ಬಂಟ್ವಾಳ :ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ಮೋದಿ ಬ್ರಿಗೇಡ್‌ ತಂಡವು ೧೩-೧೨ -೨೦೨೧ ಭೇಟಿ ನೀಡಿತು. ಮೋದಿ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಶಿವಮೊಗ್ಗ ಗಣೇಶ್ ಪ್ರಸಾದ್ ಮಾತನಾಡುತ್ತಾ ”ನನಗೆ ಇಂಥ ಪರಿಸರದ ಶಾಲೆಯಲ್ಲಿ ಓದುವ ಭಾಗ್ಯ ಸಿಗಲಿಲ್ಲ. ನೀವೆಲ್ಲ ಪುಣ್ಯ ಮಾಡಿದ್ದೀರಿ. ಶ್ರೀರಾಮ ಶಾಲೆಯಲ್ಲಿನ ಶಿಸ್ತು, ಸಂಸ್ಕ ತಿ-ಸಂಸ್ಕಾರ ನೋಡಿ ಮನ ತುಂಬಿದೆ. ಮುಂದಿನ ಜನ್ಮದಲ್ಲಾದರೂ ಈ ಶಾಲೆಯಲ್ಲಿ ಓದುವ ಭಾಗ್ಯ ನನ್ನದಾಗಲಿ. ವಿದ್ಯಾರ್ಥಿಗಳಾದ ನೀವು ಚೆನ್ನಾಗಿ ಓದಿ ವಿದ್ಯಾವಂತರಾಗಿದೇಶಕ್ಕೆ ಮಾದರಿಯಾಗಿ. ದೇಶ ಸೇವೆ ಮಾಡಿರಾಜ್ಯಕ್ಕೆ, ಶಾಲೆಗೆ ಕೀರ್ತಿತನ್ನಿ” ಎಂದು ಹೇಳಿದರು.WhatsApp Image 2021-12-14 at 12.15.51

ವೇದಿಕೆಯಲ್ಲಿ ಮೋದಿ ಬ್ರಿಗೇಡ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತಾ ಪ್ರಭು, ಕಾರ್ಯದರ್ಶಿ ಸುಭಾಷ್‌ಚಂದ್ರ ಹೆಗಡೆ, ಕರ್ನಾಟಕ ಜಿಲ್ಲಾಧ್ಯಕ್ಷರು ಸುರೇಶ್ ಶೆಟ್ಟಿ ಪೂನಾ, ಸ್ವಯಂಸೇವಕರು ಕಿಶೋರ್ ಮಂಗಳೂರು, ರೋಹಿತ್ ಹೆಗಡೆ ಕಾಪು, ಎಸ್ ಡಿ ಪಿ ಅಧ್ಯಕ್ಷರು ಸತೀಶ್ ಶೆಟ್ಟಿ ಕುಂದಾಪುರ ಮತ್ತು ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ರೂಪಕಲಾ ಸ್ವಾಗತಿಸಿ, ಪ್ರೀತಾ ನಿರೂಪಿಸಿದರು.WhatsApp Image 2021-12-14 at 12.15.30

By suddi9

Leave a Reply

Your email address will not be published. Required fields are marked *