ಬಂಟ್ವಾಳ: ಇತ್ತೀಚೆಗೆ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಮೇಲ್ಭಾಗದಿಂದ ಬೃಹತ್ ಬಂಡೆಕಲ್ಲೊಂದು ಉರುಳಿ ಬಿದ್ದ ಘಟನೆ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.WhatsApp Image 2022-05-20 at 11.24.56 AM  WhatsApp Image 2022-05-20 at 11.24.55 AM (2)

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಿಂಜ ಕ್ಷೇತ್ರದ ಅಭಿವೃದ್ದಿ ಕುರಿತಾಗಿ ಅಷ್ಟಮಂಗಳ ಪ್ರಶ್ನಾ ಚಿಂತನೆ ಬಳಿಕ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.ಈಗಾಗಲೇ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಹಿರಿಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಮುಂದಕ್ಕೆ ದೇವಸ್ಥಾನಕ್ಕೆ ಯಾವುದೇ ಅಪಾಯವಾಗದಂತೆ ಎನ್‌ಐಟಿಕೆ ತಜ್ಞರಿಂದ ಸಲಹೆ ಪಡೆಯಲಾಗುವುದು ಎಂದರು. ಪುರಾತನ ಪವಿತ್ರ ದೇವಸ್ಥಾನವಾದ ಕಾರಿಂಜ ಕ್ಷೇತ್ರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಕಲ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.WhatsApp Image 2022-05-20 at 11.24.56 AM (1) WhatsApp Image 2022-05-20 at 11.24.57 AM (1)

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗ್ರಾಮಣಿ ವೆಂಕಟರಮಣ ಮುಚ್ಚಿನ್ನಾಯ, ಗ್ರಾ.ಪಂ. ಉಪಾಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ತಹಶೀಲ್ದಾರ್ ಸ್ಮಿತಾರಾಮ್ ಮಂಡ್ಯ, ಗ್ರಾಮ ಕರಣಿಕೆ ಆಶಾ ಮೆಹಂದಳೆ, ವ್ಯವಸ್ಥಾಪನ ಸದಸ್ಯರಾದ ಪ್ರವೀಣ್ ಪೂಜಾರಿ ಪಡಂತ್ರಬೆಟ್ಟು, ಮಾಲತಿ ಭಟ್, ಆನಂದ ಶೆಟ್ಟಿ, ಪ್ರಮುಖರಾದ ರಾಮಕೃಷ್ಣ ಮಯ್ಯ, ಧನಂಜಯ ಶೆಟ್ಟಿ ಸರಪಾಡಿ, ಮೋಹನ ಆಚಾರ್ಯ, ಅರ್ಚಕ ಜಯಶಂಕರ ಉಪಾಧ್ಯಾಯ, ರಮನಾಥ ರಾಯಿ, ಯಶೋಧರ ಕರ್ಬೆಟ್ಟು, ದಿನೇಶ್ ಶೆಟ್ಟಿ ದಂಬೆದಾರ್, ಸತೀಶ್ ಶೆಟ್ಟಿ ಮಧ್ವಕಟ್ಟೆ,ಚಿದಾನಂದ ರೈ ಕಕ್ಯ,ಶುಭಕರ ಶೆಟ್ಟಿ, ದಯಾನಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.WhatsApp Image 2022-05-20 at 11.24.55 AM (1) WhatsApp Image 2022-05-20 at 11.24.54 AM (2)

By suddi9

Leave a Reply

Your email address will not be published. Required fields are marked *