ಬಂಟ್ವಾಳ : ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಮೂಲತಃ ರಾಮನಗರದ, ಪ್ರಸ್ತುತ ಇರಾದಲ್ಲಿ ಕೃಷಿ ಜೀವನಕ್ಕೆ ವೃತ್ತಿ ಬದುಕನ್ನು ಬದಲಿಸಿಕೊಂಡಿರುವ ೪೨ರ ಹರೆಯದ ಶ್ರೀನಿವಾಸ ಗೌಡ ಅವರು ದೇಶದಲ್ಲಿ ಎರಡನೇ, ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಕತ್ತೆ ಸಾಕಣಿಕೆ ಹಾಗೂ ಮಾದರಿ ತರಬೇತಿ ಕೇಂದ್ರದ ಮೂಲಕ ಪೌಷ್ಠಿಕಾಂಶಯುಕ್ತ ಕತ್ತೆ ಹಾಲು ಉತ್ಪಾದನೆ ಆರಂಭಿಸಿದ್ದೇ ತಡ, ವಾರ ಕಳೆಯುವ ಮುನ್ನವೇ ಬರೋಬ್ಬರಿ ೧೭ಲಕ್ಷ ರೂ. ಮೌಲ್ಯದ ಹಾಲಿಗೆ ಬೇಡಿಕೆ ಬಂದಿದೆ.WhatsApp Image 2022-06-16 at 9.46.05 AM WhatsApp Image 2022-06-16 at 9.46.06 AM (1)

ಐಸಿರಿ ಫಾರ್ಮ್ಸ್ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಂಡಿದ್ದು, ಜೂ. ೮ರಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ, ಮಂಗಳೂರು ಕ್ಷೇತ್ರ ಶಾಸಕ ಯು.ಟಿ. ಖಾದರ್ ಅವರು ನೂತನ ಕತ್ತೆ ಫಾರ್ಮ್ ಉದ್ಘಾಟಿಸಿ ಶ್ರೀನಿವಾಸ ಗೌಡರ ಉದ್ಯಮಕ್ಕೆ ಶುಭ ಹಾರೈಸಿದ್ದರು.WhatsApp Image 2022-06-16 at 9.46.06 AM

ಇಪ್ಪತ್ತು ಕತ್ತೆಗಳೊಂದಿಗೆ ಆರಂಭಿಸಿದ ಕತ್ತೆ ಫಾರ್ಮ್ ನಲ್ಲಿ ಉತ್ಪತ್ತಿಯಾಗುವ ಹಾಲಿಗೆ ರಾಜ್ಯದ ನಾನಾಭಾಗಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದ ಗುಂಟೂರು, ವಿಶಾಖಪಟ್ಟಣಂ ರಾಜಮುಂಡ್ರಿ ಮೊದಲಾದ ಕಡೆಗಳಿಂದ ಬೇಡಿಕೆ ಸೃಷ್ಟಿಯಾಗಿದ್ದು ಶ್ರೀನಿವಾಸ ಗೌಡರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.WhatsApp Image 2022-06-16 at 9.46.07 AM (1)

ಅಷ್ಟಕ್ಕೂ ಚರ್ಮದ ಸುಕ್ಕುಗಟ್ಟುವಿಕೆ ತಡೆಯುವ, ಚರ್ಮದ ಮೇಲಿನ ಇಸಬು ಮತ್ತು ಚರ್ಮದ ಅಲರ್ಜಿ ಬಗೆಹರಿಸುವ ಸಾಧನಗಳ ಉತ್ಪಾದನೆ ಸೇರಿದಂತೆ ಸೌಂದರ್ಯವರ್ಧಕ ಸಾಧನಗಳಿಗೆ ಕತ್ತೆಹಾಲು ಬಳಕೆ ಆಗುತ್ತಿರುವುದು ಇದರ ಒಂದು ಲೀ. ಹಾಲಿಗೆ ಐದು ಸಾವಿರ ರೂ. ಗಳಷ್ಟು ದುಬಾರಿ ಬೆಲೆ ಏರಿರುವುದಕ್ಕೆ ಕಾರಣವಾಗಿದ್ದು ವಾರ ಕಳೆಯುತ್ತಿದ್ದಂತೆಯೇ ೧೭ಲಕ್ಷ ರೂ. ಗಳ ಬೇಡಿಕೆ ಸೃಷ್ಟಿಗೂ ಅದೇ ಕಾರಣ ಎಂದು ಶ್ರೀನಿವಾಸ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.WhatsApp Image 2022-06-16 at 9.46.07 AM (2)

ಇಪ್ಪತ್ತು ಕತ್ತೆಗಳಿದ್ದು ಇದೀಗ ಪ್ರತಿದಿನ ಏಳರಿಂದ ಎಂಟು ಲೀ. ಹಾಲು ಉತ್ಪತ್ತಿ ಆಗುತ್ತಿದೆ. ಹೊರ ರಾಜ್ಯಗಳಾದ ಆಂಧ್ರಪ್ರದೇಶದ ಗುಂಟೂರು, ರಾಜಮುಂಡ್ರಿ, ವಿಶಾಖಪಟ್ಟಣಂ ಸೇರಿದಂತೆ ರಾಜ್ಯದ ಮೈಸೂರು, ರಾಯಚೂರು, ಶಿವಮೊಗ್ಗ, ಬಿಡದಿ, ಕೋಲಾರ ಭಾಗಗಳಿಂದ ಬೇಡಿಕೆ ಬರುತ್ತಿದೆ. ಮುಂದಿನ ವಾರದಲ್ಲಿ ಅವರಿಗೆ ಹಾಲು ಸರಬರಾಜು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.WhatsApp Image 2022-06-16 at 9.46.07 AM

