ಮೂಡುಬಿದರೆ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಾಧಿಕ ಸ್ಥಾನ ಗೆದ್ದು ಕೊಂಡ ಹಿನ್ನಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪೇಟೆಯಲ್ಲಿ ಭಾನುವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಮುಖಂಡ ಸುದರ್ಶನ್ ಎಂ. ಈ ಸಂದರ್ಭದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ನ ಭ್ರಷ್ಟ ಆಡಳಿತ ನೀತಿಯನ್ನು ಜನರು ಸಂಪೂರ್ಣವಾಗಿ ವಿರೋಧಿಸಿದ್ದಾರೆ ಎಂಬುದನ್ನು 2 ರಾಜ್ಯಗಳಲ್ಲಿನ ಫಲಿತಾಂಶ ಸಾಬೀತು ಮಾಡಿದೆ. ದೇಶವನ್ನು ಕಾಂಗ್ರೆಸ್ ಆಡಳಿತ ಮುಕ್ತವನ್ನಾಗಿಸಲು ಉತ್ತೇಜನ ನೀಡಿದೆ. ನರೇಂದ್ರ ಮೋದಿ ಆಡಳಿತ ವೈಖರಿಯನ್ನು ಜನರು ಒಪ್ಪಿದ್ದಾರೆ ಎನ್ನುವುದು ಕೂಡ ಸ್ಪಷ್ಟವಾಗಿದೆ ಎಂದರು.
ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಕೆ.ಆರ್.ಪಂಡಿತ್, ಕೆ.ಪಿ.ಸುಚರಿತ ಶೆಟ್ಟಿ, ನಾಗರಾಜ ಪೂಜಾರಿ, ಅಭಿನಂದನ್ ಬಲ್ಲಾಳ್, ಗೋಪಾಲ್ ಶೆಟ್ಟಿಗಾರ್, ಶಶಿಧರ್ ಕಲ್ಲಬೆಟ್ಟು, ವಲೇರಿಯನ್ ಕುಟಿನ್ಹಾ, ವಿಜಯ ಕೊಡಂಗಲ್ಲು, ರಂಜಿತ್ ಪೂಜಾರಿ ಝಾನ್ಸಿ ಡಿ’ಸೋಜಾ, ಲಕ್ಷ್ಮಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.