ಮಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ `ಕಿಸ್ ಆಫ್ ಲವ್’ ಅಭಿಯಾನವನ್ನು ಯಾವುದೇ ರೀತಿಯಲ್ಲಾದರೂ ತಡೆಯುತ್ತೇವೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.29ರಂದು ಕಿಸ್ ಆಫ್ ಲವ್ ಕಾರ್ಯಕ್ರಮದ ಮೇಲೆ ದಾಳಿ ನಡೆಸುವ ಸಲುವಾಗಿ ಬೆಂಗಳೂರು ಚಲೋ ಎಂಬ ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ೧೦೦೧ ರೂ. ಮತ್ತು ಧರ್ಮ ರಕ್ಷ ದೀಕ್ಷೆಯನ್ನು ನೀಡುವುದಾಗಿ ಸ್ವಾಮಿ ಹೇಳಿಕೊಂಡಿದ್ದಾರೆ. ತಮ್ಮ ಜೊತೆ ಕೈ ಜೋಡಿಸುವವರು ನವೆಂಬರ್ ೨೯ರಂದು ಬೆಂಗಳೂರಿನ ಎಂ.ಜಿ.ರೋಡಿಗೆ ಆಗಮಿಸುವಂತೆ ತಿಳಿಸಿದ್ದಾರೆ.

pranavananda copy

ಬೆಂಗಳೂರು ಅಭಿಯಾನ ಚಳುವಳಿಗೆ ಹಲವು ಶಾಸಕರ ಸಂಸದರ ಮತ್ತು ಹಿಂದೂ ಸಂಘಟನೆಯ ಹಿತೈಷಿಗಳ ಬೆಂಬಲವಿದ್ದು ಅವರು ಆರ್ಥಿಕ ನೆರವನ್ನು ನೀಡುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಈ ವೇಳೆ ಆ ವ್ಯಕ್ತಿಗಳ ಹೆಸರನ್ನು ಹೇಳುವಂತೆ ಪತ್ರಕರ್ತರು ಕೇಳಿದಾಗ ಅದನ್ನು ನಿರಾಕರಿಸುತ್ತ ವಿವಿಧ ಪಕ್ಷಗಳ ಹಿಂದುತ್ವದ ಬಗ್ಗೆ ಒಲವಿರುವ ೪೫ ಶಾಸಕರು ಮತ್ತು ಹನ್ನೆರಡು ಸಂಸದರು ಬೆಂಬಲ ಸೂಚಿಸಿರುವುದಾಗಿ ಹೇಳಿದರು.

ನವೆಂಬರ್ ೨೬ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸ್ವಾಮೀಜಿ ಈ ವೇಳೆ ತಿಳಿಸಿದರು.

By suddi9

Leave a Reply

Your email address will not be published. Required fields are marked *