ಮೂಡುಬಿದರೆ: ಸುಪ್ರೀಂ ಕೋಟರ್್ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ತುಳುನಾಡಿನಲ್ಲಿ ರೈತರ ಹಬ್ಬವಾದ ಕೋಣಗಳ ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣವಾಗುತ್ತದೆ. ಹಾಗಾಗಿ ಕಂಬಳವನ್ನು ನಿಷೇಧಿಸಲು ಮುಂದಾಗಿರುವ ಸರಕಾರದ ನಿಲುವನ್ನು ವಿರೋಧಿಸುವುದಾಗಿ ವಿಶ್ವ ಅಹಿಂಸಾ ಆಂದೋಲನ ಸಮಿತಿಯ ರಾಜ್ಯಾಧ್ಯಕ್ಷ ಆಲ್ವಿನ್ ವಾಲ್ಟಾರ್ ಡಿಸೋಜಾ ಹೇಳಿದ್ದಾರೆ.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಂಬಳದ ಮೂಲ ಉದ್ದೇಶ ಜೂಜು ಅಥವಾ ಹಿಂಸೆ ಅಲ್ಲ. ಆದರೆ ಕಂಬಳ ನಿಷೇಧವಾದರೆ ಓಟದ ಕೋಣಗಳನ್ನು ಕಸಾಯಿ ಖಾನೆಗೆ ಹತ್ಯೆಗೆ ಸಾಗಿಸುವ ಅಪಾಯ ಹೆಚ್ಚಿ ಹಿಂಸೆ ಉಲ್ಭಣವಾಗಬಹುದು ಎಂದವರು ಆತಂಕ ವ್ಯಕ್ತಪಡಿಸಿದರು.
ಪ್ರಾಣಿಗಳಿಗೂ ಗೌರವದಿಂದ ಬದುಕುವ ಹಕ್ಕಿದೆ ಎನ್ನುವ ಸುಪ್ರೀಂ ಕೋಟರ್ಿನ ನಿಲುವು ಅನುಸರಿಸುವುದಾದರೆ ಕಂಬಳದಲ್ಲಿ ಜೂಜಾಟ, ಹಿಂಸಾಚಾರ , ಕೋಳಿ ಅಂಕಗಳನ್ನು ನಿಷೇಧಿಸಲಿ. ಕಂಬಳಕ್ಕಾಗಿ ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಅಕಾಡೆಮಿ ರಚಿಸಿ ಪ್ರೋತ್ಸಾಹಿಸಬೇಕು. ಮರಣ ಹೊಂದಿದ ಜಾನುವಾರುಗಳನ್ನು ಚರ್ಮ ಉದ್ಯಮದ ದೃಷ್ಟಿಯಿಂದ ಸಕರ್ಾರ ಖರೀದಿಸುವ ಚಿಂತನೆ ನಡೆಸಬೇಕು. ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ವಧಮರ್ಿಯರ ಹಬ್ಬಗಳ ವೇಳೆಗೆ ಮನೆಮನೆಗೆ ಉಚಿತ ಹಾಲು ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಯಬೇಕು ಎಂದವರು ಒತ್ತಾಯಿಸಿದರು.
ಸಮಿತಿಯ ಪದಾಧಿಕಾರಿಗಳಾದ ಸೀತಾರಾಮ ಕುಲಾಲ್, ಉಮೇಶ್ ಭಟ್ ಪೆರಿಂಜೆ, ಸುಪಾಶ್ರ್ವ ಎಂ ಉಪಸ್ಥಿತರಿದ್ದರು.