ಮಂಗಳೂರು: ತಂಡವೊಂದು ಯುವಕನನ್ನು ಬೆನ್ನಟ್ಟಿ ಮಾರಾಕಾಯುಧಗಳಿಂದ ಕಡಿದು ಕೊಲೆಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ನಗರದ ಹೊರವಲಯದ ಕಣ್ಣೂರು ಚೆಕ್‍ಪೋಸ್ಟ್ ಸಮೀಪ ನಡೆದಿದೆ. ಕೊಲೆಯಾದವನನ್ನು ಜಿಯಾಝ್ (26) ಎಂದು ಹೆಸರಿಸಲಾಗಿದೆ.
ಕಣ್ಣೂರು ನಿವಾಸಿ ಜಿಯಾಝ್ ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಣ್ಣೂರು ಚೆಕ್ ಪೋಸ್ಟ್ ಬಳಿ ಬರುತ್ತಿದ್ದ ಸಂದರ್ಭ ಕಾರು ಮತ್ತು ಬೈಕ್‍ನಲ್ಲಿ ಬಂದದ್ದ ತಂಡವೊಂದು ತಲವಾರು ಮತ್ತು ಮಚ್ಚಿನಿಂದ ಯದ್ವಾತದ್ವಾ ಕಡಿದು ಕೊಲೆಗೈದಿದೆ. ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ
. ಕೆಲದಿನಗಳ ಹಿಂದೆ ಸಿಪಿಎಂ ಕಾರ್ಯಕರ್ತ ಮುರಳಿ ಎಂಬಾತನ ಕೊಲೆ ನಡೆದಿತ್ತು
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಶವಗಾರಕ್ಕೆ ಕಳುಹಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

