ಮುಂಬಯಿ : ಸತ್ವಯುತ ತುಳು ಹಾಡುಗಳನ್ನು ಕರೋಕೆ ಸಮೇತ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಅಂತರಾಷ್ಟ್ರೀಯ ಡಿಜಿಟಲ್ ಸಂಸ್ಥೆ ಈ ಸಾರಿ ಕಲುಷಿತ ಪರಿಸರದಿಂದ ಜೀವರಾಶಿಯ ಸಂಕಟದ ಹಾಡನ್ನು ಮನೋಜ್ಙವಾಗಿ ಚಿತ್ರಿಸಿ ಬಿಡುಗಡೆಗೊಳಿಸುತ್ತಿದೆ.
ಶಾಲಾ ಶಿಕ್ಷಕಿ, ಸಾಹಿತಿ ವಿಜಯಾ ಶೆಟ್ಟಿ ಸಾಲೆತ್ತೂರು ಇವರು ಬರೆದಿರುವ ಮಾರ್ಮಿಕ ಒಳಾರ್ಥದ ಸಾಹಿತ್ಯದ ಸಮುದ್ರ ಕಲುಷಿತದಿಂದ ಸಂಕಟಕ್ಕೊಳಗಾದ ಹಕ್ಕಿಗಳನ್ನು ರೂಪಕವಾಗಿ ಇಟ್ಟುಕೊಂಡು ಬರೆದ ಹಾಡು ‘ರಾವೊಡತ್ತೆಯೆ…’ ಕರೋಕೆ ಸಮೇತ ಇದೇ ಬರುವ ಎ.೧೦ರಂದು ಭಾನುವಾರ ಸಂಜೆ ೭:೩೦ಕ್ಕೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಲೋಕಾರ್ಪಣೆಯಾಗಲಿದೆ.
ಪರಿಸರ ಕಾಳಜಿಯ ಹೋರಾಟಗಾರ,ಶ್ರೀಸಾಮಾನ್ಯರ ಸ್ವಾಮೀಜಿಯೆಂದೇ ಹೆಸರಾದ ಕೇಮಾರು ಸಾಂದೀಪನ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಹಾಡು ಬಿಡುಗಡೆಗೊಳಿಸಿ ಆಶಿರ್ವಚನವೀಯಲಿದ್ದಾರೆ.
ಈ ಹಾಡನ್ನು ಪ್ರತಿ ತುಳುವರಿಗೆ ತಲುಪಿಸುವ ಉದ್ದೇಶದಿಂದ ಚಂದು ಪೂಜಾರಿ ಪಟ್ಟೆ ಚೆನ್ನಮ್ಮ ಪೂಜಾರಿ ಪಟ್ಟೆ ಇವರ ನೆನಪಿಗಾಗಿ ಶ್ರೀ ಗೋಪಾಲ್ ಪಟ್ಟೆ ಅವರು ಲೋಕಾರ್ಪಣೆಯ ಜವಾಬ್ಧಾರಿಯನ್ನು ಅದರ ಮುಂದಾಳತ್ವ ಕ್ಕೆ ಹೆಗಲು ಕೊಟ್ಟಿದ್ದಾರೆ.
ಬೆಂಗಳೂರುನ ಉದ್ಯಮಿ ಅಮರ್ನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಈ ಹಾಡಿನ ಸ್ವರ ಸಂಯೋಜನೆಯನ್ನು ಪ್ರಖ್ಯಾತ ಸಂಗೀತ ನಿರ್ದೇಶಕ ನಾಗಭೂಷಣ ಉಡುಪ ಎನ್. ಮಾಡಿದ್ದು ಐಲೇಸಾದ ಪ್ರಮುಖ ಗಾಯಕ ಕೆ ಸುಧಾಕರ್ ಶೆಟ್ಟಿ ಧ್ವನಿ ನೀಡಿದ್ದಾರೆ. ಪ್ರಸಿದ್ಧ ಯಕ್ಷ ನಿರೂಪಕ ದೀಪಕ್ ಶೆಟ್ಟಿ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಲಿದ್ದು ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಇವರು ವ್ಯಾಖ್ಯಾನಗೈಯಲಿದ್ದಾರೆ.
ಪ್ರಸಿದ್ಧ ಗಾಯಕ ರಮೇಶ್ಚಂದ್ರ ಅವರ ಸಾರಥ್ಯದಲ್ಲಿ ಈಗಾಗಲೇ ಐದು ಹಾಡುಗಳು ಬಿಡುಗಡೆಯಾಗಿದ್ದು ಅವೆಲ್ಲವೂ ಐಲೇಸಾ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದ್ದು ತುಳು ಭಾಷಿಕರು ಈ ಹಾಡುಗಳ ಪ್ರಯೋಜನ ಪಡೆದುಕೊಳ್ಳ ಬೇಕೆಂದು ಮತ್ತು ಎ.೧೦ ರವಿವಾರ ಸಂಜೆ ೭:೩೦ (ಭಾರತ) ಗಂಟೆಗೆ ಬಿಡುಗಡೆಯಾಗುವ ‘ರಾವೊಡತ್ತೆಯೇ …. ‘ ಹಾಡಿನ ಝೂಮ್ ಕಾರ್ಯಕ್ರಮದಲ್ಲಿ ID No:863 4125 2923 Pass Code: ilesa ಉಪಯೋಗಿಸಿಕೊಂಡು ಭಾಗಿಯಾಗಿ ಸಹಕರಿಸಬೇಕೆಂದು ಟೀಂ ಐಲೇಸಾದ ಮುಂಬಯಿ ಸಂಚಾಲಕ ಸೂರಿ ಮಾರ್ನಾಡ್ ಭಿನ್ನವಿಸಿದ್ದಾರೆ.