ಕಡಬ: ಕಂಬಳಿ ಮಾರುವ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಡಬದ ಕಾಣಿಯೂರು ಸಮೀಪದ ದೋಳ್ವಾಡಿ ಎಂಬಲ್ಲಿ ನಡೆದಿದೆ.

ಮಹಿಳೆ ಕಿರುಚಾಡಿಕೊಂಡಾಗ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಳಲಿಯ ಅಡ್ಡರು ನಿವಾಸಿಗಳಾದ ರಫೀಕ್ ಹಾಗೂ ರಮಿಯಾಸುದ್ದೀನ್ ಅಪಘಾತದಲ್ಲಿ ಗಾಯಗೊಂಡವರು. ಇವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಆರೋಪಿಗಳನ್ನು ಪುತ್ತೂರಿನ ಸರ್ಕಾರಿ

ಗಾಯಗೊಂಡಿರುವ ಆರೋಪಿಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರ ಮಾಹಿತಿ ಪ್ರಕಾರ, ಮನೆ ಮನೆಗೆ ಬಟ್ಟೆ ಮಾರುವುದಾಗಿ ಹೇಳಿಕೊಂಡು ಆರೋಪಿಗಳು ಕಾಣಿಯೂರಿಗೆ ಬಂದಿದ್ದಾರೆ. ಅಲ್ಲಿಂದ ಹಲವು ಮನೆಗಳಿಗೆ ಅವರು ತೆರಳಿದ್ದು, ಬಳಿಕ ದೋಳ್ವಾಡಿ ಗ್ರಾಮಕ್ಕೂ ಬಂದಿದ್ದರು. ಅಲ್ಲಿ ಅವರು ಬಟ್ಟೆ ಮಾರುವ ನೆಪದಲ್ಲಿ ಮನೆಯೊಂದಕ್ಕೆ ತೆರಳಿದ್ದು, ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ್ದಾರೆ. ಅದಾದ ಬಳಿಕ ಓರ್ವ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಕೂಡಲೇ ಆರೋಪಿಗಳು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಮಹಿಳೆ ಕಿರುಚಿದ ಸದ್ದು ಕೇಳಿದ ಸ್ಥಳೀಯರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಆದರೆ, ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಕಾರು ಪಲ್ಟಿಯಾಗಿ ಅವಘಡ ಸಂಭವಿಸಿದೆ.

ಚಿಕ್ಕಮಗಳೂರು: ಅರಣ್ಯ ಇಲಾಖೆ ಶೌಚಾಲಯದಲ್ಲಿ ವ್ಯಕ್ತಿಯ ಶವ, ಲಾಕಪ್ ಡೆತ್ ಆರೋಪ

By suddi9

Leave a Reply

Your email address will not be published. Required fields are marked *