ಮೂಡುಬಿದರೆ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ರಾಜವರ್ಮ ಬಲ್ಲಾಳ್ ಅವರನ್ನು ಮೂಡುಬಿದರೆ, ಕಿನ್ನಿಗೋಳಿ ವಲಯ ಕೆನರಾ ಬಸ್ಸು ಮಾಲೀಕರ ಸಂಘದ ವತಿಯಿಂದ ಸೋಮವಾರ ರಾತ್ರಿ ನಿಶ್ಮಿತಾ ಪ್ಯಾರಡೈಸ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಜಲ್ ಆಲೀ ಖಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾರಿಗೆ ಕ್ಷೇತ್ರದಲ್ಲಿ ಸಾರ್ವಜನಿಕರು ಹಾಗೂ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಸಂಘ ಕೆನರಾ ಬಸ್ ಮಾಲೀಕರ ಸಂಘ. ರಾಜವರ್ಮ ಬಲ್ಲಾಳ್ ಅವರ ನೇತೃತ್ವದ ಸಂಘವು ಬಸ್ ಮಾಲಕರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

.ಕೆನರಾ ಬಸ್ಸು ಮಾಲೀಕರ ಸಂಘದಿಂದ ಕೆ.ರಾಜವರ್ಮ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು.
18
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ರಾಜವರ್ಮ ಬಲ್ಲಾಳ್, ಸಕರ್ಾರದ ಕೆಲವೊಂದು ನೀತಿಗಳು ಕೆನರಾ ಬಸ್ ಮಾಲೀಕರನ್ನು ಸಂಕಷ್ಟಕ್ಕೀಡು ಮಾಡಿದೆ. ಸಿಎಂ ಹಾಗೂ ಸಾರಿಗೆ ಸಚಿವರಲ್ಲಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಬೇಕು. ಸಂಘಟನಾತ್ಮಕ ಹೋರಾಟದಿಂದ ಬೇಡಿಕೆ ಈಡೇರಿಸಲು ಸಾಧ್ಯ ಎಂದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದಶರ್ಿ ಭಾಸ್ಕರ ಸಾಲ್ಯಾನ್ ಅಭಿನಂದನಾ ಭಾಷಣ ಮಾಡಿದರು. ಮೂಡುಬಿದರೆ ವಲಯ ಸಂಘದ ಗೌರವಾಧ್ಯಕ್ಷ ಎಂ.ಕೆ.ರತ್ನಾಕರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನಾರಯಣ ಪಿ.ಎಂ. ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದಶರ್ಿ ಪ್ರಕಾಶ್ ಸಪಲಿಗ ಕಾರ್ಯಕ್ರಮ ನಿರೂಪಿಸಿದರು. ಕಿನ್ನಿಗೋಳಿ ವಲಯ ಅಧ್ಯಕ್ಷ ದುಗರ್ಾ ಪ್ರಸಾದ್ ಹೆಗ್ಡೆ, ಬಸ್ ಉದ್ಯಮಿಗಳಾದ ರಾಜೇಶ್.ಕೆ.,ಮಹಮ್ಮದ್ ಲತೀಫ್ ತೋಡಾರು ಅತಿಥಿಗಳನ್ನು ಪರಿಚಯಿಸಿದರು.

 

By suddi9

Leave a Reply

Your email address will not be published. Required fields are marked *