ಹಾಲು ಶೇಖರಣೆ ಮಾಡಿ ಕೆಡದಂತೆ ಸುಸಜ್ಜಿತ ಸೌಲಭ್ಯಗಳಿಂದ ಸ್ಟೋರೇಜ್ ಮಾಡಲಾಗುತ್ತಿದೆ. ಒಂದು ಬಾರಿ ಪ್ಯಾಕ್ ಮಾಡಿದರೆ ಗ್ರಾಹಕರೇ ತೆರೆಯಬೇಕು ಅಂತಹ ವ್ಯವಸ್ಥೆ ಇದೆ. ೩೨ದಿನಗಳ ಕಾಲ ಫ್ರಿಡ್ಜ್ ನಲ್ಲಿಟ್ಟರೂ ಕೆಡುವುದಿಲ್ಲ. ಒಂದು ವೇಳೆ ಕೆಎಂಎಫ್ ಬೆಳದಂತೆ ಕತ್ತೆ ಹಾಲಿಗೂ ಮಾರುಕಟ್ಟೆ ಸೃಷ್ಟಿಯಾಗಿ ಬೃಹತ್ ಉದ್ಯಮವಾಗಿ ಬೆಳದರೆ ಕತ್ತೆ ಹಾಲನ್ನು ಒಂದು ವರ್ಷ ಕಾಲ ಕೆಡದಂತೆ ಇಡಬಹುದಂತೆ. ಇದೀಗ ಮಂಗಳೂರು ಭಾಗದಿಂದಲೇ ಆರರಿಂದ ಏಳು ಮಂದಿ ನಿತ್ಯ ಹಾಲು ಖರೀದಿಸಲು ಬರುತ್ತಿದ್ದಾರ ಎಂದು ಗೌಡ್ರು ತಿಳಿಸಿದ್ದಾರೆ.WhatsApp Image 2022-06-16 at 9.46.08 AM (1)

ದೊಡ್ಡ ಉದ್ಯೋಗದ ಜತೆಗೆ ೧೮ವರ್ಷ ಕಾಲ ಬೇರೆ ಬೇರೆ ಕ್ಷೇತ್ರದಲ್ಲಿ ದೆಹಲಿ, ಪುಣೆ, ಬೆಂಗಳೂರಿನಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಗಿದ್ದರೂ ಮನಸ್ಸಿಗೆ ನೆಮ್ಮದಿ ಕೊಡುವ ಕೆಲಸ ನನ್ ಕಣ್ಣ ಮುಂದೆ ಬಂದಿರೋದು ಕೃಷಿ ಜೀವನ. ಆರಂಭದಲ್ಲಿಯೇ ಇಲ್ಲಿ ಆಡು ಕುರಿ ಸಾಕಣಿಕೆ ಮಾಡಿ ಅತ್ಯಂತ ಯಶಸ್ವಿಯಾಗಿದ್ದೇನೆ. ವಿಶೇಷವೆಂದರೆ ಕೋವಿಡ್ ಕಾಲಘಟ್ಟದಲ್ಲೂ ನಾನು ಮಂಗಳೂರಿನಿಂದ ಕುರಿ ಮೇಕೆಗಳನ್ನು ವಿದೇಶಗಳಿಗೆ ನಿಯಮಬದ್ಧವಾಗಿ ರಫ್ತು ಮಾಡಿದ್ದೇನೆ. ಇಲ್ಲಿ ಅತಿ ಹೆಚ್ಚಿನ ಬೇಡಿಕೆ ಇರುವ ಖಡಕ್‌ನಾಥ್, ಊರ ಕಟ್ಟದ ಕೋಳಿ, ಟರ್ಕಿ ಕೋಳಿ ಸೇರಿದಂತೆ ಎಲ್ಲ ಬಗೆಯ ಕೋಳಿ ಹಾಗೂ ಆಡು ಕುರಿ ಮಾರಾಟ ಮಾಡುತ್ತಿದ್ದೇವೆ.WhatsApp Image 2022-06-16 at 9.46.08 AM

ಹಾಗೆಯೇ ಇರಾದ ನಮ್ಮ ಫಾರ್ಮ್ ನಲ್ಲಿ ಸೀಮಿತ ದರದಲ್ಲಿ ಆರೋಗ್ಯವಂತ ಆಡು, ಕೋಳಿ, ಕುರಿಗಳನ್ನು ಮಾಂಸ ಮಾಡಿ ಗ್ರಾಹಕರ ಮನೆಗೆ ಉಚಿತವಾಗಿ ಡೆಲಿವರಿ ಮಾಡುತ್ತಿದ್ದೇನೆ. ಪ್ರತಿ ಮಂಗಳವಾರಕ್ಕೆ “ಮಟನ್ ಮಂಗಳವಾರ” ಬ್ರಾಂಡ್ ಸೃಷ್ಟಿಯಾಗಿದ್ದು ಹೆಚ್ಚಿನ ಬೇಡಿಕೆ ಇದೆ. ಒಟ್ಟಿನಲ್ಲಿ ಹಲವು ಬಗೆಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಕೃಷಿ ಬದುಕು ಸಂತೃಪ್ತವಾಗಿದೆ.

By suddi9

Leave a Reply

Your email address will not be published. Required fields are marked *