ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಶಾರದಾಂಬ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ನಡೆದ ‘ತಂಬಾಕು ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಆರೋಗ್ಯ ನಿವೃತ್ತ ಮೇಲ್ವಿಚಾರಕ ಜಯರಾಮ ಪೂಜಾರಿ ಮಾಹಿತಿ ನೀಡಿದರು.

ತಂಬಾಕು ಸೇವನೆಯಿಂದ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಇದಕ್ಕಾಗಿ ದುಷ್ಚಟಮುಕ್ತ ಸಮಾಜ ಸಮಾಜ ನಿರ್ಮಾಣಗೊಂಡರೆ ಸಮೃದ್ಧ ಸಮಾಜವೂ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ನಿವೃತ್ತ ಮೇಲ್ವಿಚಾರಕ ಜಯರಾಮ ಪೂಜಾರಿ ಹೇಳಿದ್ದಾರೆ.

ಇಲ್ಲಿನ ಸಜಿಪಮುನ್ನೂರು ಶಾರದಾಂಬ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜೂ.01ರಂದು ಮಂಗಳವಾರ ನಡೆದ ‘ತಂಬಾಕು ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಜನಜಾಗ್ರತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಜಯಾನಂದ ಪಿ., ಸಮನ್ವಯಧಿಕಾರಿ ಸ್ವಪ್ನ, ಸೇವಾಪ್ರತಿನಿಧಿ ಬೇಬಿ, ವಲಯ ಮೇಲ್ವಿಚಾರಕಿ ಅಮಿತಾ ಇದ್ದರು.

By suddi9

Leave a Reply

Your email address will not be published. Required fields are marked *