ಬಂಟ್ವಾಳ:ಜಿಲ್ಲಾ ಮೂತರ್ೆದಾರರ ಸಹಕಾರಿ ಮಹಾಮಂಡಲ ವತಿಯಿಂದ ಸ್ಥಳಾಂತರಗೊಂಡ ಕಛೇರಿಯನ್ನು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರೀತಿ ಕಾಂಪ್ಲೆಕ್ಸ್ನಲ್ಲಿ ಇದೇ 23ರಂದು ಬೆಳಿಗ್ಗೆ 10. 30ಕ್ಕೆ ಉದ್ಘಾಟಿಸಲಾಗುವುದು ಎಂದು ಮಹಾಮಂಡಲ ಅಧ್ಯಕ್ಷ ಕೆ. ಸಂಜೀವ ಪೂಜಾರಿ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಕಳೆದ 1953ರಲ್ಲಿ ಅವಿಭಜಿತ ಜಿಲ್ಲೆಯಲ್ಲಿ ದಿ.ದಾಮೋದರ ಆರ್. ಸುವರ್ಣ ನೇತೃತ್ವದಲ್ಲಿ ಮಹಾಮಂಡಲ ಆರಂಭಗೊಂಡಿದ್ದು, ಕಾಸರಗೋಡು ಜಿಲ್ಲೆಗೂ ವಿಸ್ತರಿಸಿದೆ.
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮೂತರ್ೆದಾರರನ್ನು ಒಗ್ಗೂಡಿಸುವುದು, ಕುಲ ಕಸುಬನ್ನು ಉಳಿಸಿ ಬೆಳೆಸುವುದು, ವಿವಿಧ ಸವಲತ್ತುಗಳನ್ನು ಒದಗಿಸುವುವ ಉದ್ದೇಶ ಮಹಾಮಂಡಲಕ್ಕಿದೆ.
ಉಡುಪಿ ಜಿಲ್ಲೆಯಲ್ಲಿ 16, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಹೀಗೆ ಒಟ್ಟು 43 ಮೂತರ್ೆದಾರರ ಪ್ರಾಥಮಿಕ ಸಹಕಾರಿ ಸಂಘಗಳು ಸಕ್ರಿಯವಾಗಿವೆ. ಕೆಲವು ಸಂಘಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ತೊಡಗಿಕೊಂಡಿವೆ.
ಕಳೆದ 1991ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರು ಶೇಂದಿ ಉತ್ಪಾದನೆ, ಮಾರಾಟಕ್ಕೆ ಸಹಕಾರಿ ಸಂಘದ ಮೂಲಕ ಅವಕಾಶ ಕಲ್ಪಿಸಿದ್ದು ಮಹಾಮಂಡಲ ಹೋರಾಟಕ್ಕೆ ಜಯ ಸಿಕ್ಕಿದೆ.
ಇದೀಗ ಜಿಲ್ಲೆಯಲ್ಲಿ ನೀರಾ ಇಳಿಸಿ ಮಾರಾಟ ಮಾಡಲು ಮಹಾಮಂಡಲ ಪರವಾನಿಗೆ ಅಗತ್ಯವಾಗಿದೆ ಎಂದು ಹೇಳಿದ ಅವರು, ತುಂಬೆಯಲ್ಲಿ ಈಗಾಗಲೇ ಘಟಕ ಆರಂಭಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಲ ನಿಕಟಪೂರ್ವ ಅಧ್ಯಕ್ಷ ವಿಜಯ ಕುಮಾರ್ ಸೊರಕೆ ಪುತ್ತೂರು, ಉಪಾಧ್ಯಕ್ಷ ಶಿವಪ್ಪ ಸುವರ್ಣ ಮತ್ತಿತರರು ಇದ್ದರು.