ಬಂಟ್ವಾಳ: ಇಲ್ಲಿನ ಕೃಷಿ ಇಲಾಖೆಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಒಟ್ಟು ೩೫,೩೭೪ ಮಂದಿ ಫಲಾನುಭವಿಗಳು ಇದ್ದಾರೆ.
ಈ ಪೈಕಿ ೨೬,೧೦೦ ಮಂದಿ ಕೆವೈಸಿ ನೀಡಲು ಬಾಕಿ ಇದ್ದಾರೆ. ಇದೇ ೧೫ರೊಳಗೆ ಸ್ಥಳೀಯ ಗ್ರಾಹಕ ಸೇವಾ ಕೇಂದ್ರಗಳಿಗೆ ಆಧಾರ್ ಕಾರ್ಡ್ ಸಹಿತ ತೆರಳಿ ರೈತರು ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಅಂತಿಮ ಗಡುವು ನೀಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ತಿಳಿಸಿದ್ದಾರೆ.