ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಕಟೀಲು ಸರಸ್ವತಿ ಸದನದಲ್ಲಿ ಶುಕ್ರವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಮೂರು ದಿನಗಳ ಕಾಲದ ವಾರ್ಷಿಕ ಕಲಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
katil makkal mela

DSC_9173

ಕಟೀಲು ದೇವಳ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಮಂಗಳೂರು ದುರ್ಗಾ ಫೆಸಿಲಿಟಿ ಸಂಸ್ಥೆಯ ನಿರ್ದೇಶಕ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರ ಶೇಖರ ಶೆಟ್ಟಿ, ಬಿ.ಕೆ ಸಂದೀಪ್, ಉದ್ಯಮಿಗಳಾದ ಬಾಬು ಎನ್. ಶೆಟ್ಟಿ, ಕಿನ್ನಿಗೋಳಿ ಬಿ.ಡಿ. ರಾಮಚಂದ್ರ ಆಚಾರ್ಯ, ನಿಲೇಶ್ ಶೆಟ್ಟಿಗಾರ್, ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು
ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರಿಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಪರ್ಯಂತ ಕರಾವಳಿಯ ೧೫ ಮಕ್ಕಳ ತೆಂಕುತಿಟ್ಟು ಯಕ್ಷಗಾನ ತಂಡಗಳು ಪ್ರದರ್ಶನ ನೀಡಲಿವೆ. ತಾ.೯ರ ಭಾನುವಾರ ಸಂಜೆ ಸಮಾರೋಪ, ಕಲಾವಿದರ ಸಂಮಾನ ನಡೆಯಲಿವೆ.

By suddi9

Leave a Reply

Your email address will not be published. Required fields are marked *