ಬಂಟ್ವಾಳ: ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ, ಉದ್ಯಮಿ ಟಿ.ನರಸಿಂಹ ಪೈ (೩೮) ಇವರು ಕಳೆದ ೧೫ ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತಮಿಳುನಾಡು ಮತ್ತಿತರ ಕಡೆಗೆ ತೆರಳಿ ಹಪ್ಪಳ ತಂದು ಮಾವಿನಕಟ್ಟೆ ಎಂಬಲ್ಲಿ ಪ್ಯಾಕಿಂಗ್ ಮಾಡಿ ಅಂಗಡಿಗಳಿಗೆ ಮಾರಾಟ ಮತ್ತು ಪೂಂಜ ಎಂಬಲ್ಲಿ ಗೇರು ಬೀಜ ಸಂಸ್ಕರಣೆ ಉದ್ಯಮವನ್ನೂ ನಡೆಸುತ್ತಿದ್ದರು. ಕಳೆದ ಕೊರೋನಾ ವೇಳೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಇವರು ಆ.೨೧ರಂದು ಹಾಸನಕ್ಕೆ ಹೋಗಿರ ಬರುವುದಾಗಿ ತಿಳಿಸಿ, ಪತ್ನಿಯನ್ನು ತವರು ಮನೆಗೆ ಬಿಟ್ಟು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇವರ ಬಗ್ಗೆ ಮಾಹಿತಿ ತಿಳಿದು ಬಂದರೆ ಕುಡಲೇ ಪುಂಜಾಲಕಟ್ಟೆ ಪೊಲೀಸ್ ಠಾಣೆ (೮೨೭೭೯೮೬೪೧೧)ಅಥವಾ ಜಿಲ್ಲಾ ಕಂಟ್ರೋಲ್ ರೂಂ (೦೮೨೪-೨೨೨೦೫೦೦)ಗೆ ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *