ಬಂಟ್ವಾಳ: ಎಸ್ಸೆಸೆಲ್ಸಿ, ಪಿಯುಸಿ ನಂತರ ಮುಂದೇನು ಮಾಹಿತಿ ಶಿಬಿರ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮ ಬಿ.ಸಿ.ರೋಡ್ ಕೈಕಂಬದಲ್ಲಿರುವ ದಿ ನಾಲೇಡ್ಜ್ ಹಬ್ ಟ್ಯೂಷನ್ ಆ್ಯಂಡ್ ಕೋಚಿಂಗ್ ಸೆಂಟರ್ ನಲ್ಲಿ ಇತ್ತೀಚಿಗೆ ನಡೆಯಿತು. 

ದಿ ನಾಲೇಡ್ಜ್ ಹಬ್ ಟ್ಯೂಷನ್ ಆ್ಯಂಡ್ ಕೋಚಿಂಗ್ ಸೆಂಟರ್ ಇದರ ಆಶ್ರಯದಲ್ಲಿ ಆಕ್ಸೆಸ್ ಇಂಡಿಯಾ ಕರ್ನಾಟಕ ಇದರ ಸಹ ಭಾಗಿತ್ವದಲ್ಲಿ ನಡೆದ ಶಿಬಿರದಲ್ಲಿ ಆಕ್ಸೆಸ್ ಇಂಡಿಯಾ ತರಬೇತುದಾರ ತೌಸೀಫ್ ಕಕ್ಕಿಂಜೆ ಅವರು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಕ್ಸೆಸ್ ಇಂಡಿಯಾ ತರಬೇತುದಾರ ಅಕ್ಬರ್ ಅಲಿ ‘ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸುವುದು ಹೇಗೆ?’ ಎಂಬ ವಿಷಯದಲ್ಲಿ ತರಬೇತಿ ನೀಡಿದರು. ಶಿಕ್ಷಕಿಯರಾದ ನಝ್ರೀನ್ ಶಾ ಸ್ವಾಗತಿಸಿದರು. ಮೆಹತಾಝ್ ಧನ್ಯವಾದಗೈದರು.