ಬಂಟ್ವಾಳ : ಉಳಿಪ್ಪಾಡಿಗುತ್ತು ಸರೋಜಿನಿ ನಾಯ್ಕ್ (90) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ| ರಮೇಶ್ ನಾಯ್ಕ್ ಅವರ ಪತ್ನಿ ಸರೋಜಿನಿ ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಅ.10ರಂದು ಸೋಮವಾರ ನಿಧನರಾದರು.

ಇವರು ಪುತ್ರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇವತ್ತು 10 ಗಂಟೆಗೆ ಒಡೂರು ಫಾರ್ಮ್ ನಲ್ಲಿ ನಡೆಯಲಿದೆ .

By suddi9

Leave a Reply

Your email address will not be published. Required fields are marked *