತು ಶೋಭಾ ಶೆಟ್ಟಿ ಸುಮಾರು ೧,೫೦,೦೦೦ ರೂ ಮೌಲ್ಯದ ಸಮವಸ್ತ್ರವನ್ನು ೧೨೨ ವಿದ್ಯಾರ್ಥಿಗಳಿಗೆ ನೀಡಿ ಸಹಕರಿಸಿರುತ್ತಾರೆ.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಭಂಡಾರಿಯವರು ಹಳೆವಿದ್ಯಾರ್ಥಿ ಸಂಘವು ಶಾಲೆಗೆ ನೀಡಿದ ವಿವಿಧ ಕೊಡುಗೆಗಳು ಹಾಗೂ ಶಾಲಾಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಹಳೆ ವಿದ್ಯಾರ್ಥಿ ಸಂಘವು ಇನ್ನು ಮುಂದೆಯೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕಾರ ನೀಡಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ಅಮ್ಮುಂಜೆ ಗುತ್ತು ಡಾಕ್ಟರ್ ಎ. ಮಂಜಯ್ಯ ಶೆಟ್ಟಿಯವರು ಮಾತನಾಡಿ, ಶಾಲೆಯು ಪ್ರಾರಂಭವಾಗಿನಿಂದ ಇದುವರೆಗೂ ಬೆಳೆದು ಬಂದ ಬಗೆಯನ್ನು ತಿಳಿಸಿದರಲ್ಲದೆ, ಶಾಲೆಯ ಅಭಿವೃದ್ಧಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.ಇನ್ನು ಮುಂದೆಯೂ ಎಲ್ಲರೂ ಸಹಕಾರವನ್ನು ಆಶಿಸಿದರು. ಈ ಕಾರ್ಯಕ್ರಮದಲ್ಲಿ ಅಮ್ಮುಂಜೆ ಗುತ್ತು ಶಿವಪ್ರಸಾದ್ ಶೆಟ್ಟಿ, ನಾಗಮಣಿ ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸತ್ಯ ಪ್ರಸಾದ್ ಶೆಟ್ಟಿ ಮುಂತದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರು ಅತಿಥಿಗಳನ್ನು ಸ್ವಾಗತಿಸಿ, ಶಿಕ್ಷಕರಾದ ಬಾಲಕೃಷ್ಣ ಕೆ. ಧನ್ಯವಾದ ಗೈದರು. ಹರೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ಕೋವಿಡ್ -೧೯ ನಿಯಮ ನಿಯಮಾನುಸಾರ ಸರಳ ರೀತಿಯಲ್ಲಿ ನಡೆಯಿತು.

By suddi9

Leave a Reply

Your email address will not be published. Required fields are marked *